ಮಡಿಕೇರಿ, ಏ. 21 : ಕೊಡಗು ಜಿಲ್ಲೆಯಲ್ಲಿ ಎಲೆ ಮರೆಯ ಕಾಯಿಯಂತಿರುವ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ತಿಳಿಸಿದ್ದಾರೆ.ಎವರ್ ಶೈನ್ ಯೂತ್ಸ್ ಅರ್ಪಿಸಿರುವ “ಪೀಚೆಕತ್ತಿ” ಕೊಡವ ಧ್ವನಿ ಸುರುಳಿ ಬಿಡುಗಡೆಯ ಸರಳ ಕಾರ್ಯಕ್ರಮ ನಗರದ ಪತ್ರಿಕಾ ಭವನದಲ್ಲಿ ನಡೆಯಿತು. ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ವೀಣಾ ಅಚ್ಚಯ್ಯ, ಜಿಲ್ಲೆಯಲ್ಲಿರುವ ಯುವ ಪ್ರತಿಭೆಗಳಿಗೆ ಅವಕಾಶಗಳನ್ನು ಸೃಷ್ಟಿಸುವ ಪ್ರಯತ್ನಗಳು ನಡೆಯಬೇಕೆಂದರು.ಉದ್ಯಮಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಮಿಕ ಘಟಕದ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಮಾತನಾಡಿ, ವಿದ್ಯಾರ್ಥಿ ಜೀವನದಿಂದಲೇ ಕಲಾಪ್ರತಿಭೆಯನ್ನು ಪ್ರದರ್ಶಿಸುವ ಯುವ ಸಮೂಹಕ್ಕೆ ಜಿಲ್ಲೆಯ ಜನ ಪ್ರೋತ್ಸಾಹ ನೀಡಬೇಕೆಂದರು.

ಸಂಚಾಲಕರು ಹಾಗೂ ಹಾಡುಗಾರ ರೀಮಾ ಕುಶಾಲಪ್ಪ ಧ್ವನಿ ಸುರುಳಿಯ ಕುರಿತು ಮಾಹಿತಿ ನೀಡಿದರು.

ಎವರ್ ಶೈನ್ ಯೂತ್ಸ್ ಸಂಗೀತ ನೀಡಿರುವ, ಕೊಚ್ಚಿನ್‍ನ ವಿಲ್ಸಟನ್ ವಾದ್ಯ ಸಂಯೋಜನೆ ಮಾಡಿರುವ “ಪೀಚೆಕತ್ತಿ” ಧ್ವನಿ ಸುರುಳಿಯಲ್ಲಿ ಏಳು ಹಾಡುಗಳಿವೆ. ಕ್ಯಾಲೇಟಿರ ಚಿತ್ರಾ ನಾಣಯ್ಯ, ನಾಯಕಂಡ ಗೌತಮ್ ಸೋಮಣ್ಣ, ಪುಚ್ಚಿಮಾಡ ಶಾಂತಿ ಶಿವಪ್ಪ, ಉಳ್ಳಿಯಡ ಡಾಟಿ ಪೂವಯ್ಯ, ಐತಿಚಂಡ ರಿಕಿನ್ ಉತ್ತಪ್ಪ, ನಾಯಕಂಡ ಗೌತಮ್ ಸೋಮಣ್ಣ, ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ಸಾಹಿತ್ಯ ನೀಡಿದ್ದಾರೆ.

ಹಾಡುಗಾರ ಬಟ್ಟಿಯಂಡ ಲಿಖಿತ, ಮುದ್ದಿಯಡ ಕರಣ್ ಕಾವೇರಪ್ಪ ಹಾಗೂ ಮಾಳೆಯಂಡ ಗೌರವ್ ಗಣಪತಿ ಉಪಸ್ಥಿತರಿದ್ದರು.