ನಾಪೆÇೀಕ್ಲು, ಏ. 21: ನಾಪೆÇೀಕ್ಲು ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೊಡವ ಕುಟುಂಬಗಳ ನಡುವೆ ನಡೆಯುತ್ತಿರುವ ಬಿದ್ದಾಟಂಡ ಕಪ್ ಹಾಕಿ ನಮ್ಮೆಯ ಐದನೇ ದಿನದ ಪಂದ್ಯಾಟದಲ್ಲಿ ಪಾಂಡಂಡ, ಮಂಡೀರ, ಅಂಜಪರವಂಡ, ಕಂಬೇಯಂಡ, ಬಲ್ಯಂಡ, ಅಮ್ಮಾಟಂಡ, ಚೇನಂಡ, ಇಟ್ಟೀರ, ಮಾಳೇಟಿರ, ಚೋಯಮಾಡಂಡ, ಚೇಂದಿರ, ಓಡಿಯಂಡ, ನಡಿಕೇರಿಯಂಡ, ಕಲ್ಲೇಂಗಡ, ತಡಿಯಂಡ, ತೀತಿಮಾಡ, ಮೇಕೇರಿರ, ಕೀತಿಯಂಡ, ಕಂಬೀರಂಡ, ಕರ್ತಮಾಡ, ಪುಟ್ಟಿಚ್ಚಂಡ, ಕಲ್ಯಾಟಂಡ ತಂಡಗಳು ಜಯಗಳಿಸುವ ಮೂಲಕ ಮುಂದಿನ ಸುತ್ತಿಗೆ ಪ್ರವೇಶಿಸಿವೆ.

ನಾಟೋಳಂಡ ಮತ್ತು ಪಾಂಡಂಡ ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ಪಾಂಡಂಡ ತಂಡವು ನಾಟೋಳಂಡ ತಂಡವನ್ನು 3-1 ಗೋಲಿನ ಅಂತರದಿಂದ ಪರಾಭವಗೊಳಿಸಿತು. ಪಾಂಡಂಡ ತಂಡದ ವಚನ್ ನಾಣಯ್ಯ 1, ಚರಣ್ ಚಂಗಪ್ಪ 1, ರೋಹನ್ ಮೇದಪ್ಪ 1 ಗೋಲು ದಾಖಲಿಸಿದರೆ, ನಾಟೋಳಂಡ ತಂಡದ ಪರ ನವೀನ್ 1 ಗೋಲು ದಾಖಲಿಸಿದರು. ಪೆಮ್ಮುಡಿಯಂಡ ಮತ್ತು ಮಂಡೀರ ತಂಡಗಳ ನಡುವಿನ ಪಂದ್ಯದಲ್ಲಿ ಮಂಡೀರ ತಂಡವು 2-0 ಗೋಲಿನಿಂದ ಪೆಮ್ಮುಡಿಯಂಡ ತಂಡವನ್ನು ಸೋಲಿಸಿತು. ಮಂಡಿರ ತಶ್ವಿನ್ ದೇವಯ್ಯ ಮತ್ತು ಶಿಶಿರ್ ತಲಾ ಒಂದೊಂದು ಗೋಲು ದಾಖಲಿಸಿದರು. ಅಂಜಪರವಂಡ ಮತ್ತು ಮಾಳೆಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಅಂಜಪರವಂಡ ತಂಡ 5-0 ಗೋಲುಗಳ ಅಂತರದಿಂದ ಮಾಳೆಯಂಡ ತಂಡವನ್ನು ಮಣಿಸಿತು. ಅಂಜಪರವಂಡ ರೋಷನ್ ಮಾದಪ್ಪ 2 ಗೋಲು, ಶರನ್ ಕಾರ್ಯಪ್ಪ, ವಿನಯ್ ಪೆÇನ್ನಣ್ಣ, ಚಿರಾಗ್ ಚಿಣ್ಣಪ್ಪ ತಲಾ ಇಂದೊಂಡು ಗೋಲು ದಾಖಲಿಸಿದರು. ಅಳಮೇಂಗಡ ಮತ್ತು ಕಂಬೆಯಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಕಂಬೆಯಂಡ ತಂಡವು 2-1 ಗೋಲಿನ ಅಂತರದಿಂದ ಅಳಮೇಂಗಡ ತಂಡವನ್ನು ಪರಾಭವಗೊಳಿಸಿದರು. ಅಳಮೇಂಗಡ ತಂಡದ ಸುತನ್ ಸೋಮಣ್ಣ 1 ಗೋಲು ದಾಖಲಿಸಿದರೆ, ಕಂಬೆಯಂಡ ತಂಡದ ಪರ ಜೀವನ್ ಮತ್ತು ಶಶಿ ನಾಣಯ್ಯ ತಲಾ ಒಂದೊಂದು ಗೋಲು ದಾಖಲಿಸಿದರು. ಮನೆಯಪಂಡ ಮತ್ತು ಬೊಳಿಯಾಡಿರ ತಂಡಗಳ ನಡುವಿನ ಪಂದ್ಯದಲ್ಲಿ ಬೊಳಿಯಾಡಿರ ತಂಡವು 2-1 ಗೋಲಿನ ಅಂತರದಿಂದ ಜಯಗಳಿಸಿತು.

