ಮಡಿಕೇರಿ, ಏ. 20: ಮಡಿಕೇರಿ ಯಲ್ಲಿ ವೆಲ್ಡಿಂಗ್ ಫ್ಯಾಬ್ರಿಕೇಟರ್ಸ್ ಉದ್ಯಮದಲ್ಲಿ ಸುಮಾರು 29 ಇಂಜಿನಿಯರಿಂಗ್ ವಕ್ರ್ಸ್ ಮಾಲೀಕರು ಹಲವು ವರ್ಷಗಳಿಂದ ತೊಡಗಿಸಿ ಕೊಂಡಿದ್ದು, ಎಲ್ಲರಿಗೂ ಗುರುತಿನ ಚೀಟಿ ಹಾಗೂ ಪೂರಕ ನೆರವು ಕಲ್ಪಿಸುವದಾಗಿ ನಗರಸಭಾ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಹೇಳಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಸಭಾಂಗಣದಲ್ಲಿ ತಾ.19 ರಂದು ಸಂಜೆ ಜರುಗಿದ ಕಾರ್ಯಕ್ರಮದಲ್ಲಿ ನೂತನವಾಗಿ ಆರಂಭಗೊಂಡ ‘ಮಡಿಕೇರಿ ವೆಲ್ಡಿಂಗ್ ಫ್ಯಾಬ್ರಿಕೇಟರ್ಸ್ ಅಸೋಸಿಯೇಷನ್’ಗೆ ಚಾಲನೆ ನೀಡಿ ಶುಭ ಹಾರೈಸಿದರು.

ವೆಲ್ಡಿಂಗ್ ಉದ್ಯಮ ತ್ರಾಸದಾಯಕ ಹಾಗೂ ಸವಾಲಿನ ಕೆಲಸವಾಗಿದ್ದು, ಸಂಘ ಇದೀಗ ನೋಂದಾವಣೆ ಗೊಂಡಿರುವದರಿಂದ ನಗರಸಭೆಯ ಅಭಿವೃದ್ಧಿಯೊಂದಿಗೆ ಕೈಜೋಡಿಸಿ, ಸಹಕರಿಸುವಂತೆ ಮನವಿ ಮಾಡಿದರು.

ಮಡಿಕೇರಿ ಸೆಸ್ಕ್ ಸಹಾಯಕ ಕಾರ್ಯಪಾಲಕ ಅಭಿಯಂತರ ದೊಡ್ಡ್‍ಮನಿ ಅವರು ಮಾತನಾಡಿ, ವೀರಾಜಪೇಟೆಯಿಂದ ಮಡಿಕೇರಿಗೆ ಮೂರ್ನಾಡು, ಕೋಪಟ್ಟಿ ಮಾರ್ಗದ 66 ಲೇನ್ ಅಳವಡಿಕೆ ವಿದ್ಯುತ್ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ. ಇಲ್ಲಿನ ವೆಲ್ಡರ್ಸ್ ಉದ್ಯಮಿಗಳಿಗೆ ಸೆಸ್ಕ್ ಇಲಾಖೆಯಿಂದಲೂ ಸಹಕಾರ ನೀಡಲಾಗುವದು. ವಿದ್ಯುತ್ ಮಿತವ್ಯ ಯದ ನಿಟ್ಟಿನಲ್ಲಿ ಹೊಸ ತಂತ್ರಜ್ಞಾ&divound; Àವನ್ನು ಅಳವಡಿಸಿ ಕೊಳ್ಳುವಂತಾಗಬೇಕು. ವಿದ್ಯುತ್ ಕಡಿತ ಉಂಟಾಗದಂತೆ ಮುಂದಿನ ದಿನಗಳಲ್ಲಿ ಮಡಿಕೇರಿ ನಗರಕ್ಕೆ ಹೆಚ್ಚು ಒತ್ತು ನೀಡಲಾಗುವದು ಎಂದರು.

ನೂತನ ಸಂಘದಲ್ಲಿ ಎಲ್ಲ ಜಾತಿ-ಧರ್ಮದವರೂ ಇದ್ದು, ಯಾರ ಮನಸ್ಸನ್ನೂ ನೋಯಿಸದೆ ಸಮಾನ ಮನೋಭಾವದೊಂದಿಗೆ ಅಧ್ಯಕ್ಷರು ಹಾಗೂ ಜವಾಬ್ದಾರಿ ಹೊತ್ತವರು ನಡೆದುಕೊಳ್ಳಬೇಕು ಎಂದು ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ್ ಕುಟ್ಟಪ್ಪ ಹೇಳಿದರು. ಒಂದಷ್ಟು ಉತ್ತಮ ಕಾರ್ಯಗಳಿಗೆ ಮುಂದಾಗಲು ಸಲಹೆ ನೀಡಿದರು.

ಮಡಿಕೇರಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಕೆ. ಅರುಣ್ ಕುಮಾರ್ ಮಾತನಾಡಿ, ಇಂಜಿನಿಯ ರಿಂಗ್ ವಕ್ರ್ಸ್‍ನ ಉದ್ಯಮಿ ಗಳು ತಡವಾಗಿಯಾದರೂ ಅಧಿಕೃತ ನೋಂದಾವಣೆ ಮೂಲಕ ಎಚ್ಚೆತ್ತು ಕೊಂಡಿರುವದು ಉತ್ತಮ ಬೆಳವಣಿಗೆ ಎಂದರು.

ಸಂಘದ ಕಾನೂನು ಸಲಹೆಗಾರ ಸಿ.ಎಸ್. ರಂಜಿತ್‍ಕುಮಾರ್ ಮಾತನಾಡಿ, ಮಡಿಕೇರಿಯ ವಿ.ಎ. ತಾಹಿರ್ ಅವರು ಕೊಡಗಿನಲ್ಲಿಯೇ ಪ್ರಪ್ರಥಮ ಇಂಜಿನಿಯಂಗ್ ವಕ್ರ್ಸ್ ಅನ್ನು 50 ವರ್ಷಗಳ ಹಿಂದೆಯೇ ಸ್ಥಾಪನೆ ಮಾಡಿದ್ದರು. ಸಂಘದ ಸದಸ್ಯರು ದಿನನಿತ್ಯ ಅಪಾಯಕಾರಿ ವೆಲ್ಡಿಂಗ್ ಉದ್ಯಮದಲ್ಲಿ ತೊಡಗುವದರಿಂದ ಗುಂಪು ವಿಮೆ ಅವಶ್ಯ. ದಿನವೂ ಕಲಿಯುವದು ಇದೆ. ಗುಣಮಟ್ಟದ, ಕಾರ್ಯಕ್ಷಮತೆಯ ಕೆಲಸ ಅಗತ್ಯ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಶಬೀರ್ ಪಾಷಾ ಮಾತನಾಡಿ, ನೂತನವಾಗಿ ಇಂಜಿನಿಯರಿಂಗ್ ವಕ್ರ್ಸ್ ಸ್ಥಾಪನೆ ಮಾಡುವ ಉದ್ಯಮಿಗಳಿಗೆ ಸಾಲದ ಮೇಲೆ ಶೇ. 35 ಸಹಾಯಧನ ನೀಡಲಾಗುತ್ತದೆ. ನಿಗಧಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿದ್ದಲ್ಲಿ ಶೇ.6 ಬಡ್ಡಿ ಕಡಿತ, ತೆರಿಗೆ ಕಡಿತ ಇತ್ಯಾದಿ ಸೌಲಭ್ಯಗಳಿವೆ ಎಂದರು.

ಕಾರ್ಯಕ್ರಮದಲ್ಲಿ ಇಂಜಿನಿ ಯರಿಂಗ್ ವಕ್ರ್ಸ್‍ನಲ್ಲಿ ಸಾಧನೆ ಮಾಡಿದ ಆದಮ್ ಅಂಡ್ ಸನ್ಸ್, ಮಡಿಕೇರಿಯ ವಿ.ಎ. ತಾಹಿರ್, ಗುರು ಇಂಜಿನಿ ಯರಿಂಗ್ ವಕ್ರ್ಸ್‍ನ ಮಾಲೀಕ ನಾಗೇಶ್ ಹಾಗೂ ಎಂ.ಎ. ಸುಲೇಮಾನ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಸ್ಥಾಪಕ ಅಧ್ಯಕ್ಷ ಮದನ್‍ಕುಮಾರ್ ಅವರು ಪ್ರಾಸ್ತವಿಕವಾಗಿ ಮಾತನಾಡಿ ಎಲ್ಲರ ಸಹಕಾರ ಕೋರಿದರು. ವಿ.ಟಿ.ಅಬ್ರಾರ್ ಸಂಘದ ಧ್ಯೇಯೋದ್ಧೇಶಗಳನ್ನು ವಿವರಿಸಿದರು. ವೇದಿಕೆಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಸ್ವಾಮಿ, ಮಾಜಿ ಮೂಡಾ ಅಧ್ಯಕ್ಷೆ ಸುರೈಯಾ ಅಬ್ರಾರ್, ಪ್ರಧಾನ ಕಾರ್ಯದರ್ಶಿ ಜಿ.ಸಿ.ಜಗದೀಶ್, ಖಜಾಂಚಿ ಮಹಮ್ಮದ್ ಅಶ್ರಫ್ ಮುಂತಾದವರು ಉಪಸ್ಥಿತರಿದ್ದರು.

ಸ್ವಾಗತ, ನಿರೂಪಣೆ, ವಂದನಾ ರ್ಪಣೆಯನ್ನು ಟಿ.ಎಲ್. ಶ್ರೀನಿವಾಸ್ ಹಾಗೂ ಟಿ.ಸಿ.ಗೀತಾ ನಾಯ್ಡು ನಿರ್ವಹಿಸಿದರು. -ಟಿ.ಎಲ್.ಎಸ್.