ಸುಂಟಿಕೊಪ್ಪ, ಏ.21: ಕೊಡಗರಹಳ್ಳಿಯ ಶ್ರೀ ಮಹಾವಿಷ್ಣು ಹಾಗೂ ಶ್ರೀ ಚಾಮುಂಡೇಶ್ವರಿ, ರಕ್ತೇಶ್ವರಿ ಪರಿವಾರ ದೇವರುಗಳ 39ನೇ ವಾರ್ಷಿಕ ಮಹೋತ್ಸವಕ್ಕೆ ತಾ.24 ರಂದು ಬೆಳಿಗ್ಗೆ 6.30 ಗಂಟೆಗೆ ಗಣಪತಿ ಹೋಮ, ಕೊಡಿ ಏರಿಸುವುದರೊಂದಿಗೆ ಚಾಲನೆಗೊಳ್ಳಲಿದೆ. ರಾತ್ರಿ 8.30 ಗಂಟೆಗೆ ದೀಪಾರಾಧನೆ ಪೂಜೆ ಹಾಗೂ 9.30 ಗಂಟೆವರೆಗೆ ಏಳುಸುತ್ತಿನ ಪ್ರದಕ್ಷಿಣೆ ನಡೆಯಲಿದೆ. ತಾ.25 ರಂದು ಬೆಳಿಗ್ಗೆ 6.30 ರಿಂದ 9.30 ಗಂಟೆವರೆಗೆ ಶ್ರೀ ಚಾಮುಂಡೇಶ್ವರಿಗೆ ಅಭಿಷೇಕ ಪೂಜೆ ಬೆಳಿಗ್ಗೆ 10 ಗಂಟೆಗೆ ದರ್ಶನ, ಬೆಳಿಗ್ಗೆ 11 ಗಂಟೆಗೆ ಹರಕೆ ಮತ್ತು ಬೇಡಿಕೆ ರಾತ್ರಿ 8 ಗಂಟೆಗೆ ಕೇರಳದ ತಂಡದಿಂದ ಮೂರ್ತಿಯ ಕೋಲ ಮತ್ತು ಮೇಲೆರಿಗೆ ಅಗ್ನಿಸ್ಪರ್ಶ, ಕುಟ್ಟಿಚಾತ, ಬೈರವ ಮತ್ತು ಕೊಚ್ಚುಟ್ಟಿ ಕೋಲ, ಕೊರತಿಕೋಲ, ಗುಳಿಗನ ಕೋಲ ನಡೆಯಲಿದೆ.

ತಾ.26 ರಂದು ಬೆಳಿಗ್ಗೆ 5 ಗಂಟೆಗೆ ಅಜ್ಜಪ್ಪ ಕೋಲ, 6 ಗಂಟೆಗೆ ವಿಷ್ಣುಮೂರ್ತಿ ಕೋಲ ಮತ್ತು ಅಗ್ನಿ ಪ್ರವೇಶ ಬೆಳಿಗ್ಗೆ 11 ಗಂಟೆಗೆ ರಕ್ತೇಶ್ವರಿ ಕೋಲ, ಚಾಮುಂಡೇಶ್ವರಿ ಕೋಲ, ರಾತ್ರಿ 8 ಗಂಟೆಗೆ ದೇವಿಗೆ ನೈವೇಧ್ಯ, ಆರ್ಪಿಸಲಾಗುವುದು ಎಂದು ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಆಡಳಿತ ಮಂಡಳಿಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.