ಬೊಳಿಯಾಡಿರ ಅಯ್ಯಪ್ಪ ಮತ್ತು ಚೇತನ್ ತಲಾ ಒಂದೊಂದು ಗೋಲು ದಾಖಲಿಸಿದರೆ, ಮನೆಯಪಂಡ ತಂಡದ ಪರ ಬೋಪಣ್ಣ ಒಂದು ಗೋಲು ದಾಖಲಿಸಿದರು. ನೆಲ್ಲಿರ ಮತ್ತು ಅಮ್ಮಾಟಂಡ ತಂಡಗಳ ನಡುವಿನ ಪಂದ್ಯದಲ್ಲಿ ಅಮ್ಮಾಟಂಡ ತಂಡವು ನೆಲ್ಲಿರ ತಂಡವನ್ನು 4-1 ಗೋಲುಗಳಿಂದ ಪರಾಭವಗೊಳಿಸಿತು. ಅಮ್ಮಾಟಮಡ ತಂಡದ ಪರ ಚಿರಾಗ್ 2 ಮತ್ತು ಮೇದಪ್ಪ ಮತ್ತು ಕುಶಾಲಪ್ಪ ಒಂದೊದು ಗೋಲು ದಾಖಲಿಸಿದರು. ನೆಲ್ಲಿರ ತಂಡದ ಪರ ದರ್ಶನ ಒಂದು ಗೋಲು ದಾಖಲಿಸಿದರು. ಚೇನಂಡ ಮತ್ತು ಚಟ್ಟಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಚೇನಂಡ ತಂಡವು ಚಟ್ಟಂಗಡ ತಂಡವನ್ನು 4-0 ಗೋಲಿನಿಂದ ಪರಾಭವಗೊಳಿಸಿತು. ಚೇನಂಡ ದಿನೇಶ್ 2 ಮತ್ತು ಕುಟ್ಟಪ್ಪ, ಮಯೂರ್ ತಿಮ್ಮಯ್ಯ ಒಂದೊಂದು ಗೋಲು ದಾಖಲಿಸಿದರು. ಪಳಂಗಿಯಂಡ ಮತ್ತು ಇಟ್ಟೀರ ತಂಡಗಳ ನಡುವಿನ ಪಂದ್ಯದಲ್ಲಿ ಇಟ್ಟೀರ ತಂಡವು ಪಳಂಗಿಯಂಡ ತಂಡವನ್ನು 6-1 ಗೋಲಿನ ಅಂತರದಿಂದ ಮಣಿಸಿತು. ಇಟ್ಟೀರ ರೋಶನ್ ಮತ್ತು ಅಚ್ಚಯ್ಯ ತಲಾ 2 ಗೋಲು, ಕಾಳಪ್ಪ ಮತ್ತು ಕುಟ್ಟಪ್ಪ ತಲಾ ಒಂದೊಂದು ಗೋಲು ದಾಖಲಿಸಿದರೆ, ಪಳಂಗಿಯಂಡ ಮಾಚಯ್ಯ ಒಂದು ಗೋಲು ದಾಖಲಿಸಿದರು. ಮಾಳೇಟಿರ ಮತ್ತು ಪಟ್ಟಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಳೇಟಿರ ತಂಡವು 3-2 ಗೋಲಿನ ಅಂತರದಲ್ಲಿ ಜಯಗಳಿಸಿತು. ಮಾಳೇಟಿರ ಪ್ರಶಾಂತ್ ಉತ್ತಪ್ಪ, ರೋಹನ್ ಕಾಳಪ್ಪ, ನವೀನ್ ನಂಜಪ್ಪ ತಲಾ ಒಂದೊಂದು ಗೋಲು ದಾಖಲಿಸಿದರೆ, ಪಟ್ಟಡ ಅಪ್ಪಚ್ಚು ಎರಡು ಗೋಲು ದಾಖಲಿಸಿದರು. ಚೋಯಮಾಡಂಡ ಮತ್ತು ಮೊಳ್ಳೆರ ತಂಡಗಳ ನಡುವಿನ ಪಂದ್ಯದಲ್ಲಿ ಚೋಯಮಾಡಂಡ ತಂಡವು 4-0 ಗೋಲಿನಿಂದ ಮೊಳ್ಳೆರ ತಂಡವನ್ನು