ಮಡಿಕೇರಿ, ಏ. 21: ಯಾರೂ ಕೂಡ ಅಜ್ಞಾನಿಗಳಾಗದೆ ಜ್ಞಾನದ ಬೆಳಕನ್ನು ಹಚ್ಚಿ ಜ್ಞಾನವಂತರಾಗಿ ಸಮುದಾಯದೊಂದಿಗೆ ಬಾಳುವೆ ಮಾಡುವಂತಾಗಬೇಕೆಂದು ಆದಿಚುಂಚನಗಿರಿ ಮಠದ ಕೊಡಗು - ಹಾಸನ ಶಾಖೆಯ ಮಠಾಧಿಪತಿ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.ಕೊಡಗು ಗೌಡ ಯುವ ವೇದಿಕೆ ಹಾಗೂ ಪೈಕೇರ ಕುಟುಂಬಸ್ಥರ ಆಶ್ರಯದಲ್ಲಿ ಇಲ್ಲಿನ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸ ಲಾಗಿರುವ ಪೈಕೇರ ಕಪ್ ಕ್ರಿಕೆಟ್ ಉತ್ಸವಕ್ಕೆ ಕ್ರೀಡಾಜ್ಯೋತಿ ಬೆಳಗಿಸಿ ಚಾಲನೆ ನೀಡಿ, ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಕಾಲ ಕಳೆದುಹೋಗುತ್ತಿದ್ದು, ಒಬ್ಬರಿಗೊಬ್ಬರು ಜಗಳವಾಡಿ ಮೂರ್ಖರಾಗುವ ಬದಲು ನಿದ್ರೆ ಮಾಡಿ ಕಾಲಹರಣ ಮಾಡುವ ಬದಲು ಮನುಷ್ಯ ಜೀವನ ವನ್ನು ಸಾರ್ಥಕಪಡಿಸಿ ಕೊಳ್ಳಬೇಕು. ಕಾವ್ಯ, ಶಾಸ್ತ್ರ, ಧರ್ಮದ ಇತಿಹಾಸ, ಸಂಸ್ಕøತಿ ಓದಿ ದೇಶಕ್ಕೆ ಉತ್ತಮ ಸಂದೇಶ ನೀಡುವಂತಾಗ ಬೇಕು ಎಂದು ಹೇಳಿದರು.

(ಮೊದಲ ಪುಟದಿಂದ) ಹಿಂದೆ ಇದ್ದಂತಹ ಅವಿಭಕ್ತ ಕುಟುಂಬ ಇಂದು ಮರೆಯಾಗಿದೆ. ಆದರೆ ಕೊಡಗಿನ ಜನತೆ ಇಂದಿಗೂ ಸಹಬಾಳ್ವೆಯೊಂದಿಗೆ ಸಂಸ್ಕøತಿ ಉಳಿಸಿಕೊಂಡು ಬರುತ್ತಿರುವದು ಶ್ಲಾಘನೀಯ. ಇಂತಹ ಕ್ರೀಡಾಕೂಟಗಳು ಇದಕ್ಕೆ ಸಹಕಾರಿಯಾಗಿವೆ ಎಂದರು.ಪರೋಪಕಾರ ಮನೋಭಾವನೆ ಎಲ್ಲರಲ್ಲಿರಬೇಕೆಂದ ಸ್ವಾಮೀಜಿ, ಪ್ರತಿನಿತ್ಯ ನಾವು ಸಾವಿನತ್ತ ಸಾಗುತ್ತಿದ್ದು, ಧರ್ಮದ ಪರಿಪಾಲನೆಯೊಂದಿಗೆ ಧರ್ಮ ಮಾರ್ಗದಲ್ಲಿ ನಡೆದರೆ ಪುಣ್ಯವಂತರಾಗುತ್ತೇವೆ ಎಂದು ಹೇಳಿದರು.

