ಮಡಿಕೇರಿ, ಏ. 24 : ಕೊಡಗು ಜಿಲ್ಲಾ ಮುಸ್ಲಿಂ ಸ್ಪೋಟ್ರ್ಸ್ ಅಸೋಸಿಯೇಷನ್ ಹಾಗೂ ತಾಜ್ ಕ್ರ್ರಿಕೆಟರ್ಸ್ ವತಿಯಿಂದ 14ನೇ ವರ್ಷದ ಕೊಡಗು ಮುಸ್ಲಿಂ ಕ್ರಿಕೆಟ್ ಕಪ್ ಪಂದ್ಯಾವಳಿ ತಾ. 26 ರಿಂದ 30ರವರೆಗೆ ಕುಶಾಲನಗರದ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯಲಿದೆ. ಸುಮಾರು 85 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್‍ನ ಕಾರ್ಯದರ್ಶಿ ಸೈಫಾಲಿ, ಐದು ದಿನಗಳ ಕಾಲ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಯ ಕುರಿತು ಮಾಹಿತಿ ನೀಡಿದರು. ತಾ. 26 ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಮ್ ಅವರು ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ತಾಜ್ ಕ್ರಿಕೆಟರ್ಸ್‍ನ ಅಧ್ಯಕ್ಷರಾದ ಅಂಝದ್ ಹುಸೇನ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಸ್ಲಿಂ ಕ್ರಿಕೆಟ್ ಕಪ್‍ನ ಸ್ಥಾಪಕರಾದ ಅಬ್ದುಲ್ ರಶೀದ್ ಎಡಪಾಲ, ಪ್ರಾಯೋಜಕರಾದ ಉದ್ಯಮಿ ನಾಪಂಡ ಮುತ್ತಪ್ಪ, ಆಹಾರ ಖಾತೆ ಸಚಿವರಾದ ಯು.ಟಿ. ಖಾದರ್, ಪಶುಪಾಲನಾ ಖಾತೆ ಸಚಿವರಾದ ಎ. ಮಂಜು, ಶಾಸಕರುಗಳಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಮೊಯ್ದೀನ್ ಬಾವ, ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯರುಗಳಾದ, ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರುಗಳಾದ ಬಿ.ಎ. ಹರೀಶ್ ಮತ್ತಿತರ ಪ್ರಮುಖರು ಉಪಸ್ಥಿತರಿರುವರು.

ತಾ. 30 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಎಂ.ಎಂ. ಚರಣ್, ವಕ್ಫ್ ಮಂಡಳಿ ಅಧ್ಯಕ್ಷ ಅಬ್ದುಲ್ ರೆಹೆಮಾನ್, ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ವಿ.ಪಿ. ಶಶಿಧರ್, ಜಿಲ್ಲಾ ಪಂಚಾಯ್ತಿ ಸದಸ್ಯ ಅಬ್ದುಲ್ ಲತೀಫ್, ನಾಪೋಕ್ಲು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಇಸ್ಮಾಯಿಲ್, ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷರಾದ ಟಿ.ಆರ್. ಶರವಣ್, ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷರಾದ ಯಾಕೂಬ್, ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷರಾದ ಡಿ.ಹೆಚ್. ಸೂಫಿ, ಬೆಂಗಳೂರು ಆರ್‍ಟಿಒ ನಾಸಿರ್, ಕೊಡಗು ಮುಸ್ಲಿಂ ಸಮಾಜದ ಅಧ್ಯಕ್ಷ ಕೆ.ಎಂ.ಇಬ್ರಾಹಿಂ ಮಾಸ್ಟರ್, ಕೊಡಗು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮೊಹಮ್ಮದ್ ರಫಿ, ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷÀ ಮನ್ಸೂರ್ ಆಲಿ ಮತ್ತಿತರ ಪ್ರಮುಖರು ಉಪಸ್ಥಿತÀರಿರುವರು ಎಂದು ಸೈಫಾಲಿ ತಿಳಿಸಿದರು.

ಕಳೆದ ವರ್ಷ 67 ತಂಡಗಳು ಪಾಲ್ಗೊಂಡಿದ್ದು, ಈ ಬಾರಿ 85 ತಂಡಗಳು ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿವೆ. ವಿನ್ನರ್ಸ್‍ಗೆ ರೂ.50 ಸಾವಿರ ಹಾಗೂ ರನ್ನರ್ಸ್‍ಗೆ ರೂ.25 ಸಾವಿರ ನಗದು ಬಹುಮಾನ ನೀಡಲಾಗುವದೆಂದರು.

ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಅಧ್ಯಕ್ಷರಾದ ಅಬ್ದುಲ್ ಖಾದರ್, ನಿರ್ದೇಶಕರಾದ ರಷೀದ್ ಎಡಪಾಲ, ಅಬ್ದುಲ್ ಖಾದರ್, ಹ್ಯಾರೀಸ್, ಜೈನುಲ್ ಉಪಸ್ಥಿತರಿದ್ದರು.