ಮಡಿಕೇರಿ, ಏ. 23: ಕರ್ನಾಟಕ ರಾಜ್ಯ ವಿಧಾನ ಪರಿಷತ್‍ನ ಸದಸ್ಯ ಎಂ.ಪಿ ಸುನಿಲ್ ಸುಬ್ರಮಣಿ ತಾ. 20 ರಂದು ಕುಟ್ಟ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ಪರಿಶೀಲಿಸಿದರು. ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಗೈರು ಹಾಜರಾಗಿರುವದು ಕಂಡು ಬಂದಿತು.

ಸಭೆಗೆ ಬಂದಿದ್ದ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಪಿ.ಡಿ.ಓ. ಅವರಿಂದ ಸಮಗ್ರ ಮಾಹಿತಿ ಪಡೆದರು. ರಸ್ತೆಗಳು, ಕುಡಿಯುವ ನೀರು, ಗಡಿ ಸಮಸ್ಯೆ, ಪೈಸಾರಿ ನಿವಾಸಿಗಳ ಮೂಲಭೂತ ಸೌಕರ್ಯದ ಬಗ್ಗೆ, ಬೆಳೆ ಹಾನಿ, ಪರಿಹಾರ ಧನ ವಿತರಣೆ, ತ್ಯಾಜ್ಯ ವಿಲೇವಾರಿ ಮುಂತಾದ ಸಮಸ್ಯೆಗಳನ್ನು ಆಲಿಸಿದರು.

ಕೇರಳದಿಂದ ರಾತ್ರಿ ಸಮಯದಲ್ಲಿ ವೈದ್ಯಕೀಯ ತ್ಯಾಜ್ಯಗಳನ್ನು ಆನೆ ಕಂದಕದ ಒಳಗೆ ಹಾಕಿ ಗ್ರಾಮದ ವಾತಾವರಣವನ್ನು ಹಾಳು ಮಾಡುತ್ತಿದ್ದು, ಕೂಡಲೇ ಗಡಿ ಭಾಗದಲ್ಲಿ ಪೆÇಲೀಸ್ ಬಂದೋಬಸ್ತ್ ಮಾಡಲು ಸಾರ್ವಜನಿಕರು ಒತ್ತಾಯಿಸಿದರು. ಈ ಬಗ್ಗೆ ಪಿ.ಡಿ.ಓ. ಅವರಿಗೆ ಪೆÇಲೀಸ್ ದೂರು ನೀಡಲು ಸೂಚಿಸಿದರು. ಪೆÇಲೀಸ್ ಆರಕ್ಷಕ ರವಿ ಕಿರಣ್ ಅವರನ್ನು ಕರೆಸಿ ಸಮಸ್ಯೆಗಳ ಬಗ್ಗೆ ವಿಚಾರಿಸಿದರು. ಅಲ್ಲದೆ ಪೆÇಲೀಸ್ ಎ.ಡಿ.ಜಿ.ಪಿ. ಭಾಸ್ಕರ್ ರಾವ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಕುಟ್ಟ ಗಡಿ ಭಾಗದಲ್ಲಿ ಕೆ.ಎಸ್.ಆರ್.ಪಿ ಪೆÇಲೀಸ್ ಕಾವಲು ಪಡೆಯನ್ನು ಮಂಜೂರು ಮಾಡಿ, ಸೂಕ್ತ ಬಂದೋಬಸ್ತ್ ಮಾಡಲು ಕೋರಿದರು. ಈ ಬಗ್ಗೆ ಗೃಹ ಮಂತ್ರಿಗಳೊಂದಿಗೆ ಸಮಾಲೋಚಿಸಿ ಸೂಕ್ತ ಕ್ರಮ ವಹಿಸುವದಾಗಿ ಸಾರ್ವಜನಿಕರಿಗೆ ತಿಳಿಸಿದರು. ಸಭೆಯ ಮುಕ್ತಾಯ ಹಂತದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಸzಸ್ಯರಾದ ರಾಮಕೃಷ್ಣ ಆಗಮಿಸಿ ಗ್ರಾಮ ಪಂಚಾಯತಿಗೆ ಆಗಬೇಕಾದ ಕಾಮಗಾರಿಗಳ ಬಗ್ಗೆ ಮನವಿ ಸಲ್ಲಿಸಿದರು.

