ಗೋಣಿಕೊಪ್ಪಲು, ಏ. 14: ಪೆÇನ್ನಂಪೇಟೆ ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನಾ ಘಟಕದಿಂದ ವೀರಾಜಪೇಟೆ ಹಾಗೂ ಮಡಿಕೇರಿ ಅಂಗನವಾಡಿ ಕೇಂದ್ರಗಳಿಗೆ ಉತ್ತಮ, ಗುಣಮಟ್ಟದ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಘಟಕದ ಅಧ್ಯಕ್ಷೆ ಸುಧಾ ಹಾಗೂ ಕಾರ್ಯದರ್ಶಿ ಹೆಚ್.ಎಸ್. ನೀತು ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಮಡಿಕೇರಿಯ ಆಹಾರ ಸರಬರಾಜು ಏಜೆನ್ಸಿಯೊಂದು ಜನತೆಗೆ ತಪ್ಪು ಮಾಹಿತಿ ನೀಡುವ ಮೂಲಕ ಘಟಕದ ಹಿತಾಸಕ್ತಿಗೆ ಧಕ್ಕೆ ತಂದಿದೆ ಎಂದು ಹೇಳಿದ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಕೇಂದ್ರಗಳಿಗೆ ಖರೀದಿಸಲಾಗುತ್ತಿರುವ ಆಹಾರ ಪದಾರ್ಥಗಳು ಗುಣಮಟ್ಟ ದಿಂದ ಕೂಡಿದ್ದು, ರಾಸಾಯನಿಕ ಪರೀಕ್ಷೆಗೆ ಒಳಪಡಿಸಿ ನಂತರ ಪೂರೈಸಲಾಗುತ್ತದೆ ಎಂದರು.
ಪೆÇನ್ನಂಪೇಟೆ ಮಹಿಳಾ ಮತ್ತು ಮಕ್ಕಳ ತರಬೇತಿ ಕೇಂದ್ರ ಸ್ತ್ರೀ ಶಕ್ತಿ ಸದಸ್ಯರನ್ನು ಒಳಗೊಂಡಂತೆ ಕರ್ನಾಟಕ ಸಹಕಾರಿ ಸಂಘಗಳ ನೋಂದಣಿ ಕಾಯ್ದೆ 1960 ರನ್ವಯ ಘಟಕವನ್ನು ನೋಂದಾವಣೆ ಮಾಡಿಕೊಳ್ಳಲಾಗಿದ್ದು, 22 ಮಂದಿ ಮಹಿಳೆಯರು ಘಟಕದ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ವೀರಾಜಪೇಟೆ ತಾಲೂಕು ಮತ್ತು ಮಡಿಕೇರಿ ತಾಲೂಕಿನ ಸುಮಾರು 550 ಅಂಗನವಾಡಿಗಳಿಗೆ ಮೂರು ಹಂತದಲ್ಲಿ ಪರಿಶೀಲಿಸಿ ಪೌಷ್ಟಿಕ ಆಹಾರವನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಸುಧಾ ಮಾಹಿತಿ ನೀಡಿದರು.
ಅಲ್ಲದೆ ತಮ್ಮ ಘಟಕ ಉತ್ತಮ ಆಹಾರ ಸರಬರಾಜು ಮಾಡುತ್ತಿದ್ದು, ಇಲ್ಲಿ ಯಾವದೇ ಅಧಿಕಾರಿಗಳು ಹಸ್ತಕ್ಷೇಪ ಮಾಡುತ್ತಿಲ್ಲ. ಒಟ್ಟು 22 ಮಂದಿ ಮಹಿಳೆಯರು ಪ್ರಾಮಾಣಿಕ ವಾಗಿ ಕಾರ್ಯನಿರ್ವಹಿಸುತ್ತಿದ್ದು, ಬೆಕ್ಕೆಸೊಡ್ಲೂರುವಿನಲ್ಲಿರುವ ಘಟಕವನ್ನು ಯಾರು ಬೇಕಿದ್ದರೂ ವೀಕ್ಷಣೆ ಮಾಡಬಹುದಾಗಿದೆ ಎಂದು ಸದಸ್ಯೆ ಡಯಾನ ತಿಳಿಸಿದ್ದಾರೆ.