ಮಡಿಕೇರಿ, ಏ. 16: ಸೂರ್ಲಬ್ಬಿ ನಾಡಿನ ಐತಿಹಾಸಿಕ ಶ್ರೀ ಕಾಳತಮ್ಮೆ ಹಾಗೂ ಕ್ಷೇತ್ರಪಾಲ ದೇವರ ವಾರ್ಷಿಕ ಉತ್ಸವವು ತಾ. 17 ಮತ್ತು 18 ರಂದು ಜರುಗಲಿದೆ. ಸೋಮವಾರ ಬೆಳಿಗ್ಗೆ ವಿಶೇಷ ಪೂಜೆ ನೆರವೇರಲಿದ್ದು, ಮಂಗಳವಾರ ಬೆಳಗ್ಗಿನ ಜಾವ ವಾರ್ಷಿಕ ಮಹೋತ್ಸವ ನಡೆಯಲಿದೆ. ಬೆಳಗ್ಗಿನ ಜಾವ ಉಷಾ ಪೂಜೆಯೊಂದಿಗೆ ಹರಿಕೆ ಕಾಣಿಕೆ ಸಲ್ಲಿಸಲಾಗುವದು. ಅನಂತರ ತೆಂಗೆ ಪೋರ್ ಸಹಿತ ರಾತ್ರಿ ಕ್ಷೇತ್ರಪಾಲನಿಗೆ ಬಲಿ ಸೇವೆ ಜರುಗಲಿದೆ. ತಾ. 19 ರಂದು ಗೌಡಂಡ ತಕ್ಕರ ಮನೆಯಲ್ಲಿ ಭಂಡಾರ ಹಿಂತೆರಳಿ ಇಡುವದರೊಂದಿಗೆ ವಾರ್ಷಿಕ ಉತ್ಸವಕ್ಕೆ ತೆರೆ ಬೀಳಲಿದೆ. ತಾ. 11 ರಿಂದ ವಾರ್ಷಿಕ ಜಾತ್ರೆ ಸಲುವಾಗಿ ನಾಡಿನವರಿಂದ ನಿತ್ಯ ಬೆಳಗ್ಗಿನ ಜಾವ ದುಡಿಪಾಟ್ ಸಹಿತ ಬೊಳಕಾಟ್ ಇಲ್ಲಿನ ವಿಶೇಷತೆಯಾಗಿದೆ.