ಮಡಿಕೇರಿ, ಏ. 14: ಚೆಟ್ಟಿಮಾನಿಯ ಕೆದಂಬಾಡಿ ಕುಟುಂಬದ ಆಶ್ರಯದಲ್ಲಿ ನಡೆಯುತ್ತಿರುವ ಗೌಡ ಜನಾಂಗ ಬಾಂಧವರ ಕೆದಂಬಾಡಿ ಕಪ್ ಟೆನ್ನಿಸ್‍ಬಾಲ್ ಕ್ರಿಕೆಟ್‍ನ ಇಂದಿನ ಪಂದ್ಯದಲ್ಲಿ ಉಳುವಾರನ ಹಾಗೂ ಪಾಣತ್ತಲೆ ತಂಡಗಳು ಮುನ್ನಡೆ ಸಾಧಿಸಿವೆ.

ಇಂದು ನಡೆದ ಪಂದ್ಯದಲ್ಲಿ ಪಾಣತ್ತಲೆ 4 ವಿಕೆಟ್‍ಗೆ 59 ರನ್ ಗಳಿಸಿದರೆ ಕೈಕೇರಿ 6 ವಿಕೆಟ್ ಕಳೆದುಕೊಂಡು 56 ರನ್ ಗಳಿಸಿ 3 ರನ್‍ಗಳ ಅಂತರದಲ್ಲಿ ಸೋಲನುಭವಿಸಿತು.

ಇಳಂದಲ ತಂಡವು 2 ವಿಕೆಟ್‍ಗೆ 23 ರನ್ ಬಾರಿಸಿದರೆ, ಕೋಡಿ 18 ರನ್‍ಗೆ ಆಲೌಟಾಯಿತು. ಅಮೆ ‘ಬಿ' ತಂಡವು 2 ವಿಕೆಟ್‍ಗೆ 100 ರನ್ ಬಾರಿಸಿದರೆ ಪಳಂಗೋಟು 6 ವಿಕೆಟ್‍ಗೆ 44 ರನ್‍ಗೆ ತೃಪ್ತಿಪಟ್ಟು ಕೊಂಡಿತು. ಇಳಂದಲ ತಂಡವು 6 ವಿಕೆಟ್‍ಗೆ 42 ರನ್ ಗಳಿಸಿದರೆ ಪಾಣತ್ತಲೆ 5 ವಿಕೆಟ್‍ಗೆ ಗುರಿಸಾಧಿಸಿ ಜಯದ ನಗೆ ಬೀರಿತು.

ಮೇರ್ಕಜೆ 6 ವಿಕೆಟ್‍ಗೆ 51 ರನ್ ಬಾರಿಸಿದರೆ ಕಾಂಗೀರ 8 ವಿಕೆಟ್‍ಗೆ 42 ರನ್ ಬಾರಿಸಿ ಸೋಲನುಭವಿಸಿತು.

ಬೊಳ್ತಜ್ಜಿರ ತಂಡವು 4 ವಿಕೆಟ್‍ಗೆ 74 ರನ್ ಬಾರಿಸಿದರೆ ಅಮೆ 5 ವಿಕೆಟ್‍ಗೆ 36 ರನ್ ಬಾರಿಸಿ ಸೋತಿತು.

ಮೆರ್ಕಜೆ 5 ವಿಕೆಟ್‍ಗೆ 62 ರನ್ ಬಾರಿಸಿದರೆ ಪಾಲಾರ್ 3 ವಿಕೆಟ್‍ಗೆ 6, ಉಳುವಾರನ 6 ವಿಕೆಟ್‍ಗೆ 40 ರನ್ ಬಾರಿಸಿದರೆ ಪಾಲಾರ್ 23 ರನ್‍ಗೆ ಆಲೌಟಾಯಿತು.