ಸಿದ್ದಾಪುರ: ಕೊಡಗು ಚಾಂಪಿಯನ್ಸ್ ಲೀಗ್ (ಕೆ.ಸಿ.ಎಲ್) ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೂರ್ಗ್ ಲಯನ್ಸ್ ತಂಡ ಸಿದ್ದಾಪುರದ ಫಯರ್ ಟೈಗರ್ ತಂಡವನ್ನು ಮಣಿಸಿ 2017 ರ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

ಸಿದ್ದಾಪುರದ ಸಂಯುಕ್ತ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ರೋಚಕ ಪಂದ್ಯಾಟದಲ್ಲಿ ಕಿಶೋರ್ ಮಾಲೀಕತ್ವದ ಕೂರ್ಗ್ ಲಯನ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು, ಚಾಂಪಿಯನ್ ಆಗಿ ಹೊರಹೊಮ್ಮಿದೆ. ನಿಗದಿತ 10 ಓವರ್‍ಗಳಲ್ಲಿ 49 ರನ್ ಗಳಿಸಿದ ಫಯರ್ ಟೈಗರ್ಸ್ ತಂಡದ ಗುರಿಯನ್ನು ಬೆನ್ನಟ್ಟಿದ ಕೂರ್ಗ್ ಲಯನ್ಸ್ ಅಂತಿಮ ಒವರ್‍ವರೆಗೂ ಹೋರಾಟ ನಡೆಸಿತು. ಕೊನೆಯ 3 ಎಸೆತ ಬಾಕಿ ಇರುವಾಗಲೇ ತನ್ನ ಜಯವನ್ನು ಖಚಿತಪಡಿಸಿತು.

ಚಾಂಪಿಯನ್ ಪಟ್ಟ ಅಲಂಕರಿಸಿದ ಕೂರ್ಗ್ ಲಯನ್ಸ್ ತಂಡಕ್ಕೆ ರೂ. 1,11,111 ನಗದು ಹಾಗೂ ಟ್ರೋಫಿ ಹಾಗೂ ಫೈನಲ್ ಪಂದ್ಯಾಟದಲ್ಲಿ ಮುಗ್ಗರಿಸಿದ ಫಯರ್ ಟೈಗರ್ಸ್ ತಂಡಕ್ಕೆ ರೂ. 55,555 ನಗದು ಬಹುಮಾನ ನೀಡಲಾಯಿತು. ಪಂದ್ಯಾವಳಿಯಲ್ಲಿ ಉತ್ತಮ ಆಟಗಾರ, ಎಸೆತಗಾರ, ಉತ್ತಮ ತಂಡ ಸೇರಿದಂತೆ ವಿವಿಧ ಪ್ರಶಸ್ತಿಯನ್ನು ವಿತರಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ರಾಜ್ಯ ಅರಣ್ಯ ನಿಗಮದ

(ಮೊದಲ ಪುಟದಿಂದ) ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಪುಟ್ಟ ಕೊಡಗು ಜಿಲ್ಲೆಯಲ್ಲಿ ಐ.ಪಿ.ಎಲ್ ಮಾದರಿಯ ಪಂದ್ಯಾವಳಿ ಹಮ್ಮಿಕೊಂಡಿರುವದು ಶ್ಲಾಘನೀಯ ಎಂದರು. ರಾಜ್ಯ ಸರಕಾರದಿಂದ ರೂ. 35 ಸಾವಿರ ಚೆಕ್ ಹಸ್ತಾಂತರಿಸಿದರು.

ಸಭೆಯ ಅಧ್ಯಕ್ಷತೆಯನ್ನು ಸಿಟಿ ಬಾಯ್ಸ್ ಸಂಘದ ಅಧ್ಯಕ್ಷ ಹ್ಯಾರೀಸ್ ವಹಿಸಿದ್ದರು. ಈ ಸಂದರ್ಭ ಜಿ.ಪಂ. ಸದಸ್ಯೆ ಸುನಿತಾ ಮಂಜುನಾಥ್, ಆರೆಂಜ್ ಕೌಂಟಿ ವ್ಯವಸ್ಥಾಪಕಿ ಕಾಂತಿ ಅನೀಶ್, ಅಂತರಾಷ್ಟ್ರೀಯ ಮ್ಯಾರಥಾನ್ ಪಟು ಹೊಸೋಕ್ಲು ಚಿನ್ನಪ್ಪ, ಸ್ಕೌಟ್ ಗೈಡ್ಸ್‍ನ ಜಿಲ್ಲಾ ಆಯುಕ್ತ ಜಿಮ್ಮಿ ಸಿಕ್ವೇರಾ, ಕಾಂಗ್ರೆಸ್ ಮುಖಂಡÀ ಪಿ.ಸಿ. ಹಸೈನಾರ್ ಹಾಜಿ, ಅಮ್ಮತ್ತಿ ಗ್ರಾ.ಪಂ. ಉಪಾಧ್ಯಕ್ಷ ನಿತೀಶ್, ನೆಲ್ಯಹುದಿಕೇರಿ ಗ್ರಾ.ಪಂ. ಸದಸ್ಯ ಅಫ್ಸಲ್, ಸಿದ್ದಾಪುರ ಗ್ರಾ.ಪಂ. ಸದಸ್ಯರಾದ ಶೌಕತ್ ಆಲಿ, ಶುಕೂರ್, ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಎನ್. ವಾಸು, ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕ ಮಂಜುನಾಥ್, ಸಿದ್ದಾಪುರ ಠಾಣೆಯ ಎ.ಎಸ್.ಐ. ಸೀತಾರಾಂ, ದಾನಿಗಳಾದ ದೇವಸ್ಸಿ, ರಯೀಸ್, ರಿಯಾಜ್, ಸುಬೇರ್, ಕುಕ್ಕುನೂರು ಪ್ರಕಾಶ್ ಡಿ.ಸಿ.ಸಿ. ಸದಸ್ಯ ಶಮೀರ್ ಸೇರಿದಂತೆ ಇನ್ನಿತರರು ಇದ್ದರು. ರೆಜಿತ್ ಕುಮಾರ್ ಸ್ವಾಗತಿಸಿ, ಅಜೀಜ್ ನಿರೂಪಿಸಿದರು.