ಮಡಿಕೇರಿ, ಏ. 17: ಪ್ರಜಾಸತ್ಯ ಪತ್ರಿಕೆಯ ವತಿಯಿಂದ ತಾ. 19ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಗರದ ಹೊಟೇಲ್ ವ್ಯಾಲಿವ್ಯೂ ಸಭಾಂಗಣದಲ್ಲಿ ಮಾಧ್ಯಮ ಕಾರ್ಯಾಗಾರ ಆಯೋಜಿಸಲಾಗಿದೆ.ವಾರ್ತಾಧಿಕಾರಿ ಚಿನ್ನಸ್ವಾಮಿ ಉದ್ಘಾಟನೆ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಪತ್ರಿಕೆಯ ಸಂಪಾದಕರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ಸಿ. ನವೀನ್ ಕುಮಾರ್ ವಹಿಸಲಿದ್ದಾರೆ.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶಕ್ತಿ ದಿನಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ‘ಇಂದಿನ ಪತ್ರಿಕೋದ್ಯಮದ ಸವಾಲುಗಳು’, ಕಾವೇರಿ ಟೈಮ್ಸ್ ಸಂಪಾದಕ ಬಿ.ಸಿ. ನಂಜಪ್ಪ ‘ಸಾಮಾಜಿಕ ಹೋರಾಟಗಳು ಮತ್ತು ಪತ್ರಿಕೆಗಳು’, ವಿಜಯವಾಣಿ ಜಿಲ್ಲಾ ವರದಿಗಾರ ಎ.ಆರ್. ಕುಟ್ಟಪ್ಪ ‘ರಾಜಕೀಯ ಬೆಳವಣಿಗೆಗಳ ವಿಶ್ಲೇಷಣೆ ಮತ್ತು ಅದರ ಸವಾಲುಗಳು’, ಸಂಯುಕ್ತ ಕರ್ನಾಟಕ ವರದಿಗಾರ ಎಸ್.ಜಿ. ಉಮೇಶ್ ‘ವೃತ್ತಿಯಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವದು ಹೇಗೆ’, ಟಿವಿ 9 ವರದಿಗಾರ ಮಂಜುನಾಥ್ ‘ಮಾನನಷ್ಟ ಮೊಕದ್ದಮೆಯನ್ನು ಎದುರಿಸುವದು ಹೇಗೆ’, ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್ ವರದಿಗಾರ ಕೆ.ಎ. ಆದಿತ್ಯ ‘ಸುದ್ದಿಮನೆಯ ಸವಾಲುಗಳು’, ದಿಗ್ವಿಜಯ ಟಿ.ವಿ. ವಾಹಿನಿಯ ವರದಿಗಾರ ಕಿಶೋರ್ ರೈ ‘ಪತ್ರಿಕೋದ್ಯಮದಿಂದ ವಿಮುಖರಾಗುತ್ತಿರುವ ಯುವ ಜನಾಂಗ’, ವಾರ್ತಾಧಿಕಾರಿ ಚಿನ್ನಸ್ವಾಮಿ ‘ಸರ್ಕಾರದ ಕಾರ್ಯಕ್ರಮಗಳು ಮತ್ತು ಪತ್ರಿಕೆಗಳು’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ.