ಮಡಿಕೇರಿ, ಏ. 20: ಕನ್ನಂಡಬಾಣೆ ಶ್ರೀ ದೃಷ್ಟಿ ಗಣಪತಿ ದೇವಸ್ಥಾನದ 13ನೇ ವರ್ಷದ ವಾರ್ಷಿಕೋತ್ಸವ ತಾ. 22 ಮತ್ತು 23 ರಂದು ನಡೆಯಲಿದೆ.
ತಾ. 22 ರಂದು ಸಂಜೆ 6 ಗಂಟೆಯಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹ ವಾಚನೆ, ಪ್ರಸಾದ ಶುದ್ಧಿ, ಸುದರ್ಶನ ಹೋಮ, ವಾಸ್ತುಬಲಿ, ಪ್ರಾಕಾರ ಬಲಿ ಮತ್ತು ಪ್ರಸಾದ ವಿತರಣೆ ಜರುಗಲಿದೆ.
ತಾ. 23 ರಂದು ಬೆಳಿಗ್ಗೆಯಿಂದ ಪುಣ್ಯಾಹ, ಸಾಮೂಹಿಕ ಗಣಹೋಮ, 108 ಕಲಶಾಭಿಷೇಕ, ನವಗ್ರಹ ಪೂಜೆ, ಮಹಾಪೂಜೆ, ಶ್ರೇಯ ಪ್ರಾರ್ಥನೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಹಾಗೂ ಅಷ್ಟಬಂಧ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.