ನಾಪೋಕ್ಲು, ಏ. 17: ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾಟ ಇಡೀ ವಿಶ್ವದ ಗಮನ ಸೆಳೆದಿದೆ. ಈ ಪಂದ್ಯಾಟದ ಸಂದರ್ಭ ಸಣ್ಣ ಪುಟ್ಟ ವಿಚಾರ - ಲೋಪಗಳನ್ನು ಬದಿಗೊತ್ತಿ ಇದನ್ನು ಉತ್ಸವದ ರೀತಿಯಲ್ಲೇ ಮುಂದುವರಿಸಬೇಕೆಂದು ಹಾಕಿ ಕರ್ನಾಟಕದ ಕಾರ್ಯದರ್ಶಿ ಮಾಜಿ ಒಲಂಪಿಯನ್ ಡಾ|| ಅಂಜಪರವಂಡ ಬಿ. ಸುಬ್ಬಯ್ಯ ಅವರು ಸಲಹೆ ನೀಡಿದರು.ನಾಪೋಕ್ಲುವಿನಲ್ಲಿ ಇಂದು ಆರಂಭಗೊಂಡ ಬಿದ್ದಾಟಂಡ ಕಪ್ ಹಾಕಿ ಉತ್ಸವದ ಸಭಾ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಾಕಿ ಉತ್ಸವ ಆಯೋಜಿಸುವದು ಸುಲಭ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಅವರು ಕ್ರೀಡಾ ಸ್ಫೂರ್ತಿಯಿಂದ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿದ್ದ ಮಾಜಿ ಸಚಿವ ಯಂ.ಸಿ. ನಾಣಯ್ಯ ಅವರು ಮಾತನಾಡಿ,

(ಮೊದಲ ಪುಟದಿಂದ) ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಕಾಣುತ್ತಿದೆ. ಶಾಶ್ವತ ಮೈದಾನ, ಗ್ಯಾಲರಿ ನಿರ್ಮಿಸಿ ಉತ್ಸವ ಆಚರಿಸಿದರೆ, ಖರ್ಚು ಕಡಿಮೆ ಯಾಗಲಿದೆ. ಈ ನಿಟ್ಟಿನಲ್ಲಿ ಚಿಂತನೆ ಅಗತ್ಯ ಎಂದರು. ಸರಕಾರದಿಂದ ಕ್ರೀಡಾ ಇಲಾಖೆ ಮೂಲಕ ರೂ. 75 ಲಕ್ಷ ಅನುದಾನ ನೀಡುವಂತಾಗ ಬೇಕೆಂದರು.

ಜಿಲ್ಲೆಯ ಜನಪ್ರತಿನಿಧಿಗಳಾದ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ. ಬೋಪಯ್ಯ, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಅವರುಗಳು ಉತ್ಸವಕ್ಕೆ ಶುಭ ಕೋರಿ ಮಾತನಾಡಿದರು.

ಬಿದ್ದಾಟಂಡ ಕಪ್ ಹಾಕಿ ಉತ್ಸವ ಸಮಿತಿ ಪ್ರಮುಖ ಬಿ.ಎಸ್. ತಮ್ಮಯ್ಯ ಮಾತನಾಡಿ, ಇದು ಹಾಕಿ ಪಂದ್ಯಾಟ ಮಾತ್ರವಲ್ಲ. ಉತ್ಸವ ಎಂಬದು ಎಲ್ಲರ ಮನದಲ್ಲಿರಲಿ. ಸಹೋದರತ್ವದಿಂದ ಉತ್ಸವದ ಯಶಸ್ಸಿಗೆ ಸಹಕರಿಸುವಂತೆ ಕೋರಿದರು.

ವೇದಿಕೆಯಲ್ಲಿ ಬಿದ್ದಾಟಂಡ ಕುಟುಂಬದ ಪಟ್ಟೆದಾರ ಪ್ರೊ|| ಬಿ.ಸಿ. ಪೊನ್ನಪ್ಪ, ಹಾಕಿ ಉತ್ಸವದ ಜನಕ ಪಾಂಡಂಡ ಕುಟ್ಟಪ್ಪ, ಹಾಕಿ ಕೂರ್ಗ್ ಅಧ್ಯಕ್ಷ ಪೈಕೆರ ಕಾಳಯ್ಯ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ, ಪ್ರಮುಖರಾದ ಬೊಟ್ಟೋಳಂಡ ಮಿಟ್ಟು ಚಂಗಪ್ಪ, ಚೇಂದಂಡ ಜಮ್ಸಿ ಪೊನ್ನಪ್ಪ, ಬಿದ್ದಾಟಂಡ ದೀಪಕ್ ತಿಮ್ಮಯ್ಯ, ಉತ್ಸವ ಸಮಿತಿ ಅಧ್ಯಕ್ಷ ರಮೇಶ್ ಚಂಗಪ್ಪ, ಕದ್ದಣಿಯಂಡ ಹರೀಶ್ ಬೋಪಣ್ಣ, ಜಿ.ಪಂ. ಸದಸ್ಯ ಪಾಡಿಯಮ್ಮಂಡ ಮುರಳಿ, ಗ್ರಾ.ಪಂ. ಅಧ್ಯಕ್ಷ ಇಸ್ಮಾಯಿಲ್, ಕೂರ್ಗ್ ರೆಜಿಮೆಂಟ್‍ನ ಕರ್ನಲ್ ಚಟರ್ಜಿ ಮತ್ತಿತರರು ಉಪಸ್ಥಿತರಿದ್ದರು.

ಪಳಂಗಂಡ ಕಾವ್ಯ ಕಾವೇರಮ್ಮ, ನೆಲ್ಲಮಕ್ಕಡ ಸಾಗರ್, ಬೊಟ್ಟೋಳಂಡ ಆಶಿತಾ ಬೋಪಣ್ಣ ಪ್ರಾರ್ಥಿಸಿದರು. ರಮೇಶ್ ಚಂಗಪ್ಪ ಸ್ವಾಗತಿಸಿ, ಬಿದ್ದಾಟಂಡ ಬೆಲ್ಲು ಬೆಳ್ಯಪ್ಪ ವಂದಿಸಿದರು. ಚೆಪ್ಪುಡಿರ ಕಾರ್ಯಪ್ಪ, ಮಾಳೇಟಿರ ಶ್ರೀನಿವಾಸ್, ಮಾದೇಟಿರ ಬೆಳ್ಯಪ್ಪ ಹಾಗೂ ಅಂಜಪರವಂಡ ಬೊಳ್ಳಮ್ಮ ವೀಕ್ಷಕ ವಿವರಣೆ ನೀಡಿದರು.