ಕುಶಾಲನಗರ, ಏ. 19: ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಉದ್ಯಾನವನ ಸೇರಿದಂತೆ ಸರಕಾರಿ ಜಾಗದ ಒತ್ತುವರಿ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲು ವಿಶೇಷ ಟಾಸ್ಕ್ ಫೋರ್ಸ್ ರಚನೆಗೆ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ನಿರ್ಣಯ ಕೈಗೊಂಡಿದೆ.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಪಾರ್ಕ್‍ಗಳ ಅಭಿವೃದ್ಧಿ ಹಾಗೂ ಜಾಗ ಒತ್ತುವರಿ ಸಂಬಂಧಿಸಿದಂತೆ ಸುದೀರ್ಘ ಚರ್ಚೆಗಳು ನಡೆಯಿತು. ಕೆಲವು ಬಡಾವಣೆಗಳಲ್ಲಿ ಪಾರ್ಕ್‍ಗಳಿಗೆ ಮೀಸಲಿರಿಸಿದ ಜಾಗಗಳು ಒತ್ತುವರಿಯಾಗುತ್ತಿದೆ. ಈ ಹಿಂದಿನ ಕೆಲವು ಬಡಾವಣೆಗಳ ನಿರ್ಮಾಣ ಸಂದರ್ಭ
(ಮೊದಲ ಪುಟದಿಂದ) ಪಾರ್ಕ್‍ಗೆ ಜಾಗ ಮೀಸಲಿರಿಸದ ಮಾಲೀಕರಿಗೆ ನೋಟಿಸ್ ನೀಡಿ ಕ್ರಮಕೈಗೊಳ್ಳಬೇಕು. ಸರಕಾರಿ ಜಾಗಗಳು ಕೂಡ ಒತ್ತುವರಿಯಾಗಿದ್ದು ಇದರ ಸಂರಕ್ಷಣೆಗೆ ಸರ್ವೆ ಕಾರ್ಯ ನಡೆಸಿ ಸ್ಥಳ ಗುರುತಿಸಿ ಬೇಲಿ ನಿರ್ಮಿಸುವದ ರೊಂದಿಗೆ ನಾಮಫಲಕ ಅಳವಡಿಸಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಸದಸ್ಯ ಹೆಚ್.ಜೆ. ಕರಿಯಪ್ಪ ಆಗ್ರಹಿಸಿz ಹಿನ್ನಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.
ಇದಕ್ಕೆ ಪೂರಕವಾಗಿ ಮಾತನಾಡಿದ ಸದಸ್ಯರಾದ ಪ್ರಮೋದ್ ಮುತ್ತಪ್ಪ, ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗಗಳ ಸಂರಕ್ಷಣೆಗೆ ಆಡಳಿತ ಮಂಡಳಿ ಅಗತ್ಯ ಕ್ರಮಕೈಗೊಳ್ಳುವ ಮೂಲಕ ಸದಸ್ಯರ ಮೇಲಿನ ಕಳಂಕ ಹೋಗಲಾಡಿಸಬೇಕೆಂದು ಆಗ್ರಹಿಸಿ ದರು. ಪಂಚಾಯಿತಿ ಉಪಾಧ್ಯಕ್ಷ ಟಿ.ಆರ್. ಶರವಣಕುಮಾರ್ ಮಾತನಾಡಿ, ಪಾರ್ಕ್‍ಗಳ ಜಾಗಗಳಿಗೆ ಸಂಬಂಧಿಸಿದಂತೆ ವಿಶೇಷ ಸಭೆಯೊಂದನ್ನು ಕರೆದು ಚರ್ಚೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಂಚಾಯಿತಿ ಅಧ್ಯಕ್ಷÀ ಎಂ.ಎಂ. ಚರಣ್, ಮುಂದಿನ 15 ದಿನಗಳ ಒಳಗಾಗಿ ವಿಶೇಷ ಸಭೆ ಕರೆದು ಈ ಬಗ್ಗೆ ಚರ್ಚಿಸಲಾಗುವದು. ಪಾರ್ಕ್ ಹಾಗೂ ಸರಕಾರಿ ಜಾಗಗಳ ಒತ್ತುವರಿ ತೆರವು ಹಾಗೂ ಸಂರಕ್ಷಣೆ ನಿಟ್ಟಿನಲ್ಲಿ ಹಿರಿಯ ಸದಸ್ಯ ಹೆಚ್.ಜೆ. ಕರಿಯಪ್ಪ ನೇತೃತ್ವದ 11 ಮಂದಿ ಸದಸ್ಯರ ಟಾಸ್ಕ್ ಫೋರ್ಸ್ ರಚಿಸುವ ಸಂಬಂಧ ನಿರ್ಣಯ ಮಂಡಿಸಲಾಯಿತು.
