ನಾಪೆÇೀಕ್ಲು, ಏ. 24: ನಾಪೆÇೀಕ್ಲು ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಬಿದ್ದಾಟಂಡ ಕಪ್ ಹಾಕಿ ನಮ್ಮೆಯ ಏಂಟನೇ ದಿನದ ಪಂದ್ಯಾಟದಲ್ಲಿ ಪಾಲಂದಿರ ಅಪ್ಪಚ್ಚು, ಕೋಟೆರ ದಿಲೀಪ್, ನೆಲ್ಲಮಕ್ಕಡ ಸಚೀನ್ ಹ್ಯಾಟ್ರಿಕ್ ಮೂರು ಗೋಲು ದಾಖಲಿಸಿದರೆ, ಅನ್ನಾಡಿಯಂಡ ಪೆÇನ್ನಣ್ಣ ನಾಲ್ಕು ಗೋಲು ದಾಖಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಸೋಮವಾರ ನಡೆದ ಪಂದ್ಯಾಟದಲ್ಲಿ ಅರೆಯಡ, ಮಚ್ಚಾರಂಡ, ಐನಂಡ, ಪಾಲಂದಿರ, ಕಟ್ಟೇರ, ಮೂಕಳೆರ, ಕೊಂಡಿರ, ಕೋಟೆರ, ಮಲ್ಲಂಗಡ, ಮಂಡೇಡ, ಚೆರಿಯಪ್ಪಂಡ, ನೆಲ್ಲಮಕ್ಕಡ, ಕೊಕ್ಕಂಡ, ಬಾಚಿನಾಡಂಡ, ಪಾಡೆಯಂಡ, ಕಾಡ್ಯಮಾಡ, ಕೇಚಮಾಡ, ಮಂಡೇಟಿರ, ಚೋಕಿರ, ಕನ್ನಂಡ, ಅನ್ನಾಡಿಯಂಡ, ಪುದಿಯೊಕ್ಕಡ, ಕೋಡಿಮಣಿಯಂಡ ತಂಡಗಳು ಜಯಗಳಿಸುವದರ ಮೂಲಕ ಮುಂದಿನ ಸುತ್ತಿಗೆ ಪ್ರವೇಶಿಸಿವೆ.
ಮೊದಲ ಪಂದ್ಯದಲ್ಲಿ ಅರೆಯಡ ತಂಡವು 5-0 ಗೋಲುಗಳ ಅಂತರದಿಂದ ಪಾಂಡ್ಯಂಡ ತಂಡವನ್ನು ಪರಾಭವಗೊಳಿಸಿತು. ಅರೆಯಡ ತಂಡದ ಪರ ಅಪನ್ ತಿಮ್ಮಯ್ಯ ಮೂರು, ಪೆಮ್ಮಯ್ಯ ಮತ್ತು ಗಣೇಶ್ ಬೆಳ್ಯಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. 12 ವರ್ಷದ ಒಳಗಿನ ಶರವಣ್, ಸಾಗರ್, ಲೆನ್ ಬೋಪಣ್ಣ ಅರೆಯಡ ತಂಡದ ಪರ ಆಟವಾಡಿ ಎಲ್ಲರ ಗಮನ ಸೆಳೆದರು. ಮಚ್ಚಾರಂಡ ತಂಡವು ಎಳ್ತಂಡ ತಂಡವನ್ನು 4-0 ಗೋಲಿನ ಅಂತರದಿಂದ ಸೋಲಿಸಿತು. ಮಚ್ಚಾರಂಡ ತಂಡದ ಪರ ಅಚ್ಚಯ್ಯ ಎರಡು, ಅಪ್ಪಣ್ಣ ಮತ್ತು ಪ್ರಹನ್ ಪೂವಯ್ಯ ತಲಾ ಒಂದೊಂದು ಗೋಲು ದಾಖಲಿಸಿದರು. ಐನಂಡ ತಂಡವು 4-1 ಗೋಲುಗಳ ಅಂತರದಿಂದ ಪುಲ್ಲೇರ ತಂಡವನ್ನು ಮಣಿಸಿತು. ಪುಲ್ಲೇರ ತಂಡದ ಪರ ಮಂದಣ್ಣ ಒಂದು ಗೋಲು ದಾಖಲಿಸಿದರೆ, ಐನಂಡ ತಂಡದ ಪರ ಪೂವಣ್ಣ ಎರಡು. ಆರ್ಯ ಮತ್ತು ರಂಜನ್ ಒಂದೊಂದು ಗೋಲು ದಾಖಲಿಸಿದರು. ಪಾಲಂದಿರ ತಂಡವು ತಂಬುಕುತ್ತಿರ ತಂಡವನ್ನು 3-0 ಗೋಲುಗಳ ಅಂತರದಿಂದ ಪರಾಭವಗೊಳಿಸಿತು. ಪಾಲಂದಿರ ಅಪ್ಪಚ್ಚು ತಂಡದ ಪರ ಮೂರು ಗೋಲು ದಾಖಲಿಸಿದರು. ಕಟ್ಟೇರ ತಂಡವು 3-0 ಗೋಲಿನಿಂದ ಕಾವಾಡಿಚಂಡ ತಂಡವನ್ನು ಸೋಲಿಸಿತು. ಕಟ್ಟೇರ ತಂಡದ ಪರ ಶರತ್ ಸೋಮಣ್ಣ, ಸುದೇಶ್ ಬಿದ್ದಪ್ಪ, ನಿಶನ್ ಕುಶಾಲಪ್ಪ ಪೆನಾಲ್ಟಿ ಕಾರ್ನರ್ ಮೂಲಕ ತಲಾ ಒಂದೊಂದು ಗೋಲು ದಾಖಲಿಸಿದರು.
