ನಾಪೆÇೀಕ್ಲು, ಏ. 18: ನಾಪೆÇೀಕ್ಲು ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಬಿದ್ದಾಟಂಡ ಕಪ್ ಹಾಕಿ ನಮ್ಮೆಯ 2ನೇ ದಿನದ ಪಂದ್ಯಾಟದಲ್ಲಿ ಕೊಂಡಿರ, ಚಪ್ಪಂಡ, ಪಟ್ಟಮಾಡ, ಅಮ್ಮಾಟಂಡ, ನೆಲ್ಲಿರ, ನಿಡುಮಂಡ, ಚೆನ್ನಪಂಡ, ಕೀತಿಯಂಡ, ಅಣ್ಣೀರ, ಅಚ್ಚಾಂಡಿರ, ಕೇಟೋಳಿರ, ಗೌಡಂಡ, ಮುಕ್ಕಾಟಿರ, ಅಳಮೇಂಗಡ, ಚೊಟ್ಟೆಯಂಡ, ಚೊಟ್ಟೆರ, ಮಲ್ಚಿರ, ಮೂರ್ಕಂಡ ತಂಡಗಳು ಮುನ್ನಡೆ ಸಾಧಿಸಿವೆ.

ಬೆಳಿಗ್ಗೆ 8.30 ಗಂಟೆಗೆ ಆರಂಭಗೊಂಡ ಕುಟ್ಟೇಟಿರ ಮತ್ತು ಕೊಂಡಿರ ತಂಡಗಳ ಮೊದಲ ಪಂದ್ಯದಲ್ಲಿ ಕೊಂಡಿರ ತಂಡವು ಕುಟ್ಟೇಟಿರ ತಂಡವನ್ನು 2 ಗೋಲಿನಿಂದ ಪರಾಭವಗೊಳಿಸಿತು. ಕುಟ್ಟೇಟಿರ ಬೋಪಣ್ಣ ತನ್ನ ತಂಡದ ಪರ ಒಂದು ಗೋಲು ದಾಖಲಿಸಿದರೆ ಕೊಂಡಿರ ತಂಡದಿಂದ ತಮ್ಮಯ್ಯ 2 ಮತ್ತು ಸುಬ್ಬಯ್ಯ ಒಂದು ಗೋಲು ದಾಖಲಿಸುವದರ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಚಪ್ಪಂಡ ಮತ್ತು ನಾಳಿಯಂಡ ತಂಡಗಳ ನಡುವಿನ ಪಂದ್ಯವು ಒಂದೊಂದು ಗೋಲಿನಿಂದ ಡ್ರಾ ಆಯಿತು. ನಂತರ ನಡೆದ ಟೈಬ್ರೇಕರ್‍ನಲ್ಲಿ ಚಪ್ಪಂಡ ತಂಡವು ನಾಳಿಯಂಡ ತಂಡವನ್ನು ಪರಾಭವಗೊಳಿಸಿತು. ಪಟ್ಟಮಾಡ ಮತ್ತು ತೆನ್ನಿರ ತಂಡಗಳ ನಡುವಿನ ಪಂದ್ಯದಲ್ಲಿ ಪಟ್ಟಮಾಡ ತಂಡವು 3 ಗೋಲಿನಿಂದ ತೆನ್ನಿರ ತಂಡವನ್ನು ಪರಾಭವಗೊಳಿಸಿತು. ಪಟ್ಟಮಾಡ ಪೆÇನ್ನಪ್ಪ, ಮುತ್ತಣ್ಣ, ಗಣಪತಿ ತಂಡದ ಪರ ಒಂದೊಂದು ಗೋಲು ದಾಖಲಿಸಿದರು. ಆಲೆಮಡ ಮತ್ತು ಅಮ್ಮಾಟಂಡ ತಂಡಗಳ ನಡುವಿನ ಪಂದ್ಯದಲ್ಲಿ 2-1 ಗೋಲಿನಿಂದ ಅಮ್ಮಾಟಂಡ ತಂಡವು ಆಲೆಮಡ ತಂಡವನ್ನು ಸೋಲಿಸಿ ಜಯಗೊಳಿಸಿತು. ಆಲೆಮಡ ಚೀಯಣ್ಣ ಒಂದು ಗೋಲು ದಾಖಲಿಸಿದರೆ, ಅಮ್ಮಾಟಂಡ ಚಿರಾಗ್ ಚಿಣ್ಣಪ್ಪ ಎರಡು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ನೆಲ್ಲಿರ ಮತ್ತು ಮಚ್ಚೂರ ತಂಡಗಳ ನಡುವಿನ ಪಂದ್ಯದಲ್ಲಿ 3 ಗೋಲುಗಳ ಅಂತರದಲ್ಲಿ ನೆಲ್ಲಿರ ತಂಡವು ಮಚ್ಚೂರ ತಂಡವನ್ನು ಪರಾಭವಗೊಳಿಸಿತು. ನೆಲ್ಲಿರ ತಂಡದ ಪರ ಪವನ್ ಮಂದಣ್ಣ, ದೇಚಮ್ಮ, ರವೀಂದ್ರ ತಲಾ ಒಂದೊಂದು ಗೋಲು ದಾಖಲಿಸಿ ದರು. ನಿಡುಮಂಡ ಮತ್ತು ಚೋಡುಮಾಡ ತಂಡಗಳ ನಡುವಿನ ಪಂದ್ಯದಲ್ಲಿ ನಿಡುಮಂಡ ತಂಡವು ಒಂದು ಗೋಲಿನ ಮೂಲಕ ಚೋಡುಮಾಡ ತಂಡವನ್ನು ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಆದೆಂಗಡ ಮತ್ತು ಚೆನ್ನಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಟೈಬ್ರೇಕರ್‍ನಲ್ಲಿ 3-1 ಗೋಲುಗಳ ಅಂತರದಲ್ಲಿ ಚೆನ್ನಪಂಡ ತಂಡವು ಆದೇಂಗಡ ತಂಡವನ್ನು ಸೋಲಿಸಿತು. ಕೀತಿಯಂಡ ಮತ್ತು ಅಜ್ಜಮಾಡ ತಂಡಗಳ ನಡುವಿನ ಸೆಣಸಾಟದಲ್ಲಿ ಕೀತಿಯಂಡ ತಂಡವು ಟೈಬ್ರೇಕರ್ ಮೂಲಕ ಅಜ್ಜಮಾಡ ತಂಡವನ್ನು ಸೋಲಿಸಿತು. ಅಣ್ಣೀರ ಮತ್ತು ಪಳೆಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಅಣ್ಣೀರ ತಂಡವು ಪಳೆಯಂಡ ತಂಡವನ್ನು 2-1 ಗೋಲಿನಿಂದ ಪರಾಭವಗೊಳಿಸಿತು. ಪಳೆಯಂಡ ತಂಡದ ಪರ ಸುರಿ ಸುಬ್ರಮಣಿ ಒಂದು ಗೋಲು ದಾಖಲಿಸಿದರೆ, ಅಣ್ಣೀರ ತಂಡದ ಪರ ಬೆಳ್ಳಿಯಪ್ಪ ಮತ್ತು ದೀಪಕ್ ಚಂಗಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು.ಅಂತೆಯೇ ಕೇಟೋಳಿರ ತಂಡವು ಕುಪ್ಪಂಡ ತಂಡವನ್ನು, ಮೂರ್ಕಂಡ ತಂಡವು ಕೊಟ್ರಮಡ ತಂಡವನ್ನು, ಮುಕ್ಕಾಟಿರ (ಭೇತ್ರಿ) ತಂಡವು ಕೊಲ್ಲಿರ ತಂಡವನ್ನು ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದೆ. ಚೋನಿರ ತಂಡದ ಗೈರು ಹಾಜರಿನ ಕಾರಣ ಅಚ್ಚಾಂಡಿರ ತಂಡವು, ಪೆಮ್ಮಚ್ಚಂಡ ತಂಡದ ಗೈರು ಹಾಜರಿನ ಕಾರಣ ಗೌಡಂಡ ತಂಡವು ಮುಂದಿನ ಸುತ್ತಿಗೆ ಪ್ರವೇಶಿಸಿತು. ಅಂತೆಯೇ ಚೊಟ್ಟೆಯಂಡ, ಬಯವಂಡ, ಚೊಟ್ಟೆರ, ಮಲ್ಚಿರ ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಿದೆ.

