ಗೋಣಿಕೊಪ್ಪಲು, ಏ. 18: ಸ್ನಾನ ಮಾಡಲೆಂದು ಕೆರೆಗೆ ತೆರಳಿದ ಸಂದರ್ಭ ಕಾಲು ಜಾರಿಬಿದ್ದು ಸಾವನ್ನಪ್ಪಿದ ಘಟನೆ ಪೆÇನ್ನಂಪೇಟೆ ಪೆÇಲೀಸ್ ಠಾಣಾ ವ್ಯಾಪ್ತಿಯ ನಲ್ಲೂರು ಗ್ರಾಮದಲ್ಲಿ ನಡೆದಿದೆ.
ಮೂಲತಃ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಬೇಗೂರು ಹೋಬಳಿ ನಿಟ್ರೆ ಗ್ರಾಮದ ನಿವಾಸಿ ಬಸವಶೆಟ್ಟಿ (48) ಮೃತ ದುರ್ದೈವಿ.
ಗುಂಡ್ಲುಪೇಟೆಯ ಮೇಸ್ತ್ರಿ ವೆಂಕಟೇಶ್ ಎಂಬವರ ಮೂಲಕ ಕೂಲಿಕಾರ್ಮಿಕನಾಗಿ ತನ್ನ ಪತ್ನಿ ನಾಗಮ್ಮ ಹಾಗೂ ಪುತ್ರಿಯೊಂದಿಗೆ ತಾ.10 ರಂದು ನಲ್ಲೂರು ಗ್ರಾಮಕ್ಕೆ ಬಂದು ಅಲ್ಲಿನ ಸೇತುವೆ ಸಮೀಪ ಟೆಂಟ್ ಹಾಕಿಕೊಂಡು ವಾಸವಿದ್ದರು ಎನ್ನಲಾಗಿದೆ.
ತಾ.16ರಂದು ಬೆಳಿಗ್ಗೆ ಪತ್ನಿ ನಾಗಮ್ಮ ಹಾಗೂ ಮಗಳು ಬಟ್ಟೆ ಒಗೆಯುತ್ತಿದ್ದ ಸಂದರ್ಭ ಸ್ನಾನಕ್ಕೆಂದು ಸಮೀಪದ ಪುಳ್ಳಂಗಡ ನರೇಂದ್ರ ಅವರ ಕೆರೆಗೆ ತೆರಳಿದ ಬಸವಶೆಟ್ಟಿ ಕಾಲುಜಾರಿ ಕೆರೆಗೆ ಬಿದ್ದರೆನ್ನಲಾಗಿದೆ. ಕೆಸರಿನಲ್ಲಿ ದೇಹ ಹೂತು ಹೋದ ಹಿನ್ನೆಲೆ ಗ್ರಾಮಸ್ಥರು ಬಸವಶೆಟ್ಟಿಯನ್ನು ಬದುಕಿಸುವ ಯತ್ನ ಕೈಗೂಡಲಿಲ್ಲವೆನ್ನಲಾಗಿದೆ.
ಗೋಣಿಕೊಪ್ಪಲು ಅಗ್ನಿಶಾಮಕ ದಳದ ಪ್ರಯತ್ನದಿಂದ ಮುಳುಗಡೆಯಾದ ಮೃತದೇಹವನ್ನು ತಾ.17 ರಂದು ಸಿಬ್ಬಂದಿಗಳು ಪಾತಾಳ ಗರಡಿ ಬಳಸಿ ಹೊರತೆಗೆಯಲಾಯಿತು ಎಂದು ಪೆÇಲೀಸ್ ಮೂಲಗಳು ತಿಳಿಸಿದೆ.