ಮೂಕಳೆರ ತಂಡವು 2-0 ಗೋಲುಗಳಿಂದ ಮದ್ರಿರ ತಂಡವನ್ನು ಸೋಲಿಸಿತು. ಮೂಕಳೆರ ತಂಡದ ಪರ ಅಜಿತ್ ಮತ್ತು ತಿಮ್ಮಯ್ಯ ಒಂದೊಂದು ಗೋಲು ದಾಖಲಿಸಿದರು. ಕೊಂಡಿರ ತಂಡವು 3-1 ಗೋಲಿನ ಅಂತರದಿಂದ ಚೊಟ್ಟೆರ ತಂಡವನ್ನು ಮಣಿಸಿತು. ಚೊಟ್ಟೆರ ತಂಡದ ಪರ ಉತ್ತಪ್ಪ ಒಂದು ಗೋಲು ದಾಖಲಿಸಿದರೆ, ಕೊಂಡಿರ ತಂಡದ ಪರ ಹೇಮಂತ್, ನಿತಿನ್ ಕಾರ್ಯಪ್ಪ, ತಮ್ಮಯ್ಯ ತಲಾ ಒಂದೊದು ಗೋಲು ದಾಖಲಿಸಿದರು. ಮಂಡೇಡ ಮತ್ತು ಚಂಬಂಡ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯವು ಚಂಬಂಡ ತಂಡದ ಗೈರುಹಾಜರಿನ ಕಾರಣ ಮಂಡೇಡ ತಂಡವು ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಚೆರಿಯಪಂಡ ತಂಡವು 2-0 ಗೋಲಿನ ಅಂತರದಿಂದ ಮಂದನೆರವಂಡ ತಂಡವನ್ನು ಪರಾಭವಗೊಳಿಸಿತು. ಚೆರಿಯಪಂಡ ಸೌರಭ್, ಸಚಿನ್ ಸೋಮಣ್ಣ ತಲಾ ಒಂದೊಂದು ಗೋಲು ದಾಖಲಿಸಿದರು.
ನೆಲ್ಲಮಕ್ಕಡ ತಂಡವು ಬೊಳಿಯಂಡ ತಂಡವನ್ನು 5-0 ಗೋಲಿನಿಂದ ಮಣಿಸಿತು. ನೆಲ್ಲಮಕ್ಕಡ ಸಚಿನ್ ಮೂರು, ಕಾರ್ಯಪ್ಪ, ನಾಣಯ್ಯ ತಲಾ ಒಂದೊಂದು ಗೋಲು ದಾಖಲಿಸಿದರು. ಕೊಕ್ಕಂಡ ತಂಡವು ಪುಚ್ಚಿಮಾಡ ತಂಡವನ್ನು 2-0 ಗೋಲಿನಿಂದ ಸೋಲಿಸಿತು. ಕೊಕ್ಕಂಡ ಧೀರಜ್ ತಂಡದ ಪರ ಎರಡು ಗೋಲು ದಾಖಲಿಸಿದರು. ಬಾಚಿನಾಡಂಡ ತಂಡವು 1-0 ಗೋಲಿನ ಅಂತರದಿಂದ ಮಾತಂಡ ತಂಡವನ್ನು ಸೋಲಿಸಿತು. ಬಾಚಿನಾಡಂಡ ಅಜಿತ್ ನಾಣಯ್ಯ ತಂಡದ ಪರ ಒಂದು ಗೋಲು ದಾಖಲಿಸಿದರು. ಪಾಡೆಯಂಡ ತಂಡವು 5-0 ಗೋಲಿನಿಂದ ಅಣ್ಣಾಳಮಾಡ ತಂಡವನ್ನು ಪರಾಭವಗೊಳಿಸಿತು. ಪಾಡೆಯಂಡ ತಂಡದ ಪರ ಮದನ್ ಮಂದಣ್ಣ ಎರಡು. ಮಿಥುನ್ ಮುತ್ತಪ್ಪ ಮತ್ತು ಸಂತೋಷ್ ಅಯ್ಯಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಕಾಡ್ಯಮಾಡ ತಂಡವು 4-0 ಗೋಲಿನಿಂದ ಪಾಲೆಂಗಡ ತಂಡವನ್ನು ಸೋಲಿಸಿತು. ಕಾಡ್ಯಮಾಡ ತಂಡದ ಪರ ಚಿಣ್ಣಪ್ಪ ಎರಡು. ಅಯ್ಯಪ್ಪ, ಮುಕ್ಕುಲ್ ಮುತ್ತಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಕೇಚಮಾಡ ಮತ್ತು ಕುಕ್ಕೇರ ತಂಡಗಳ ನಡುವಿನ ಪಂದ್ಯವು ಕುಕ್ಕೇರ ತಂಡದ ಗೈರುಹಾಜರಿನ ಕಾರಣ ಕೇಚಮಾಡ ತಂಡವು ಮುಂದಿನ ಸುತ್ತಿಗೆ ಪ್ರವೇಶಿಸಿತು.