ಇಂದಿನ ಪಂದ್ಯಾಟ

ಮೈದಾನ-1

ಬೆಳಿಗ್ಗೆ 8.30 ಗಂಟೆಗೆ ಪಾಲಂದಿರ - ಶಿವಚಾಳಿಯಂಡ

10ಕ್ಕೆ ಪಾಲೆಯಂಡ - ಮಲ್ಲಂಗಡ

11ಕ್ಕೆ ಚೊಟ್ಟೇಯಂಡಮಡ -ಕುಕ್ಕೇರ

12ಕ್ಕೆ ಚೋಕಿರ - ಮುದ್ದಂಡ

1ಕ್ಕೆ ಮಾಚೇಟ್ಟಿರ - ಅರಮಣಮಡ

2ಕ್ಕೆ ಅಜ್ಜೇಟಿರ - ಚೋಕಂಡ

3ಕ್ಕೆ ಅಚ್ಚಪಂಡ - ಮುಕ್ಕಾಟಿರ (ಹರಿಹರ).

ಮೈದಾನ 2

ಬೆಳಿಗ್ಗೆ 8.30 ಗಂಟೆಗೆ ತೆಕ್ಕಡ - ಬೊಟ್ಟೋಳಂಡ

10ಕ್ಕೆ ಕಾಳಚಂಡ ಹಂಚೇಟ್ಟಿರ

11ಕ್ಕೆ ಮಾಳೇಟಿರ (ಕುಕ್ಲುರು) - ಕಾಂಗಿರ

12ಕ್ಕೆ ಕುಟ್ಟಂಡ(ಅಮ್ಮತಿ) ತಿರುತ್ತೆರ

1ಕ್ಕೆ ಎಳ್ತಂಡ - ಮಚ್ಚಾರಂಡ

2ಕ್ಕೆ ಮಾಚಿಮಡ - ಬಲ್ಯಮಡ

3ಕ್ಕೆ ಪೆÇರ್ಕೊವಂಡ - ಕೊಂಗೇಟಿರ.

ಮೈದಾನ 3

ಬೆಳಿಗ್ಗೆ 8.30 ಗಂಟೆಗೆ ಬೊಳ್ಳಾರಪಂಡ - ಬಲ್ಲಂಡ

10ಕ್ಕೆ ಮಾಪಣಮಡ - ಮೇಕತಂಡ

11ಕ್ಕೆ ಕೊಟ್ಟಂಗಡ - ಮುಲ್ಲಂಡ

12ಕ್ಕೆ ಚೆರುವಾಳಂಡ - ಸಣ್ಣುವಂಡ

1ಕ್ಕೆ ಅಮ್ಮೆಕಂಡ - ಚೇರಂಡ

2ಕ್ಕೆ ಅಪ್ಪಚೆಟ್ಟೋಳಂಡ - ಮಾಗೇರ

3ಕ್ಕೆ ತಿರೋಡಿರ - ಮಂಡೇಟಿರ