ಸುಂಟಿಕೊಪ್ಪ, ಏ. 20: ಇಲ್ಲಿನ ಅಂಬೇಡ್ಕರ್ ಸಂಘದ ವತಿಯಿಂದ ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ಕನ್ನಡ ವೃತ್ತದಲ್ಲಿ ಆಚರಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಎಂ.ಎಸ್. ರವಿ ವಹಿಸಿದ್ದರು.
ಈ ಸಂದರ್ಭ ಗ್ರಾ.ಪಂ. ಸದಸ್ಯರಾದ ಸಿ. ಚಂದ್ರ, ರಜಾಕ್, ಶಾಜಿರ್, ಶೋಭಾ ರವಿ, ಗಂಗಮ್ಮ ಭೀಮಯ್ಯ, ಇಸಾಕ್ ಖಾನ್, ಜಿಲ್ಲಾ ಕಾರ್ಮಿಕ ಮತ್ತು ಚಾಲಕರ ಸಂಘದ ಜಿಲ್ಲಾಧ್ಯಕ್ಷ ಅಣ್ಣಾ ಶರೀಫ್ ಹಾಗೂ ವಿವಿಧ ಸಂಘಗಳ ಅಧ್ಯಕ್ಷ ಮತ್ತು ಪದಾಧಿಕಾರಿಗಳು, ವಿವಿಧ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಪಂಚಾಯಿತಿ ಪೌರಕಾರ್ಮಿಕರು ಇದ್ದರು.