ಮಡಿಕೇರಿ, ಏ. 23 : ಪ್ರತಿಯೊಂದು ಸಮುದಾಯದಲ್ಲೂ ಬಡವರ್ಗದ ಮಂದಿ ಇದ್ದು, ಇವರ ಅಭ್ಯುದಯಕ್ಕಾಗಿ ಆಯಾ ಸಮಾಜದ ಚಿಂತಕರು ಸಹಾಯಹÀಸ್ತ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಕರೆ ನೀಡಿದ್ದಾರೆ.ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ನಡೆದ 11ನೇ ವರ್ಷದ ಸರಳ ಸಾಮೂಹಿಕ ವಿವಾಹ ಸಮಾರಂಭವನ್ನು ಉದ್ಘಾಟಿಸಿ ಬಡವರ್ಗದ ಸಂಕಷ್ಟಗಳಿಗೆ ಸ್ಪಂದಿಸುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕು. ಸಂಘ ಸಂಸ್ಥೆಗಳು ಸಾಮೂಹಿಕ ವಿವಾಹವನ್ನು ಆಯೋಜಿಸಿ ಕಂಕಣ ಭಾಗ್ಯ ಲಭಿಸುವಂತೆ ಮಾಡುವದರಿಂದ ಬಡವರ ಸಂಕಷ್ಟ ಕಡಿಮೆಯಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.ಸಂಘÀ ಸಂಸ್ಥೆಗಳಂತೆ ರಾಜ್ಯ ಸರ್ಕಾರ ಕೂಡ ಕಳೆದ ನಾಲ್ಕು ವರ್ಷಗಳಿಂದ ಶಾದಿ ಭಾಗ್ಯ ಯೋಜನೆಯ

(ಮೊದಲ ಪುಟದಿಂದ) ಮೂಲಕ ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ವಿವಾಹಕ್ಕಾಗಿ ತಲಾ 50 ಸಾವಿರ ರೂ. ನೆರವು ನೀಡುತ್ತಿದ್ದು, ಜಿಲ್ಲೆಯ ಸುಮಾರು 400 ಮಂದಿ ಫಲಾನುಭವಿ ಗಳಿಗೆ ಶಾದಿ ಭಾಗ್ಯ ಯೋಜನೆ ಕಲ್ಪಿಸಿದೆ ಎಂದ ಸಚಿವರು, ಸಧ್ಯದಲ್ಲೇ ಇನ್ನೂ ನೂರು ಫಲಾನುಭವಿಗಳಿಗೆ ಚೆಕ್ ವಿತರಿಸಲಾಗುವದೆಂದರು.

ಮುಂದಿನ ಸಾಲಿನ ಸಾಮೂಹಿಕ ವಿವಾಹದಲ್ಲಿ ಒಬ್ಬ ಕನ್ಯೆಯ ಮದುವೆಯ ಖರ್ಚು ವೆಚ್ಚವನ್ನು ತಾವೇ ಭರಿಸುವದಾಗಿ ಸಚಿವ ಸೀತಾರಾಮ್ ಘೋಷಿಸಿದರು.

ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ಬಡವರ್ಗದ ಅಭ್ಯುದಯಕ್ಕಾಗಿ ಸರ್ಕಾರದ ಮೂಲಕ ಅನೇಕ ಕಾರ್ಯಕ್ರಮಗಳಿದ್ದರೂ ಸಂಘ ಸಂಸ್ಥೆಗಳು ಸಹಾಯ ಹಸ್ತ ಚಾಚಲು ಮುಂದೆ ಬರಬೇಕೆಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಮಾತನಾಡಿ, ಬಡವರ್ಗಕ್ಕೆ ಆರ್ಥಿಕ ಹೊರೆಯನ್ನು ಹೇರುವ ವಿವಾಹಗಳಿಗೆ ಬದಲಾಗಿ ಸರಳ ಮತ್ತು ಸಾಮೂಹಿಕ ವಿವಾಹ ಗಳು ನಡೆದಲ್ಲಿ ಬಡ ಮಂದಿಯ ಸಂಕಷ್ಟ ನಿವಾರಣೆಯಾಗುತ್ತದೆ ಎಂದರಲ್ಲದೆ, ವಿವಾಹವಾಗುವದಷ್ಟೇ ಅಲ್ಲದೆ ಮುಂದಿನ ಜೀವನದಲ್ಲಿ ದಂಪತಿಗಳು ಭಿನ್ನಾಭಿಪ್ರಾಯಗಳಿಲ್ಲದೆ ಅನ್ಯೋನ್ಯತೆಯಿಂದ ಬದುಕಲು ತಾಳ್ಮೆ ಅತೀ ಮುಖ್ಯವೆಂದು ಸಲಹೆ ನೀಡಿದರು.

