ಶನಿವಾರಸಂತೆ, ಏ. 16: ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಪಾಲಪುರ ಗ್ರಾಮದ ಬನಶಂಕರಿ ಅಮ್ಮನವರ 19ನೇ ವರ್ಷದ ವಾರ್ಷಿಕ ಮಹೋತ್ಸವ ಹಾಗೂ ಶಿಖರ ಕಲಶ ಪುನರ್ ಪ್ರತಿಷ್ಠಾಪನಾ ಮಹೋತ್ಸವ ತಾ. 18 ಮತ್ತು 19 ರಂದು ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ತಾ. 18 ರಂದು ಬೆಳಿಗ್ಗೆ 8 ಗಂಟೆಗೆ ಮಹಾಗಣಪತಿ ಪೂಜೆ, ಶ್ರೀ ವೀರಭದ್ರೇಶ್ವರ ಪೂಜಾ ಪೂರ್ವಕವಾಗಿ ಅಮ್ಮನವರಿಗೆ ಫಲ ಪಂಚಾವೃತ ಸ್ನಾನ, ದುರ್ಗಾ ಸೂಕ್ತ, ದೇವಿ ಸೂಕ್ತ, ಅಭಿಷೇಕ, ವಸ್ತ್ರಾಲಂಕಾರ, ಪುಷ್ಪಾಲಂಕಾರ ಸೇವೆ ಹಾಗೂ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಿರುತ್ತದೆ. 10.30 ಗಂಟೆಯಿಂದ ಭಕ್ತಾದಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸಂಜೆ 4 ಗಂಟೆಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಪೂಜೆ, ಪುಣ್ಯಾಹ, ದೇವಿನಾಂದಿ, ನವಗ್ರಹ ಪೂಜೆ, ಕಲಶ ಪ್ರತಿಷ್ಠ, ಆದಿವಾಸ ಹೋಮಗಳು, ದುರ್ಗಾ ಹೋಮ, ರಾತ್ರಿ 8 ಗಂಟೆಗೆ ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ, ರಾತ್ರಿ ಇಡೀ ಸುಗ್ಗಿ ಕುಣಿತ ಕಾರ್ಯಕ್ರಮವಿರುತ್ತದೆ.
ತಾ. 19 ರಂದು ಬೆಳಿಗ್ಗೆ 4.30 ಗಂಟೆಗೆ ಮಹಾಗಣಪತಿ ಪೂಜೆಯ ನಂತರ ಉತ್ಸವ ಮೂರ್ತಿಯನ್ನು ಗಂಗಾಸ್ನಾನಕ್ಕೆ ಮೆರವಣಿಗೆಯಲ್ಲಿ ಕರೆತಂದು 48 ಕಲಶಗಳೊಂದಿಗೆ ಶ್ರೀ ದೇವಿಗೆ ಗಂಗಾಸ್ನಾನ ತದ ನಂತರ ವೀರಗಾಸೆ ನೃತ್ಯ, ವಾದ್ಯದೊಂದಿಗೆ ಊರಿನ ಮುಖ್ಯ ಬೀದಿಗಳಲ್ಲಿ ಅಲಂಕೃತ ಮಂಟಪದಲ್ಲಿ ಮೆರವಣಿಗೆ ಹೊರಡುವದು. ಬೆಳಿಗ್ಗೆ 9 ಗಂಟೆಗೆ ಕೆಂಡೋತ್ಸವದ ನಂತರ ದೇವಾಲಯ ಪ್ರವೇಶ, ಹವನ 9.30ಕ್ಕೆÉ ವೃಷಭ ಲಗ್ನದಲ್ಲಿ ಶಿಖರ ಪುನರ್ ಪ್ರತಿಷ್ಠಾಪನೆ, ಪ್ರತಿಷ್ಠಾಂಗ ಹೋಮ, ಕುಂಭಾಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆಯುತ್ತದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.