ಮಡಿಕೇರಿ, ಏ. 19: ಹತ್ತು ಕುಟುಂಬ ಹದಿನೆಂಟು ಗೋತ್ರದ ಅರೆಭಾಷಿಕ ಗೌಡ ಜನಾಂಗದ ಮಧ್ಯೆ ನಡೆಯುವ ಕ್ರಿಕೆಟ್ ಜಂಬರ ಪೈಕೇರ ಕಪ್ ಕ್ರಿಕೆಟ್ - 2017ಕ್ಕೆ ತಾ. 21ರಂದು ಚಾಲನೆ ದೊರಕಲಿದೆ.
ಕೊಡಗು ಗೌಡ ಯುವ ವೇದಿಕೆ ವತಿಯಿಂದ 18ನೇ ವರ್ಷದ ಕ್ರಿಕೆಟ್ ಹಬ್ಬದಲ್ಲಿ ಈ ಬಾರಿ 210 ಕುಟುಂಬ ತಂಡಗಳು ಸೆಣಸಾಡಲಿದ್ದು, ಮಡಿಕೇರಿಯ ಜ. ತಿಮ್ಮಯ್ಯ ಕ್ರೀಡಾಂಗಣ ತಯಾರಾಗಿ ನಿಂತಿದೆ.
ತಾ. 21ರಿಂದ ಮೇ 7ರವರೆಗೆ 17 ದಿನಗಳ ಕಾಲ ನಡೆಯುವ ಪಂದ್ಯಾವಳಿಗೆ ಯುವ ವೇದಿಕೆ ಹಾಗೂ ಪೈಕೇರ ಕುಟುಂಬಸ್ಥರು ಸಕಲ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಮೈದಾನ ಕಾಮಗಾರಿಗೆ ಭೂಮಿ ಪೂಜೆ
ಪೈಕೇರ ಕ್ರಿಕೆಟ್ ಕಪ್ ಪಂದ್ಯಾವಳಿ ಆಯೋಜಿತಗೊಂಡಿರುವ ಮಡಿಕೇರಿಯ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿಂದು ಮೈದಾನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ವೇದಿಕೆ, ಮೈದಾನ, ಗ್ಯಾಲರಿ ನಿರ್ಮಾಣ ಕಾರ್ಯಕ್ಕೆ ವಿಜಯ ವಿನಾಯಕ ದೇವಾಲಯದ ಪ್ರಧಾನ ಅರ್ಚಕ ಕೃಷ್ಣ ಉಪಾಧ್ಯಾಯ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪೈಕೇರ ಕುಟುಂಬದ ಪಟ್ಟೆದಾರ ನಂಜುಂಡ, ಕ್ರಿಕೆಟ್ ಸಮಿತಿ ಅಧ್ಯಕ್ಷ ಅನಂತ್‍ರಾಂ, ಕಾರ್ಯದರ್ಶಿ ಮಾಚಯ್ಯ, ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಉಪಾಧ್ಯಕ್ಷ ಪಾಣತ್ತಲೆ ಜಗದೀಶ್, ಕಾರ್ಯದರ್ಶಿ ಕಟ್ಟೆಮನೆ ರೋಶನ್, ಖಜಾಂಚಿ ನೈಯ್ಯಣಿ ಸಂಜು, ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಆಹಾರ ಸಮಿತಿ ಅಧ್ಯಕ್ಷ ಪರಿಚನ ಸತೀಶ್, ನಿರ್ದೇಶಕರು, ಸದಸ್ಯರುಗಳು, ಪೈಕೇರಿ ಕುಟುಂಬಸ್ಥರು ಇದ್ದರು.
ಉದ್ಘಾಟನೆ
ಸುದ್ದಿಗೋಷ್ಠಿಯಲ್ಲ್ಲಿ ಕ್ರಿಕೆಟ್ ಹಬ್ಬದ ಕುರಿತು ಮಾಹಿತಿ ನೀಡಿದ ಕೊಡಗು ಗೌಡ ಯುವ ವೇದಿಕೆಯ ಪ್ರಚಾರ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಅವರು, ಕಳೆದ ಬಾರಿ ನಡೆದ ಕುಟ್ಟನ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 180 ತಂಡಗಳು ಭಾಗವಹಿಸಿದ್ದರೆ, ಈ ಬಾರಿ ಅತ್ಯಲ್ಪ ಸಮಯದಲ್ಲಿ 210 ಕುಟುಂಬ ತಂಡಗಳು ನೋಂದಣಿ ಮಾಡಿಕೊಂಡಿವೆ ಎಂದು ಹರ್ಷ ವ್ಯಕ್ತಪಡಿಸಿದರು.