ಮಾಜಿ ಶಾಸಕ ಹಾಗೂ ಸಮಿತಿಯ ಮಹಾ ಪೋಷಕ ಕೆ.ಎಂ. ಇಬ್ರಾಹಿಂ ಮಾತನಾಡಿ, ದಾನ ಮಾಡುವ ಮನೋಧರ್ಮವನ್ನು ವಿಳಂಬವಿಲ್ಲದೆ ಪ್ರದರ್ಶಿಸಬೇಕೆಂದು ಕರೆ ನೀಡಿದರು. ಕೊಡಗು ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರ 5 ಏಕರೆ ಭೂಮಿಯನ್ನು ಮಂಜೂರು ಮಾಡಬೇಕೆಂದು ಅವರು ಇದೇ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದರು.

ಸನ್ಮಾನ

ಕಾರ್ಯಕ್ರಮದಲ್ಲಿ ಸಾಮೂಹಿಕ ವಿವಾಹ ಸಮಾರಂಭಕ್ಕೆ ವರ್ಷಂಪ್ರತಿ ನೆರವನ್ನು ನೀಡುತ್ತಾ ಬರುತ್ತಿರುವ ಕತಾರ್‍ನಲ್ಲಿ ಉದ್ಯೋಗಿಯಾಗಿರುವ ಸ್ಥಳೀಯ ಎಂ.ಎಂ.ಅಬ್ದುಲ್ ಲತೀಫ್ ಹಾಗೂ ಬ್ಯಾರಿ ಸಮಾಜದ ಹಿರಿಯ ರಾದ ಹಾಜಿ ಫಕೀರ್ ಸಾಹೇಬ್ ಅವರನ್ನು ಸನ್ಮಾನಿಸಲಾಯಿತು.

ಸಯ್ಯದ್ ಕೆ.ಎಸ್.ಮುಕ್ತಾರ್ ತಂಞಳ್ ಕುಂಬೂಳ್, ಸಮಿತಿಯ ಅಧ್ಯಕ್ಷ ಎಫ್.ಎ. ಮಹಮ್ಮದ್ ಹಾಜಿ, ವಕ್ಫ್ ಸಲಹಾ ಸಮಿತಿ ಜಿಲ್ಲಾಧ್ಯಕ್ಷ ಎಂ.ಹೆಚ್. ಅಬ್ದುಲ್ ರೆಹೆಮಾನ್, ಉದ್ಯಮಿ ಮೊಹಮ್ಮದ್ ಹಾಜಿ, ಕೆಪಿಸಿಸಿ ಪ್ರಮುಖ ಮಿಟ್ಟು ಚಂಗಪ್ಪ, ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಕೆ.ಎ. ಯಾಕೂಬ್, ಪ್ರಮುಖ ಅಬ್ದುಲ್ ಮಜೀದ್, ತೋಡಾರು ಶಂಸುಲ್ ಉಲೆಮಾ ಅರೆಬಿಕ್ ಕಾಲೇಜಿನ ಜನಾಬ್ ಅಹಮ್ಮದ್ ನಹೀಂ, ನಗರದ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಎಂ.ಜಿ. ಯೂಸುಫ್ ಹಾಜಿ ಉಪಸ್ಥಿತರಿದ್ದರು. ಪತ್ರಕರ್ತ ಎಂ.ಇ. ಮಹಮದ್ ಕಾರ್ಯಕ್ರಮ