ಪಂಚಾಯಿತಿ ವ್ಯಾಪ್ತಿಯ ಬಡಾವಣೆಗಳ ಸಿಎ ಸೈಟ್‍ಗಳ ಕುರಿತಾಗಿ ಹಲವಾರು ಗೊಂದಲ ಗಳಿದ್ದು ಈ ಬಗ್ಗೆ ಕೂಡ ವಿಶೇಷ ಸಭೆಯಲ್ಲಿ ಚರ್ಚೆ ನಡೆಸಲು ಸಭೆ ತೀರ್ಮಾನಿಸಿತು.
ಒಳಚರಂಡಿ ಮಂಡಳಿ ವತಿಯಿಂದ ನಡೆಯುತ್ತಿರುವ ಯುಜಿಡಿ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಕೆಲವೆಡೆ ಅಡಚಣೆಗಳ ಕಾರಣ ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ ಮಂಡಳಿ ಅಭಿಯಂತರ ಆನಂದ್ ಅವರ ಬಳಿ ಸದಸ್ಯರು ಮಾಹಿತಿ ಬಯಸಿದರು. ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಆಡಳಿತ ಮಂಡಳಿ ಸದಸ್ಯರು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲು ಸಭೆ ತೀರ್ಮಾನಿಸಿತು.
ಪಂಚಾಯಿತಿ ಕಾಮಗಾರಿಗಳಿಗೆ ಟೆಂಡರ್ ಪಡೆದು ಕಾಮಗಾರಿ ಆರಂಭಿಸದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಕ್ರಮಕೈಗೊಳ್ಳಲು ಸಭೆ ತೀರ್ಮಾನಿಸಿತು.
ಪಟ್ಟಣ ವ್ಯಾಪ್ತಿಯಲ್ಲಿ ಕೇಬಲ್ ಆಪರೇಟರ್‍ಗಳು ಪಂಚಾಯಿತಿಯಿಂದ ಯಾವದೇ ಅನುಮತಿ ಪಡೆಯದೆ ತಮಗಿಷ್ಟ ಬಂದ ರೀತಿಯಲ್ಲಿ ಕೇಬಲ್ ಅಳವಡಿಸಿ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ ಉಪಾಧ್ಯಕ್ಷ ಟಿ.ಆರ್. ಶರವಣಕುಮಾರ್ ಸಭೆಯ ಗಮನಕ್ಕೆ ತಂದರು.
ರಸೂಲ್ ಬಡಾವಣೆಯಲ್ಲಿ ಪ್ರಾರ್ಥನಾ ಮಂದಿರವೊಂದನ್ನು ನಿರ್ಮಿಸುವ ಸಂಬಂಧ ಅರ್ಜಿ ಬಂದಿದ್ದು ಕನಿಷ್ಟ ಜಾಗದಲ್ಲಿ ಮಸೀದಿ ನಿರ್ಮಾಣ ಕೈಗೊಳ್ಳುವದರಿಂದ ವಾಹನ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಎದುರಾಗುವ ನಿಟ್ಟಿನಲ್ಲಿ ಮಸೀದಿ ನಿರ್ಮಾಣಕ್ಕೆ ಅನುಮತಿ ಕಲ್ಪಿಸಲು ಅಸಾಧ್ಯ ಎಂದು ಅಧ್ಯಕ್ಷ ಚರಣ್ ತಿಳಿಸಿದರು. ಕೇವಲ 5 ಸೆಂಟ್‍ನಲ್ಲಿ ಮಸೀದಿ ನಿರ್ಮಿಸುವ ಕುರಿತಾಗಿ ನಕ್ಷೆ ಒದಗಿಸಲಾಗಿದೆ. ವಾಹನ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಎದುರಾಗುವದರಿಂದ ಬಡಾವಣೆ ನಿವಾಸಿಗಳಿಗೆ ಅನಾನು ಕೂಲ ಉಂಟಾಗಲಿದೆ. ಈ ನಿಟ್ಟಿನಲ್ಲಿ ಅನುಮತಿ ಅಸಾಧ್ಯ ಎಂದರು. ವಾಹನ ನಿಲುಗಡೆಗೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸುವದಾದರೆ ಅನುಮತಿ ನೀಡಲು ಯಾವದೇ ಅಡ್ಡಿ ಉಂಟಾಗುವದಿಲ್ಲ ಎಂದು ಕೆಲವು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಬಗ್ಗೆ ಸುದೀರ್ಘವಾದ ಚರ್ಚೆ ನಡೆದು ಗೊಂದಲದ ವಾತಾವರಣ ನಿರ್ಮಾಣವಾಗಿ ಅಧ್ಯಕ್ಷರು ಸಭೆಯನ್ನು 10 ನಿಮಿಷಗಳ ಕಾಲ ಮುಂದೂಡಿದ ಪ್ರಸಂಗವೂ ನಡೆಯಿತು.
ಡಾ. ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಸಂದರ್ಭ ಗೈರು ಹಾಜರಾದ ಅಧಿಕಾರಿ, ಸಿಬ್ಬಂದಿಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳುವಂತೆ ಸದಸ್ಯರು ಅಧ್ಯಕ್ಷರನ್ನು ಆಗ್ರಹಿಸಿದರು.