ಕೂಡಿಗೆ, ಏ. 16: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊಪ್ಪಲು, ಹೆಡ್ಗಳ್ಳಿ, ಕೋಟೆ ವ್ಯಾಪ್ತಿಯ ಶ್ರೀ ದಂಡಿನಮ್ಮ, ಶ್ರೀ ಬಸವೇಶ್ವರ ಹಾಗೂ ಶ್ರೀ ಮತ್ತತ್ರಾಯ ಮತ್ತು ಗ್ರಾಮಗಳ ಸೇವಾ ಸಮಿತಿಗಳಿಂದ ಗ್ರಾಮ ದೇವತೆಯ ಹಬ್ಬ ಮತ್ತು ಜಾತ್ರೋತ್ಸವ ನಡೆಯಲಿವೆ. ತಾ. 17 ರಂದು (ಇಂದು) ಸಂಜೆ 6.30ಕ್ಕೆ ಶ್ರೀ ಬಸವೇಶ್ವರ ದೇವರ ಮೆರವಣಿಗೆ ನಡೆಯಲಿದೆ.ತಾ. 20 ರಂದು ಬೆಳಿಗ್ಗೆ 9.30 ರಿಂದ 11.45 ರವರೆಗೆ ಪುಣ್ಯಾಹ ಮತ್ತು ದಿಗ್ಭಂದನೆ ಕಾರ್ಯಕ್ರಮ, ಅಷ್ಟ ದಿಗ್ಭಂದನೆ ನಡೆಯಲಿದೆ.
ತಾ. 21 ರಂದು ಗ್ರಾಮ ದೇವತೆ ಶ್ರೀ ದಂಡಿನಮ್ಮ ತಾಯಿಯ 25ನೇ ವರ್ಷದ ವಾರ್ಷಿಕ ಪೂಜೋತ್ಸವ ನಡೆಯಲಿವೆ.
ಪೂಜೋತ್ಸವದ ಅಂಗವಾಗಿ ಬೆಳಿಗ್ಗೆ 8.30 ರಿಂದ ಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ದುರ್ಗಿ ಶಾಂತಿ ಹೋಮ, ದೇವಿಗೆ ಅಭಿಷೇಕ ಮತ್ತು 12.30 ಕ್ಕೆ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿವೆ. ಸಂಜೆ 7.30 ರಿಂದ ಕೊಂಡೋತ್ಸವ ಮತ್ತು ಮಧ್ಯರಾತ್ರಿ 2.30 ರಿಂದ ಉಯ್ಯಾಲೆ ಮಹೋತ್ಸವ ಕಾರ್ಯಕ್ರಮ ನಡೆಯಲಿವೆ.
ತಾ. 22 ರಂದು ಬೆಳಿಗ್ಗೆ ಗಂಟೆಯಿಂದ ಶ್ರೀ ದಂಡಿನಮ್ಮ ಪೂಜಾ ಕಾರ್ಯಕ್ರಮ ಪ್ರಾರಂಭವಾಗಿ ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ, ರಾತ್ರಿ ಶ್ರೀಮತ್ತತ್ರಾಯ ಹರಿಸೇವೆ ನಡೆಯಲಿವೆ ಎಂದು ದೇವಾಲಯ ಸಮಿತಿಯ ಪ್ರಕಟಣೆ ತಿಳಿಸಿದೆ.