ಸಿದ್ದಾಪುರ, ಏ. 24: ಎಸ್.ಕೆ.ಎಸ್.ಎಸ್.ಎಫ್ (ಸಮಸ್ತ ಕೇರಳ ಸುನ್ನಿ ಸ್ಟುಡೆಂಟ್ ಫೆಡರೇಷನ್) ಶಾಖೆಯ 18ನೇ ವಾರ್ಷಿಕ ಸಮ್ಮೇಳನÀ ಹಾಗೂ 8ನೇ ವಾರ್ಷಿಕ ಸಾಮೂಹಿಕ ವಿವಾಹ ಕಾರ್ಯಕ್ರಮ ನೆಲ್ಲಿಹುದಿಕೇರಿಯಲ್ಲಿ ನಡೆಯಿತು.

ಕೊಡಗು ಜಿಲ್ಲಾ ಎಸ್.ಕೆ.ಎಸ್.ಎಸ್.ಎಫ್ ಸಂಘಟನೆಯ ಜಿಲ್ಲಾಧ್ಯಕ್ಷ ಮುತ್ತು ಕೋಯ ತಂಙಳ್ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಮೂರು ಬಡ ಹೆಣ್ಣು ಕನ್ಯೆಯರಿಗೆ ಮುಸ್ಲಿಂ ಸಂಪ್ರದಾಯದಂತೆ ವಿವಾಹ ಕಾರ್ಯ ನೆರವೇರಿಸಲಾಯಿತು.

ಸಮಾರಂಭದಲ್ಲಿ ಎಸ್.ಕೆ.ಎಸ್. ಎಸ್.ಎಫ್. ಕೇಂದ್ರದ ಕಾರ್ಯದರ್ಶಿ ಎಂ. ಅಬ್ದುಲ್ ರಹಮಾನ್ ಉಸ್ತಾದ್ ಅಧ್ಯಕ್ಷತೆ ವಹಿಸಿದ್ದರು. ಪಾಣಕ್ಕಾಡ್ ಸೈಯದ್ ನಾಸಿರುಲ್ ಹಯ್ಯತಂಙಳ್, ಇ.ಪಿ. ಅಬುಬಕರ್ ಅಲ್ ಖಾಸಿಮಿ, ಪತ್ತಾನಾ ಪುರಂ, ಎ.ಕೆ. ಹಕೀಮ್ ಇನ್ನಿತರರು ಹಾಜರಿದ್ದರು.