ಸೋಲಿಸಿತು. ಚೋಯಮಾಡಂಡ ತಂಡದ ಪರ ಚಂಗಪ್ಪ, ಸೋಮಣ್ಣ, ಶರತ್, ಬಿದ್ದಪ್ಪ ಒಂದೊಂದು ಗೋಲು ದಾಖಲಿಸಿದರು. ಚೇಂದಿರ ಮತ್ತು ಕೇಟೋಳಿರ ತಂಡಗಳ ನಡುವಿನ ಪಂದ್ಯದಲ್ಲಿ ಚೇಂದಿರ ತಂಡವು 4-0 ಗೋಲಿನ ಅಂತರದಿಂದ ಕೇಟೋಳಿರ ತಂಡವನ್ನು ಪರಾಭವಗೊಳಿಸಿತು. ಚೇಂದಿರ ಸಂದೇಶ್ ಸೋಮಯ್ಯ 2 ಮತ್ತು ಡೆನ್ನಿ, ರೋಶನ್ ಒಂದೊಂದು ಗೋಲು ದಾಖಲಿಸಿದರು.

ಓಡಿಯಂಡ ಮತ್ತು ಬಾಚಿರ ತಂಡಗಳ ನಡುವಿನ ಪಂದ್ಯದಲ್ಲಿ ಓಡಿಯಂಡ ತಂಡವು 4-3 ಗೋಲಿನ ಅಂತರದಲ್ಲಿ ಬಾಚಿರ ತಂಡವನ್ನು ಸೋಲಿಸಿತು. ಬಾಚಿರ ತಂಡದ ಪರ ಸಚೀನ್ ಬೋಪಣ್ಣ 2, ಬಿದ್ದಪ್ಪ ಒಂದು ಗೋಲು ದಾಖಲಿಸಿದರೆ, ಓಡಿಯಂಡ ತಂಡದ ಪರ ಮಂಜು ಮಂದಣ್ಣ, ವಿನ್ಸಿ ಪೊನ್ನಪ್ಪ, ಕೀರ್ತನ್ ಕಾರ್ಯಪ್ಪ, ಪೊನ್ನಣ್ಣ ಒಂದೊಂದು ಗೋಲು ದಾಖಲಿಸಿದರು. ಬೊಳನಾಡಂಡ ಮತ್ತು ನಡಿಕೇರಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ನಡಿಕೇರಿಯಂಡ ತಂಡವು ಬೊಳನಾಡಂಡ ತಂಡವನ್ನು 5-0 ಗೋಲಿನಿಂದ ಪರಾಭವಗೊಳಿಸಿತು. ನಡಿಕೇರಿಯಂಡ ತಿಲಕ್, ಅಮೋಘ್ ತಲಾ ಎರಡು ಗೋಲು ದಾಖಲಿಸಿದರೆ, ಗಿರಿ ಒಂದು ಗೋಲು ದಾಖಲಿಸಿದರು. ಕಲ್ಲೆಂಗಡ ಮತ್ತು ನಾಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಲ್ಲೆಂಗಡ ತಂಡವು ನಾಪಂಡ ತಂಡವನ್ನು 5-1 ಗೋಲಿನ ಅಂತರದಿಂದ ಸೋಲಿಸಿತು. ನಾಪಂಡ ಡೆನ್ನಿ ಚಂಗಪ್ಪ ತಂಡದ ಪರ ಒಂದು ಗೋಲು ದಾಖಲಿಸಿದರೆ, ಕಲ್ಲೇಂಗಡ ತಂಡದ ಪರ ಸುತನ್ ಮತ್ತು ಬೋಪಣ್ಣ ತಲಾ ಎರಡು ಮತ್ತು ಮೋನಿಶ ಒಂದು ಗೋಲು ದಾಖಲಿಸಿದರು. ತಡಿಯಂಡ ಮತ್ತು ಮಲ್ಲಿಮಾಡ ತಂಡಗಳ ನಡುವಿನ ಪಂದ್ಯದಲ್ಲಿ ತಡಿಯಂಡ ತಂಡವು ಬಲ್ಲಿಮಾಡ ತಂಡವನ್ನು ಒಂದು ಗೋಲಿನ ಅಂತರದಿಂದ ಮಣಿಸಿತು.

