ಭಾಗಮಂಡಲ, ಏ. 16: ಚೆಟ್ಟಿಮಾನಿಯ ಕೆದಂಬಾಡಿ ಕುಟುಂಬದ ಆಶ್ರಯದಲ್ಲಿ ನಡೆಯುತ್ತಿರುವ ಗೌಡ ಜನಾಂಗ ಬಾಂಧವರ ಕೆದಂಬಾಡಿ ಕಪ್ ಕ್ರಿಕಟ್‍ನ ಸೆಮಿಫೈನಲ್ ಪಂದ್ಯ ತಾ. 17ರಂದು (ಇಂದು) ನಡೆಯಲಿವೆ. ತಳೂರು ಹಾಗೂ ಬೇಕಲ್, ದಂಬೆಕೋಡಿ ಹಾಗೂ ಉಳುವಾರನ ತಂಡಗಳು ಸೆಮಿಫೈನಲ್‍ನಲ್ಲಿ ಸೆಣಸಲಿವೆ.
ಇಂದಿನ ಪಂದ್ಯದಲ್ಲಿ ಕೂರನ 5 ವಿಕೆಟ್‍ಗೆ 26 ರನ್ ಗಳಿಸಿದರೆ, ಬೇಕಲ್ 2 ವಿಕೆಟ್‍ಗೆ 28 ರನ್ ಗಳಿಸಿ ಜಯ ಸಾಧಿಸಿತು. ತೊತ್ತಿಯನ 5 ವಿಕೆಟ್‍ಗೆ 45 ರನ್ ಗಳಿಸಿದರೆ ಕುಂಬಳಚೇರಿ 6 ವಿಕೆಟ್‍ಗೆ 46 ರನ್ ಗಳಿಸಿ ಜಯಗಳಿಸಿತು. ನಿಡ್ಯಮಲೆ 6 ವಿಕೆಟ್‍ಗೆ 62 ರನ್ ಗಳಿಸಿದರೆ ಬೇಕಲ್ 3 ವಿಕೆಟ್‍ಗೆ 75 ರನ್ ಬಾರಿಸಿ ಜಯಗಳಿಸಿತು. ದಬ್ಬಡ್ಕ 3 ವಿಕೆಟ್‍ಗೆ 78 ರನ್ ಗಳಿಸಿದರೆ ಕೊಂಪುಳಿರ 3 ವಿಕೆಟ್‍ಗೆ 49 ರನ್ ಮಾತ್ರ ಗಳಿಸಿ ಸೋಲುಕಂಡಿತು. ಕುಂಬಳಚೇರಿ 3 ವಿಕೆಟ್‍ಗೆ 45 ರನ್ ಗಳಿಸಿದರೆ ಬೇಕಲ್ 2 ವಿಕೆಟ್‍ಗೆ 46 ರನ್ ಬಾರಿಸಿ ಜಯಗಳಿಸಿತು. ಪರ್ಲಕೋಟಿ 5 ವಿಕೆಟ್‍ಗೆ 88 ರನ್ ಗಳಿಸಿದರೆ ದಬ್ಬಡ್ಕ 33 ರನ್ ಬಾರಿಸಿ ಆಲೌಟ್ ಆಯಿತು. ಪರ್ಲಕೋಟಿ 7 ವಿಕೆಟ್‍ಗೆ 30 ರನ್ ಗಳಿಸಿದರೆ ಉಳುವಾರನ 3 ವಿಕೆಟ್‍ಗೆ 31 ರನ್ ಗಳಿಸಿ ಗೆಲುವು ಸಾಧಿಸಿತು.