ಮಡಿಕೇರಿ, ಏ. 24: ಕರ್ನಾಟಕ ಟೆಕ್ವಾಂಡೊ ಸಂಸ್ಥೆ, ಚಿಕ್ಕಮಗಳೂರು ಟೆಕ್ವಾಂಡೊ ಸಂಸ್ಥೆ ಹಾಗೂ ಶೃಂಗೇರಿ ಟೆಕ್ವಾಂಡೊ ಸಂಸ್ಥೆ ಇವರ ವತಿಯಿಂದ ಶೃಂಗೇರಿಯಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಸಬ್ ಜೂನಿಯರ್, ಕೆಡೆಟ್ ಜೂನಿಯರ್ ಹಾಗೂ ಸೀನಿಯರ್ ಟೆಕ್ವಾಂಡೊ ಚಾಂಪಿಯನ್‍ಶಿಪ್‍ನಲ್ಲಿ ಕೊಡಗಿನ ವಿದ್ಯಾರ್ಥಿಗಳು 10 ಚಿನ್ನ, 9 ಬೆಳ್ಳಿ ಹಾಗೂ 15 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ರಾಜ್ಯದ ವಿವಿಧೆಡೆಗಳಿಂದ ಸುಮಾರು 600 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು ಎಂದು ತರಬೇತುದಾರ ಬಿ.ಜಿ. ಲೋಕೇಶ್ ರೈ ಹಾಗೂ ಕುಶಾಲ್ ತಿಳಿಸಿದ್ದಾರೆ. ಕೊಡಗು ತಂಡವನ್ನು ಪ್ರತಿನಿಧಿಸಿದ್ದ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ಕ್ರೀಡಾಪಟುಗಳು 7 ಚಿನ್ನ, 7 ಬೆಳ್ಳಿ ಹಾಗೂ 11 ಕಂಚಿನ ಪದಕ ಹಾಗೂ ಮರ್ಕರಾ ಟೆಕ್ವಾಂಡೊ ಕ್ಲಬ್‍ನ ಕ್ರೀಡಾಪಟುಗಳು 3 ಚಿನ್ನ, 2 ಬೆಳ್ಳಿ ಹಾಗೂ 4 ಕಂಚಿನ ಪದಕ ಗಳನ್ನು ಗೆದ್ದಿದ್ದಾರೆ.

ಒಟ್ಟು 34 ಪದಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿರುವ ವಿದ್ಯಾರ್ಥಿಗಳು ತರಬೇತುದಾರರಾದ ಬಿ.ಜಿ. ಲೋಕೇಶ್ ರೈ ಹಾಗೂ ಕುಶಾಲ್ ಅವರ ನೇತೃತ್ವದಲ್ಲಿ ಸ್ಪರ್ಧೆ ಎದುರಿಸಿದ್ದರು.

ಪದಕ ವಿಜೇತರು

ಕೋಚನ ರುಚಿ ಅರುಣ್, ಬೈಲೆರಾ ಪ್ರೊನಿಕ್ಷಾ ವಿಶ್ವನಾಥ್, ಚೇತನಾಶ್ರೀ, ಬೈಲೆರಾ ಚವಿಕ್ಷಾ ವಿಶ್ವನಾಥ್, ಸೂಸೆನ್, ಪ್ರಜ್ಞಾ ಎನ್.ಕೆ., ಮಿನ್ನಂಡ ಯಶಸ್ಸ್, ಪೂಜಾರಿರ ಬೃಹತ್ ಬೋಪಯ್ಯ, ಪ್ರಜ್ಞಾ ವೇಲಾಯುಧನ್, ನೀರ್ಜಲ್ಲಿ ಮೋಕ್ಷಿತ್ ಬೆಳ್ಯಪ್ಪ, ತಾನಿಯಾ ಬಿ. ಶಂಕರ್, ಮೋಕ್ಷಿತ್, ದೃತಿ ರಿಷಿಕಾ ಬಿ. ಶಂಕರ್, ಪ್ರೀತಮ್ ಎಂ.ಪಿ., ಜೀವನ್ ಎಮ್., ಸಿ.ಸಿ. ಮೌರ್ಯ ಸುಧಾಕರ್, ಮಾನ್ವಿತ್ ಮೌರ್ಯ, ಕೃಷ್ಣಪಾಂಡಿ, ಜಗತ್, ರೋಷನ್, ನಿಕೇಶ್.