ಈ ಕ್ರೀಡಾಕೂಟ ಒಂದು ಹಬ್ಬ ಮಾತ್ರವಲ್ಲ, ಎಲ್ಲರನ್ನೂ ಒಟ್ಟು ಸೇರಿಸಿ, ಒಗ್ಗಟ್ಟಿನಿಂದ ಬಾಳುವೆ ನಡೆಸಲು ಸ್ಥಾನ ಕಲ್ಪಿಸಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮನಸ್ಸನ್ನು ಬೆರೆಸುವ ಕೂಟ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ದೇವರಗುಂಡ ಸದಾನಂದ ಗೌಡ ಅವರು ಮೂಲೆ - ಮೂಲೆಗಳಲ್ಲಿರುವ ಜನಾಂಗ ಬಾಂಧವರನ್ನು ಒಟ್ಟು ಸೇರಿಸಿ ಒಂದೇ ವೇದಿಕೆಯಡಿ ಕೂಡಿಸುವ ಇದು ಹೆಸರಿಗೆ ಮಾತ್ರ ಕ್ರೀಡಾಕೂಟವಾಗಿದ್ದು, ಇದು ಮನಸ್ಸನ್ನು ಒಂದು ಮಾಡುವ ಕೂಟವಾಗಿದೆ ಎಂದು ಹೇಳಿದರು. ಕೊಡಗು ಒಂದು ವಿಭಿನ್ನ ಜಿಲ್ಲೆ ಎಂದು ಬಣ್ಣಿಸಿದ ಗೌಡರು, ವಿಶೇಷ ಜಿಲ್ಲೆಯಲ್ಲಿ ಎರಡು ಸಮುದಾಯದವರು ಎಲ್ಲರನ್ನೂ ಹತ್ತಿರ ಸೇರಿಸಲು ಹಾಕಿ ಹಾಗೂ ಕ್ರಿಕೆಟ್‍ನಂತಹ ಕ್ರೀಡಾಕೂಟಗಳನ್ನು ಹಮ್ಮಿಕೊಂಡಿರುವದು ಸ್ವಾಗತಾರ್ಹವೆಂದರು. ಕ್ರೀಡೆಯಿಂದ ಸಾಮರಸ್ಯ, ದೈಹಿಕ ಸಾಮಥ್ರ್ಯ ವೃದ್ಧಿಸುತ್ತದೆ. ಹಾದಿ ತಪ್ಪುತ್ತಿರುವ ಯುವ ಸಮೂಹವನ್ನು ರಕ್ಷಿಸಲು ಸಾಧ್ಯವಾಗುತ್ತದೆ ಎಂದರು. ಯುವ ವೇದಿಕೆ ಕ್ರೀಡೆಯೊಂದಿಗೆ ಸಾಮಾಜಿಕ ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿರುವದು ಶ್ಲಾಘನಾರ್ಹ. ದೇಶ ಮುಂದುವರಿಕೆಯಲ್ಲಿ ಇಂತಹ ಕಾರ್ಯಗಳು ಅಗತ್ಯವಾಗಿವೆ ಎಂದರು.

ಸರಕಾರದ ಪ್ರೋತ್ಸಾಹ ಬೇಕು

ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ವಿಶೇಷ ಇತಿಹಾಸ ಹೊಂದಿರುವ ರಾಜ್ಯ, ರಾಷ್ಟ್ರಕ್ಕೆ ಕ್ರೀಡಾಳುಗಳನ್ನು ನೀಡಿದ ಜಿಲ್ಲೆಗೆ ಸರಕಾರ ಇನ್ನಷ್ಟು ಪ್ರೋತ್ಸಾಹ ನೀಡಿದರೆ, ವಿಶ್ವಮಟ್ಟದಲ್ಲಿ ಸ್ಪರ್ಧೆಯೊಡ್ಡುವಷ್ಟರ ಮಟ್ಟಿಗೆ ಕ್ರೀಡಾಳುಗಳು ರೂಪುಕೊಳ್ಳಬಹುದೆಂದು ಹೇಳಿದರು. 17 ದಿನಗಳ ಕಾಲ ನಡೆಯುವ ಕ್ರೀಡಾಕೂಟ ಯಶಸ್ವಿಯಾಗಲೆಂದು ಹೇಳಿದ ಅವರು, ಸಮಾಜದಲ್ಲಿ ಭಾವೈಕ್ಯತೆಯ ವಾತಾವರಣ ಸೃಷ್ಟಿಯಾಗಲು ಈ ರೀತಿಯ ಕ್ರೀಡಾಕೂಟಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಅಭಿಪ್ರಾಯಪಟ್ಟರು. ಸಮಾಜದಲ್ಲಿನ ವಿಶ್ವಾಸದ ಕೊರತೆ, ದ್ವೇಷದ ಮನೋಭಾವನೆ ಹೋಗಲಾಡಿಸಲು ಕ್ರೀಡೆಯಿಂದ ಸಾಧ್ಯವೆಂದ ಅವರು, ಇಲ್ಲಿ ಎಲ್ಲರೂ ಒಂದೇ ಕುಟುಂಬದವರಂತೆ ಸೇರಿರುವದು ಸಂತೋಷದ ವಿಷಯವೆಂದರು.

