ಸುಂಟಿಕೊಪ್ಪ, ಏ.17: ಇಲ್ಲಿಗೆ ಸಮೀಪದ ನಾಕೂರು ಗ್ರಾಮದ ಶ್ರೀ ಈಶ್ವರ, ಶ್ರೀ ಮಹಾಗಣಪತಿ, ಶ್ರೀದುರ್ಗಾದೇವಿ, ಶ್ರೀ ವೀರಭದ್ರಸ್ವಾಮಿ, ದಂಡಿನ ಮಾರಿಯಮ್ಮ, ಶ್ರೀ ಮಾಸ್ತಿಯಮ್ಮ, ಶ್ರೀ ಗ್ರಾಮದೇವತೆ ಹಾಗೂ ಬೆಳ್ಳಾರಿಕಮ್ಮ ದೇವರುಗಳ ವಾರ್ಷಿಕ ಮಹಾಪೂಜೆ ತಾ.20 ರಿಂದ 26 ರವರೆಗೆ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ತಾ. 20 ರಂದು ಬೆಳಿಗ್ಗೆ 9 ಗಂಟೆಗೆ ಗ್ರಾಮ ದೇವತೆ ಪೂಜೆ, ತಾ.21 ರಂದು ಸಂಜೆ 4 ಗಂಟೆಗೆ ಹಸಿರುವಾಣಿ, ಉಗ್ರಾಣ ತುಂಬಿಸುವ ಕಾರ್ಯಕ್ರಮವಿದ್ದು, ಗ್ರಾಮದ ಭಕ್ತಾಧಿಗಳು ತಮ್ಮ ಜಮೀನಿನಲ್ಲಿ ಬೆಳೆದ ಕಾಫಿ, ಭತ್ತ, ಕರಿಮೆಣಸು, ಏಲಕ್ಕಿ, ಎಳನೀರು, ಅಡಿಕೆಗೊನೆ, ಅಡಿಕೆ ಹಿಂಗಾರ, ಬಾಳೆಗೊನೆ, ಗಂಧದ ತುಂಡು, ತರಕಾರಿ ತೆಂಗಿನಕಾಯಿ, ದವಸ ಧಾನ್ಯಗಳೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಉಗ್ರಾಣ ತುಂಬಿಸಿಕೊಡಲು ಕೋರಲಾಗಿದೆ.

ಸಂಜೆ 6 ಗಂಟೆಗೆ ತಂತ್ರಿಗಳ ಆಗಮನ 7ಕ್ಕೆ ಶ್ರೀ ಈಶ್ವರ ದೇವಸ್ಥಾನದಲ್ಲಿ ನಿತ್ಯಪೂಜೆ, ದೇವರಿಗೆ ಫಲನ್ಯಾಸ, ಸಾರ್ವಜನಿಕ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ರಾತ್ರಿ 8.30ಕ್ಕೆ ಮಹಾಪೂಜೆ ತೀರ್ಥ ಪ್ರಸಾದ ವಿತರಣೆ.

ತಾ. 22 ರಂದು ಬೆಳಿಗ್ಗೆ 7ಕ್ಕೆ ದೇವರ ಉತ್ಸವ, ಬಲಿ ಹೊರಡುವದು ಮಧ್ಯಾಹ್ನ 12.30 ಗಂಟೆಗೆ ವಾರ್ಷಿಕ ವಿಶೇಷ ಪೂಜೆ, ಮಹಾ ಮಂಗಳಾರತಿ ತೀರ್ಥ ಪ್ರಸಾದ, ಸಂಜೆ 5 ಗಂಟೆಗೆ ದೇವರ ಚೂಚಂಬಲಿ, ರಾತ್ರಿ 7 ಗಂಟೆಗೆ ಮಹಾಪೂಜೆ, ತಾ. 23 ರಂದು ಬೆಳಿಗ್ಗೆ ದೇವರ ನೃತ್ಯ ಬಲಿ, ದೇವರ ಪೂಜೆ, ಗಣಹೋಮ, ದೇವರ ಮಹಾ ಮಂಗಳಾರತಿ, ತೀರ್ಥ ಪ್ರಸಾದ, ಸಂಜೆ 4 ಗಂಟೆಗೆ ನೆರಪು ಬಲಿ, ರಾತ್ರಿ ಶ್ರೀ ದುರ್ಗಾಪೂಜೆ.

ತಾ. 24 ರಂದು ಬೆಳಿಗ್ಗೆ 7 ಗಂಟೆಗೆ ಶ್ರೀ ಈಶ್ವರ ದೇವಸ್ಥಾನದಲ್ಲಿ ಗಣಹೋಮ, 9 ಗಂಟೆಗೆ ಶ್ರೀ ಬೆಳ್ಳಾರಿಕಮ್ಮ ದೇವರಪೂಜೆ, 10.30 ಕ್ಕೆ ಶತರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ, ಸಂಜೆ 4 ಗಂಟೆಗೆ ದೇವರ ಜಳಕ, ಸಂಜೆ 5ಕ್ಕೆ ಶ್ರೀ ಮಾಸ್ತಿಯಮ್ಮ, ದೇವರ ಪೂಜೆ, ರಾತ್ರಿ 7.30ಕ್ಕೆ ದೇವರ ನೃತ್ಯ ಬಲಿ ಗಂಧಪ್ರಸಾದ ವಿತರಣೆ, ರಾತ್ರಿ ಅನ್ನ ಸಂತರ್ಪಣೆ.

ತಾ. 25 ರಂದು ಬೆಳಿಗ್ಗೆ 7 ಗಂಟೆಗೆ ಶ್ರೀ ದಂಡಿನ ಮಾರಿಯಮ್ಮ ದೇವರಿಗೆ ಶುದ್ಧ ಕ¯ಶಾಭಿಷೇಕ, ಮಹಾಪೂಜೆ, ಮಂತ್ರಾಕ್ಷತೆ, ಮಹಾಪೂಜೆ, ಮಧ್ಯಾಹ್ನ 1ಕ್ಕೆ ಶ್ರೀ ಮಾರಿಯಮ್ಮ ದೇವರ ಗಂಗಾಸ್ನಾನ ಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ.

ತಾ.26 ರಂದು ಬೆಳಿಗ್ಗೆ ಶ್ರೀ ದಂಡಿನ ಮಾರಿಯಮ್ಮ, ದೇವರಿಗೆ ಹರಕೆ ಸಲ್ಲಿಸಲಾಗುವದೆಂದು ಆಡಳಿತ ಮಂಡಳಿ ತಿಳಿಸಿದೆ.