ನಾಪೆÇೀಕ್ಲು, ಏ. 17: ನಾಲಡಿ ‘ಇಗ್ಗುತ್ತಪ್ಪ ಬಳಗ’ದ ವತಿಯಿಂದ ನಾಲಡಿ ಗ್ರಾಮದಲ್ಲಿ ಅಂತರ ಗ್ರಾಮ ಕ್ರೀಡಾಕೂಟ ವಿಜೃಂಭಣೆಯಿಂದ ನಡೆಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಿ.ಕೆ.ರವಿ ಸುಬ್ರಮಣಿ ವಹಿಸಿದ್ದರು. ಪ್ರಧಾನ ಭಾಷಣಕಾರರಾಗಿ ಕಾರುಗುಂದ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಕೋಡಿಮಣಿಯಂಡ ಉಮಾ ಬಿದ್ದಯ್ಯ ಪಾಲ್ಗೊಂಡಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಡಿವೈಎಸ್ಪಿ ಬಿ. ರಾಜಾ ಸೋಮಣ್ಣ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಕುಂಜಿಲ - ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ, ಭಾಗ್ಯ, ಬೋಜಕ್ಕಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕ, ಬರಹಗಾರ, ಶತಾಯುಷಿ ಪರದಂಡ ಚಂಗಪ್ಪ ಅವರನ್ನು ಸನ್ಮಾನಿಸಲಾಯಿತು. ಕುಡಿಯ ಜನಾಂಗದಿಂದ ಉರುಟ್ಟಿ ಕೊಟ್ಟ್ ಆಟ್ ಪ್ರದರ್ಶನ ಜನರ ಮೆಚ್ಚುಗೆಗೆ ಪಾತ್ರವಾಯಿತು.