ಆದರ್ಶವಾಗಲಿ

ಪೈಕೇರ ಕ್ರಿಕೆಟ್ ಉತ್ಸವದ ಪ್ರತಿಕ್ಷಣದ ಮಾಹಿತಿ ಒದಗಿಸುವ ಆನ್‍ಲೈನ್ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ವೀರಾಜಪೇಟೆ ಕ್ಷೇತ್ರದ ಶಾಸಕ ಕೊಂಬಾರನ ಜಿ. ಬೋಪಯ್ಯ ಅವರು ಕಳೆದ 17 ವರ್ಷಗಳಿಂದ ನಿರಂತರವಾಗಿ ಸಮಾಜವನ್ನು ಒಗ್ಗೂಡಿಸಿಕೊಂಡು ಬರುತ್ತಾ, ಉತ್ತಮ ಸಂದೇಶ ನೀಡುತ್ತಿರುವದು ಇತರ ಸಮಾಜಗಳಿಗೂ ಆದರ್ಶವಾಗಬೇಕೆಂದು ಹೇಳಿದರು. ಆಟದ ಮೂಲಕ ಒಟ್ಟಿಗೆ ಸೇರಿ ಆಚಾರ, ವಿಚಾರ, ಸಂಸ್ಕøತಿ ಬಗ್ಗೆ ಚರ್ಚೆ ಮಾಡುತ್ತಾ, ಒಗ್ಗಟ್ಟಿನ ಪ್ರದರ್ಶನ ನೀಡುತ್ತಿರುವದು ಬೇರೆ ಸಮಾಜಗಳಿಗೂ ಆದರ್ಶವಾಗಲಿ ಎಂದು ಹೇಳಿದರು.

ಭಾರತ ತಂಡವಾಗಲಿ

ಮುಖ್ಯ ಅತಿಥಿಯಾಗಿದ್ದ ಮಡಿಕೇರಿ ಕ್ಷೇತ್ರದ ಶಾಸಕರಾದ ಮಂಡೇಪಂಡ ಅಪ್ಪಚ್ಚುರಂಜನ್ ಮಾತನಾಡಿ, ವೀರರ ನಾಡು, ಕ್ರೀಡಾಪಟುಗಳ ಬೀಡು ಎಂದೇ ಖ್ಯಾತಿವೆತ್ತಿರುವ ಕೊಡಗಿನ ಕ್ರೀಡಾಪಟುಗಳು ರಾಜ್ಯಮಟ್ಟದ ಕ್ರೀಡಾಳುಗಳ ಪೈಕಿ ಶೇ. 50ರಷ್ಟಿರುವದು ಹೆಮ್ಮೆಯ ವಿಚಾರವೆಂದರು. ಮುಂದಿನ ದಿನಗಳಲ್ಲಿ ಹಾಕಿ ಹಾಗೂ ಕ್ರಿಕೆಟ್‍ನ ಭಾರತ ತಂಡದಲ್ಲಿ ಸಂಪೂರ್ಣ ಕೊಡಗಿನವರೇ ಆಡುವಂತಾಗಲಿ ಎಂದು ಆಶಿಸಿದರು.

