ಸುಂಟಿಕೊಪ್ಪ, ಏ. 20: ಸುಂಟಿಕೊಪ್ಪ ಹೋಬಳಿ ಮೊಗೇರ ಸೇವಾ ಸಂಘದ ವತಿಯಿಂದ ಮೊಗೇರ ಬಂಧುಗಳಿಗಾಗಿ ಪ್ರಥಮ ವರ್ಷದ ರಾಜ್ಯಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಮೇ 7 ಮತ್ತು 8 ರಂದು ಇಲ್ಲಿನ ಜಿಯಂಪಿ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪಿ.ಬಿ. ಮಂಜು ತಿಳಿಸಿದ್ದಾರೆ.
ಮೇ 7 ರಂದು ಬೆಳಿಗ್ಗೆ 9 ಗಂಟೆಗೆ ಜಿಯಂಪಿ ಶಾಲಾ ಮೈದಾನದಲ್ಲಿ ಕ್ರಿಕೆಟ್, ಹಗ್ಗ ಜಗ್ಗಾಟ, ಥ್ರೋಬಾಲ್ ಕ್ರೀಡೆಗಳು ನಡೆಯಲಿದೆ. ಕ್ರಿಕೆಟ್ ಪಂದ್ಯದಲ್ಲಿ ವಿಜೇತ ತಂಡಕ್ಕೆ ರೂ. 20,000 ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ. 10,000 ನಗದು ಮತ್ತು ಟ್ರೋಫಿ, ಮಹಿಳೆಯರಿಗಾಗಿ ನಡೆಯುವ ಹಗ್ಗ ಜಗ್ಗಾಟ ಮತ್ತು ಥ್ರೋಬಾಲ್ ಪಂದ್ಯದಲ್ಲಿ ವಿಜೇತ ತಂಡಕ್ಕೆ ರೂ. 2,000 ನಗದು ಮತ್ತು ಟ್ರೋಫಿ ಮತ್ತು ದ್ವಿತೀಯ ಸ್ಥಾನಪಡೆದ ತಂಡಕ್ಕೆ ರೂ. 1,000 ಮತ್ತು ಆಕರ್ಷಕ ಟ್ರೋಫಿಯನ್ನು ನೀಡಲಾಗುವದು.
ಕ್ರೀಡಾಕೂಟದಲ್ಲಿ ಭಾಗವಹಿಸುವ ತಂಡದ ನೋಂದಾವಣೆಗೆ ತಾ. 30 ಕೊನೆಯ ದಿನವಾಗಿದೆ. ಮೇ 8 ರ ಸಂಜೆ 5 ಗಂಟೆಯಿಂದ ಇಲ್ಲಿನ ಶ್ರೀ ರಾಮ ಮಂದಿರ ಆವರಣದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ಬಾಲಕ, ಬಾಲಕಿಯರಿಗಾಗಿ ನೃತ್ಯ, ಹಾಡುಗಾರಿಕೆ, ನಾಟಕ, ವಯಸ್ಕರ, ಯುವಕರ ನೃತ್ಯ ಮತ್ತು ಮೊಗೇರ ಸಂಸ್ಕøತಿಯನ್ನು ಪ್ರತಿಬಿಂಬಿಸುವ ನೃತ್ಯ, ಪ್ರಾರ್ಥನೆ, ಸಂಧಿ, ದುಡಿ, ನೃತ್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಹೆಚ್ಚಿನ ಮಾಹಿತಿಗಾಗಿ ಮಂಜು (ಅಧ್ಯಕ್ಷ) 9535452433, ಎಂ.ಬಿ. ಉಮೇಶ್ (ಕಾರ್ಯದರ್ಶಿ) 9742660490 ಸಂಪರ್ಕಿಸಬಹುದು.