ಪಂದ್ಯಾವಳಿಗಾಗಿ ಕೊಡಗು ಗೌಡ ಯುವ ವೇದಿಕೆ ಹಾಗೂ ಪೈಕೇರ ಕುಟುಂಬಸ್ಥರು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಾವಳಿಗೆ ತಾ.21ರ ಪೂರ್ವಾಹ್ನ 11 ಗಂಟೆಗೆ ಆದಿಚುಂಚನಗಿರಿ ಹಾಸನ-ಕೊಡಗು ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಕ್ರೀಡಾಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮವನ್ನು ಕೇಂದ್ರ ಯೋಜನಾ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಉದ್ಘಾಟಿಸಲಿದ್ದು, ಕ್ರೀಡಾಕೂಟವನ್ನು ಮಾಜಿ
ಮಡಿಕೇರಿ, ಏ.19 : ರೋಟರಿ ಮಿಸ್ಟಿ ಹಿಲ್ಸ್, ಆರೋಗ್ಯ ಸೇವಾ ಘಟಕ ಸ್ವರ್ಣ ಕ್ಲಿನಿಕ್, ಹಿಂದೂ ಸುಧಾರಣಾ ಸಮಿತಿಯ ವತಿಯಿಂದ ತಾ. 21 ರಂದು ನೆಲ್ಯಹುದಿಕೇರಿಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಟರಿ ಮಿಸ್ಟಿ ಹಿಲ್ಸ್‍ನ ಕಾರ್ಯದರ್ಶಿ ಡಾ| ಎನ್.ಎಸ್. ನವೀನ್ ಶಿಬಿರದ ಕುರಿತು ಮಾಹಿತಿ ನೀಡಿದರು. ಸುಳ್ಯದ ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಕೆವಿಜಿ ಆಯುರ್ವೇದ ಮಹಾ ವಿದ್ಯಾಲಯದ ಸಹಯೋಗ ದೊಂದಿಗೆ ಬೆಳಿಗ್ಗೆ 9 ಗಂಟೆಯಿಂದ 2 ಗಂಟೆಯವರೆಗೆ ನೆಲ್ಯಹುದಿಕೇರಿಯ ಮುತ್ತಪ್ಪ ಸಭಾಂಗಣ ಹಾಗೂ ಆಂಗ್ಲೋ ವರ್ನಾಕ್ಯುಲರ್ ಶಾಲಾ ಆವರಣದಲ್ಲಿ ಶಿಬಿರ ನಡೆಯಲಿದೆ.
ಜನರಲ್ ಮೆಡಿಸಿನ್, ಶಸ್ತ್ರ ಚಿಕಿತ್ಸಾ ವಿಭಾಗ, ಮಕ್ಕಳ ಚಿಕಿತ್ಸಾ ವಿಭಾಗ, ಕಿವಿ ಮೂಗು ಗಂಟಲು ವಿಭಾಗ, ನೇತ್ರ ಚಿಕಿತ್ಸಾ ವಿಭಾಗ, ಜನನ ಮತ್ತು ಲೈಂಗಿಕ ವಿಭಾಗ ಹಾಗೂ ಸ್ತ್ರೀ ರೋಗ ವಿಭಾಗಗಳಲ್ಲಿ ರೋಗಿಗಳ ತಪಾಸಣೆ ನಡೆಯಲಿದೆÉ. ವಿಶೇಷ ಸೌಲಭ್ಯಗಳ ಅಗತ್ಯವಿದ್ದಲ್ಲಿ ಮಧು ಮೇಹ ಪರೀಕ್ಷೆ, ಇಸಿಜಿ ಕೂಡ ಮಾಡಲಾಗುವದು. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಸುಳ್ಯದ ಕೆವಿಜಿಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುವದು ಎಂದು ಡಾ| ನವೀನ್ ಮಾಹಿತಿ ನೀಡಿದರು.
ರೋಟರಿ ಮಿಸ್ಟಿ ಹಿಲ್ಸ್ ಇದುವರೆಗೆ ಜಿಲ್ಲೆಯಲ್ಲಿ ಮಧು ಮೇಹ ಪತ್ತೆ ಹಚ್ಚುವ ಸುಮಾರು 35 ಶಿಬಿರಗಳನ್ನು ನಡೆಸಲಾಗಿದ್ದು, ಸಾವಿರ ರೋಗಿಗಳು ಇದರ ಲಾಭವನ್ನು ಪಡೆದಿದ್ದಾರೆ. ಪ್ರತಿ ಶೇ.13 ರಿಂದ 14 ರಷ್ಟು ಮಧುಮೇಹಿ ರೋಗಿಗಳು ಪತ್ತೆಯಾಗಿದ್ದಾರೆ ಎಂದು ಅವರು ತಿಳಿಸಿದರು. ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ಕಲ್ಪಿಸಬೇಕೆನ್ನುವ ಉದ್ದೇಶದಿಂದ ಗ್ರಾಮಿಣ ಭಾಗದಲ್ಲಿ ಶಿಬಿರಗಳನ್ನು ನಡೆಸುತ್ತಿರುವದಾಗಿ ಅವರು ಹೇಳಿದರು.
ಹಿಂದೂ ಸಮಾಜ ಸುಧಾರಣ ಸಮಿತಿಯ ಅಧ್ಯಕ್ಷ ವಸಂತಕುಮಾರ್ ಹೊಸಮನೆ ಮಾತನಾಡಿ, ಶಿಬಿರವನ್ನು ಡಾ| ಚಿದಾನಂದ ಉದ್ಘಾಟಿಸಲಿದ್ದು, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಈ ಸಂದರ್ಭ ಉಪಸ್ಥಿತರಿರುವರೆಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಕೆ.ಆರ್. ಸತೀಶ್ ಉಪಸ್ಥಿತರಿದ್ದರು.