ಸೋಮವಾರಪೇಟೆ, ಏ. 24: ಚೇಂಬರ್ ಆಫ್ ಕಾಮರ್ಸ್ನ ಸೋಮವಾರಪೇಟೆ ಸ್ಥಾನೀಯ ಸಮಿತಿ ಅಧ್ಯಕ್ಷರಾಗಿ ಮನುಕುಮಾರ್ ರೈ ಅವರು ಆಯ್ಕೆಯಾಗಿದ್ದಾರೆ.
ಚೇಂಬರ್ ಆಫ್ ಕಾಮರ್ಸ್ನ ನೂತನ ನಿರ್ದೇಶಕರ ಸಭೆಯಲ್ಲಿ ಆಡಳಿತ ಮಂಡಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ರಘು, ಪ್ರಧಾನ ಕಾರ್ಯದರ್ಶಿಯಾಗಿ ಜಯೇಶ್, ಖಜಾಂಚಿಯಾಗಿ ಎನ್.ಎಸ್. ಜಯರಾಂ, ಸಹ ಕಾರ್ಯದರ್ಶಿಯಾಗಿ ಚಂದನ ಸುಬ್ರಮಣಿ, ಸಂಘಟನಾ ಕಾರ್ಯದರ್ಶಿಯಾಗಿ ಧನುಕುಮಾರ್, ಸಲಹೆಗಾರರಾಗಿ ಬಿ.ಎಸ್. ಸದಾನಂದ್, ತಿಮ್ಮಶೆಟ್ಟಿ, ಪ್ರಮೋದ್ಕುಮಾರ್, ಪ್ರಸನ್ನಕುಮಾರ್, ವೀರರಾಜ್ ಅವರುಗಳನ್ನು ನೇಮಿಸಲಾಯಿತು. ಆಡಳಿತ ಮಂಡಳಿಯ ನಿರ್ದೇಶಕರುಗಳನ್ನಾಗಿ ಎನ್.ಜಿ. ಜನಾರ್ಧನ್, ಅಭಿಷೇಕ್, ಮಸಗೋಡು ಸತೀಶ್, ಮುರುಳಿ, ತುಳಸಿ ಸತೀಶ್, ಸುದರ್ಶನ್, ರಾಜನ್, ಸಂಜೀವ, ವಿಶಾಲ್ ಜನಾರ್ಧನ್, ಗೀಸು ಸಿಂಗ್ ಅವರುಗಳನ್ನು ಆಯ್ಕೆ ಮಾಡಲಾಯಿತು.