ಮಂಡೇಟಿರ ತಂಡವು 5-0 ಗೋಲಿನಿಂದ ಕಾಟುಮಣಿಯಂಡ ತಂಡವನ್ನು ಪರಾಭವಗೊಳಿಸಿತು. ಮಂಡೇಟಿರ ತಂಡದ ಪರ ವರುಣ್ ಗಣಪತಿ, ನೇಹಲ್, ವಿನಾಶ್, ಅಪ್ಪಯ್ಯ, ನಿಶಾಲ್ ತಲಾ ಒಂದೊಂದು ಗೋಲು ದಾಖಲಿಸಿದರು. ಚೋಕಿರ ತಂಡವು 2-0 ಗೋಲಿನ ಅಂತರದಿಂದ ಐಚಂಡ ತಂಡವನ್ನು ಸೋಲಿಸಿತು. ಚೋಕಿರ ತಂಡದ ಪರ ರೋಶನ್, ಅಕ್ಷಿತ್ ತಲಾ ಒಂದೊಂದು ಗೋಲು ದಾಖಲಿಸಿದರು. ಕನ್ನಂಡ ತಂಡವು 2-10 ಗೋಲಿನಿಂದ ಕೊಳುವಂಡ ತಂಡವನ್ನು ಸೋಲಿಸಿತು. ಕನ್ನಂಡ ರೋಹನ್ ಅಯ್ಯಪ್ಪ ಒಂದು, ಅಲನ್ ದೇವಯ್ಯ ಒಂದು ಗೋಲು ದಾಖಲಿಸಿದರು. ಅನ್ನಾಡಿಯಂಡ ತಂಡವು 4-0 ಗೋಲಿನಿಂದ ಪುತ್ತರೀರ ತಂಡವನ್ನು ಪರಾಭವಗೊಳಿಸಿತು. ಅನ್ನಾಡಿಯಂಡ ಪೆÇನ್ನಣ್ಣ 4 ಗೋಲು ದಾಖಲಿಸಿದರು. ಪುದಿಯೊಕ್ಕಡ ತಂಡವು 2-1 ಗೋಲಿನ ಅಂತರದಿಂದ ಕರವಂಡ ತಂಡವನ್ನು ಸೋಲಿಸಿತು. ಪುದಿಯೊಕ್ಕಡ ಪ್ರಧಾನ್ ಸೋಮಣ್ಣ ಎರಡು ಗೋಲು ದಾಖಲಿಸಿದರೆ, ಕರವಂಡ ಕೌಶಿಕ್ ಪೂಣಚ್ಚ ಒಂದು ಗೋಲು ದಾಖಲಿಸಿದರು. ಕೋಡಿಮಣಿಯಂಡ ತಂಡವು 2-1 ಗೋಲಿನಿಂದ ಮಲ್ಚಿರ ತಂಡವನ್ನು ಸೋಲಿಸಿತು. ಮಲ್ಚಿರ ತಂಡದ ಪರ ಪೆÇನ್ನಣ್ಣ ಒಂದು ಗೋಲು ದಾಖಲಿಸಿದರೆ, ಕೋಡಿಮಣಿಯಂಡ ಗಗನ್ ಮಾದಪ್ಪ ಎರಡು ಗೋಲು ದಾಖಲಿಸಿದರು.
ವೀಕ್ಷಕ ವಿವರಣೆಗಾರರಾಗಿ ಬಿದ್ದಾಟಂಡ ಮಮತಾ ಚಿಣ್ಣಪ್ಪ, ಅಂಜಪರವಂಡ ಸಾರಿಕಾ ಬೊಳ್ಳಮ್ಮ, ಕರವಂಡ ಅಪ್ಪಣ್ಣ, ಮೂಡೆರ ಹರೀಶ್ ಕಾಳಯ್ಯ ಕರ್ತವ್ಯ ನಿರ್ವಹಿಸಿದರು.