ಅಹವಾಲು ಸ್ವೀಕರಿಸಿ ಮಾತನಾಡಿದ ಶಾಸಕ ಎಂ.ಪಿ. ಸುನಿಲ್ ಸುಬ್ರಮಣಿ, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡುತ್ತಾ ಬಂದಿದ್ದೇನೆ. ಬರುವಾಗ ಇಲಾಖಾ ಅಧಿಕಾರಿಗಳ ಮೂಲಕ ಸಾರ್ವಜನಿಕರಿಗೆ ಹಾಗೂ ಜನಪ್ರತಿನಿಧಿಗಳಿಗೆ ಮಾಹಿತಿಯನ್ನು ಮುಂಚಿತವಾಗಿ ನೀಡಿ ಬರುತ್ತಿದ್ದೇನೆ. ಆದರೆ ಕುಟ್ಟ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರೇ ಗೈರು ಹಾಜರಾಗಿರುವದು ವಿಷಾದನೀಯ. ಚುನಾವಣಾ ಸಂದರ್ಭ ಪಕ್ಷ ನಿಷ್ಠೆ ಇರಲಿ. ಅಭಿವೃದ್ಧಿಗಾಗಿ ಪಕ್ಷ ಭೇದ ಮರೆತು ಕೆಲಸ ಮಾಡಬೇಕು. ಅದರಲ್ಲೂ ಗ್ರಾಮ ಪಂಚಾಯಿತಿ ಸದಸ್ಯರುಗಳು ಪಕ್ಷ ಭೇದ ಮರೆತು ಕೆಲಸ ಮಾಡಿದಲ್ಲಿ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ. ಇಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರುಗಳು ಎಲ್ಲರೂ ಗೈರು ಹಾಜರಾಗಿರುತ್ತಾರೆ. ಇನ್ನು ಮುಂದಿನ ದಿನಗಳಲ್ಲಾದರೂ ಅಭಿವೃದ್ಧಿಗಾಗಿ ಒಟ್ಟಾಗಿ ಶ್ರಮಿಸಲು ಸಲಹೆ ನೀಡಿದರು. ಕುಟ್ಟ ಗಡಿ ಭಾಗದಲ್ಲಿ ಹಲವಾರು ಸಮಸ್ಯೆಗಳಿವೆ.

ಸೂಕ್ತ ಪರಿಹಾರಕ್ಕಾಗಿ ಇಲ್ಲಿನ ಜನಪ್ರತಿನಿಧಿಗಳು ಮುಂದೆ ನಿಂತಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬಹುದು ಎಂದರು.

ಸಭೆಯಲ್ಲಿ ಆರ್.ಎಂ.ಸಿ. ಉಪಾಧ್ಯಕ್ಷ ಬಾಲಕೃಷ್ಣ, ತಾಲೂಕು ಪಂಚಾಯಿತಿ ಉಪಾದ್ಯಕ್ಷ ನೆಲ್ಲಿರ ಚಲನ್ ಕುಮಾರ್, ಸ್ಥಳೀಯ ಮುಖಂಡ ನವೀನ್, ಬೋಡುವಂಡ ದಿನೇಶ್, ಕಾಕೇರ ಸುರೇಶ್, ತೀತಿರ ರಾಜ, ಪಿ.ಡಿ.ಓ. ಹಾಗೂ ಇಲಾಖಾ ಅಧಿಕಾರಿಗಳು ಹಾಜರಿದ್ದರು.

ಇದೇ ಸಂದರ್ಭ ಕುಟ್ಟ ಗಡಿ ಭಾಗಕ್ಕೆ ಅರಣ್ಯ ಮತ್ತು ಪೆÇಲೀಸ್ ಇಲಾಖಾ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.