ತಡಿಯಂಡ ತಂಡದ ಪರ ಕುಶ ಒಂದು ಗೋಲು ದಾಖಲಿಸಿದರು. ತೀತಿಮಾಡ ಮತ್ತು ಬೊಳ್ಳೆಪಂಡ ತಂಡಗಳ ನಡುವಿನ ಪಂದ್ಯದಲ್ಲಿ ತೀತಿಮಾಡ ತಂಡವು ಬೊಳ್ಳೆಪಂಡ ತಂಡವನ್ನು 3-0 ಅಂತರದಿಂದ ಪರಾಭವಗೊಳಿಸಿತು. ತೀತಿಮಾಡ ತಂಡದ ಪರ ಪ್ರಜ್ವಲ್, ಬೋಪಣ್ಣ, ಮನು ಮುತ್ತಣ್ಣ ಒಂದೊಂದು ಗೋಲು ದಾಖಲಿಸಿದರು. ಮೇಕೇರಿರ ಮತ್ತು ಅಚ್ಚಾಂಡಿರ ತಂಡಗಳ ನಡುವಿನ ಪಂದ್ಯದಲ್ಲಿ ಮೇಕೇರಿರ ತಂಡವು ಅಚ್ಚಾಂಡಿರ ತಂಡವನ್ನು 4-0 ಗೋಲಿನಿಂದ ಸೋಲಿಸಿತು. ಮೇಕೇರಿರ ನಿತೀನ್ ತಿಮ್ಮಯ್ಯ ಎರಡು ಮತ್ತು ತಮ್ಮಯ್ಯ ಹಾಗೂ ಚೇತನ್ ಒಂದೊಂದು ಗೋಲು ದಾಖಲಿಸಿದರು. ನೆರವಂಡ ಮತ್ತು ಕೀತಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೀತಿಯಂಡ ತಂಡವು ಟೈಬ್ರೇಕರ್ ಮೂಲಕ ನೆರವಂಡ ತಂಡವನ್ನು ಸೋಲಿಸಿತು. ಕಂಬೀರಂಡ ಮತ್ತು ಅಣ್ಣೀರ ತಂಡಗಳ ನಡುವಿ ಪಂದ್ಯ ಅಣ್ಣೀರ ತಂಡದ ಗೈರುಹಾಜರಿನ ಕಾರಣ ಕಂಬೀರಂಡ ತಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ತೀತಿರ ಮತ್ತು ಕರ್ತಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಕರ್ತಮಾಡ ತಂಡವು 4-1 ಗೋಲಿನಿಂದ ತೀತಿರ ತಂಡವನ್ನು ಸೋಲಿಸಿತು. ಕರ್ತಮಾಡ ಲವ ಮೇದಪ್ಪ 3 ಮತ್ತು ಲತೇಶ್ ಒಂದು ಗೋಲು ದಾಖಲಿಸಿದರು. ತೀತಿರ ತಂಡದ ಪರ ಕೃಷಿಕ್ ಬಿದ್ದಪ್ಪ ಒಂದು ಗೋಲು ದಾಖಲಿಸಿದರು. ಮೇಚಿಯಂಡ ಮತ್ತು ಪುಟ್ಟಿಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಪುಟ್ಟಿಚಂಡ ತಂಡವು ಮೇಚಿಯಂಡ ತಂಡವನ್ನು 2-0 ಗೋಲಿನಿಂದ ಸೋಲಿಸಿತು. ಪುಟ್ಟಿಚಂಡ ತಂಡದ ಪರ ಮಧು ಮಾದಪ್ಪ, ಬಿಪಿನ್ ತಿಮ್ಮಯ್ಯ ಒಂದೊಂದು ಗೋಲು ದಾಖಲಿಸಿದರು. ಕಲ್ಯಾಟಂಡ ಮತ್ತು ಬಿದ್ದಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಲ್ಯಾಟಂಡ ತಂಡವು ಸಡನ್ ಡೆತ್ ಮೂಲಕ 8-7 ಗೋಲಿನ ಅಂತರದಲ್ಲಿ ಬಿದ್ದಂಡ ತಂಡವನ್ನು ಸೋಲಿಸಿತು. ಮೊದಲು ನಡೆದ ಪಂದ್ಯದಲ್ಲಿ ಬಿದ್ದಂಡ ಬೋಪಯ್ಯ ಮತ್ತು ಕಲ್ಯಾಟಂಡ ವರುಣ್ ಬೆಳ್ಯಪ್ಪ ದಾಖಲಿಸಿದ ಒಂದೊಂದು ಗೋಲಿನಿಂದ ಪಂದ್ಯ ಡ್ರಾ ಗೊಂಡಿತ್ತು.