ವಿಧಾನಪರಿಷತ್ ಸದಸ್ಯ ಮಂಡೇಪಂಡ ಸುನಿಲ್ ಸುಬ್ರಮಣಿ ಮಾತನಾಡಿ, ಕೊಡಗಿನವರ ರಕ್ತದಲ್ಲೇ ಕ್ರೀಡಾಪಟುಗಳಾಗುವ ಅವಕಾಶ ಸಿಕ್ಕಿದೆ. ಕ್ರೀಡಾಪಟುಗಳು, ಸೇನಾಧಿಕಾರಿಗಳನ್ನು ನೀಡಿದ ಜಿಲ್ಲೆಯಲ್ಲಿ ಎಲ್ಲರೂ ಕೂಡ ಆಚಾರ- ವಿಚಾರ ಉಳಿಸಿಕೊಂಡು ಒಗ್ಗಟ್ಟಿನಿಂದ ಬದುಕಬೇಕೆಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ರಾಜ್ಯದಲ್ಲೇ ಇಂತಹ ವಿಶೇಷ ಜಿಲ್ಲೆ ಎಲ್ಲಿಯೂ ಇಲ್ಲ. ಎಲ್ಲ್ಲ ಕಡೆಗಳಲ್ಲೀ ವಿವಿಧ ಕ್ರೀಡಾಕೂಟಗಳನ್ನು ಹಮ್ಮಿಕೊಂಡು ಬರುತ್ತಿದ್ದಾರೆ. ಹಾಕಿ ಪಂದ್ಯಾವಳಿಗೆ ಸರಕಾರ ಅನುದಾನ ಲಭಿಸುತ್ತಿದೆ. ಅದೇ ರೀತಿ ಈ ಕ್ರಿಕೆಟ್ ಉತ್ಸವಕ್ಕೂ ಸಿಗುವಂತಾಗಬೇಕೆಂದು ಹೇಳಿದರಲ್ಲದೆ, ಕ್ರೀಡಾಕೂಟಕ್ಕಾಗಿ ನಿಧಿ ಸ್ಥಾಪನೆ ಮಾಡಿದರೆ ಇನ್ನಷ್ಟು ಕ್ರೀಡಾಪಟುಗಳು ರೂಪುಗೊಂಡು ಕೀರ್ತಿ ತರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಮಾತನಾಡಿ, ಜನಾಂಗವನ್ನು ಒಗ್ಗೂಡಿಸುವ ದರೊಂದಿಗೆ ಕುಟುಂಬವನ್ನು ಒಗ್ಗೂಡಿಸುವಂತಹ ಕಾರ್ಯವನ್ನು ಯುವ ವೇದಿಕೆ ಮಾಡುತ್ತಿದೆ. ಕ್ರಿಕೆಟ್‍ನೊಂದಿಗೆ ದೇಶೀಯ ಕ್ರೀಡೆ ಕಬಡ್ಡಿಗೂ ಪ್ರೋತ್ಸಾಹ ನೀಡುವದಲ್ಲದೆ, ಸಂಸ್ಕøತಿಯನ್ನು ಉಳಿಸುವ ಕಾರ್ಯವನ್ನು ಕೂಡ ಮಾಡುತ್ತಿದೆ. ಅಕಾಡೆಮಿ ವತಿಯಿಂದ ಈ ಕಾರ್ಯಕ್ಕೆ ಉತ್ತೇಜನ ಹಾಗೂ ಪ್ರೋತ್ಸಾಹ ನೀಡಲಾಗುವದೆಂದರು. ಭಾಷೆ, ಸಾಹಿತ್ಯ, ಸಂಸ್ಕøತಿ ಉಳಿಸಿ ಬೆಳೆಸಲು ಪ್ರಯತ್ನಿಸುವದಾಗಿ ಹೇಳಿದರು.

ವೇದಿಕೆಯಲ್ಲಿ ಮಾಜಿ ಸಚಿವ ಬಿ.ಎ. ಜೀವಿಜಯ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಪೈಕೇರ ಕುಟುಂಬದ ಪಟ್ಟೆದಾರ ಪೈಕೇರ ನಂಜುಂಡ, ಪೈಕೇರ ಕ್ರಿಕೆಟ್ ಸಮಿತಿ ಅಧ್ಯಕ್ಷ ಅನಂತ್‍ರಾಂ, ಗೌಡ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೋರನ ವಿಶ್ವನಾಥ, ಮಡಿಕೇರಿ ಕರವಲೆ ಭಗವತಿ ಗೌಡ ಒಕ್ಕೂಟದ ಅಧ್ಯಕ್ಷ ಬೈಚನ ಸೋಮಣ್ಣ, ಚೌಡೇಶ್ವರಿ ಕೂಟದ ಕುದುಪಜೆ ಆನಂದ, ಸುದರ್ಶನ ಕೂಟದ ಪಾಣತ್ತಲೆ ಬಿದ್ದಪ್ಪ, ವಿಜಯ ವಿನಾಯಕ ಕೂಟದ ಕುರಿಕಡ ಆನಂದ, ಕಾಮಾಕ್ಷಿ ಗೌಡ ಕೂಟದ ಪೈಕೇರ ನಂದ, ಯುವ ವೇದಿಕೆ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಕೊಡಗು ಗೌಡ ವಿದ್ಯಾ ಸಂಘದ ನಿರ್ದೇಶಕರಾದ ಪರಿಚನ ಸತೀಶ್ ತಿಮ್ಮಯ್ಯ, ಪೊಕ್ಕುಳಂಡ್ರ ಮನೋಜ್, ಯುವ ವೇದಿಕೆ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷ್ಮಣ್ ಇನ್ನಿತರರಿದ್ದರು.

ಪೈಕೇರ ಕುಟುಂಬದ ಮಹಿಳೆಯರು, ಪುಟಾಣಿಗಳು, ಪ್ರಾರ್ಥಿಸಿದರೆ, ಯುವ ವೇದಿಕೆ ಪುಟಾಣಿಗಳು ಸ್ವಾಗತ ನೃತ್ಯ ಮಾಡಿದರು. ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಚಾರ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ನಿರೂಪಿಸಿದರೆ, ನಿರ್ದೇಶಕ ಕಟ್ಟೆಮನೆ