ಗೋಣಿಕೊಪ್ಪಲು, ಏ. 23: ಕೊಡವ ಕುಟುಂಬಗಳ ನಡುವಿನ ವಾರ್ಷಿಕ ಕ್ರಿಕೆಟ್ ಉತ್ಸವ ತಾ. 24 ರಿಂದ (ಇಂದಿನಿಂದ) ಆರಂಭಗೊಳ್ಳಲಿದೆ ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಅಳಮೇಂಗಡ ಕ್ರಿಕೆಟ್ ಕಪ್ಗೆ ಇಂದು ಚಾಲನೆ ದೊರೆಯಲಿದೆ. ಮೇ 21ರ ವರೆಗೆ 220 ತಂಡಗಳು ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿದೆ.ಬೆಳಿಗ್ಗೆ 8 ಗಂಟೆಗೆ ಬಾಳೆಲೆ ಗಣಪತಿ ಗುಡಿಯಲ್ಲಿ ಗಣಪತಿಗೆ ಪೂಜೆ ಸಲ್ಲಿಸುವ ಮೂಲಕ ಉತ್ಸವಕ್ಕೆ ಸಾಂಪ್ರದಾಯಿಕವಾಗಿ ಪೂಜೆ. ನಂತರ ಪಟ್ಟಣದಲ್ಲಿ ಮೆರವಣಿಗೆ ನಡೆಯಲಿದೆ. ಈ ಸಂದರ್ಭ ಸಾಂಸ್ಕøತಿಕ ಕಾರ್ಯಕ್ರಮಗಳಾದ ಉರ್ಟಿಕೊಟ್ಟ್ ಆಟ್, ಪರಿಯಕಳಿ, ಬೊಳಕಾಟ್, ಉಮ್ಮತ್ತಾಟ್, ಕೋಲಾಟ್ ಪ್ರದರ್ಶನ ನಡೆಯಲಿವೆ.
11 ಗಂಟೆಗೆ ಉಸ್ತುವಾರಿ ಸಚಿವ ಸೀತಾರಾಮ್ ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಕೆ ಜಿ ಬೋಪಯ್ಯ, ಎಂಎಎಲ್ಸಿಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಕೊಡವ
(ಮೊದಲ ಪುಟದಿಂದ) ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಜಿ ಪಂ ಸದಸ್ಯ ಬಾನಂಡ ಪ್ರತ್ಯು, ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ, ಅಳಮೇಂಗಡ ಹಾಕಿ ಕಪ್ ಅಧ್ಯಕ್ಷ ಅಳಮೇಂಗಡ ಪೊನ್ನಪ್ಪ, ಕುಟುಂಬ ಅಧ್ಯಕ್ಷ ಅಳಮೇಂಗಡ ವಿವೇಕ್, ಕ್ರಿಕೆಟ್ ಕಪ್ ಅಧ್ಯಕ್ಷ ಬೋಸ್ ಮಂದಣ್ಣ, ಉಪಾಧ್ಯಕ್ಷ ನದಿರಾ ಸೋಮಯ್ಯ, ಬಾಳೆಲೆ ಗ್ರಾ ಪಂ ಮಾಜಿ ಅಧ್ಯಕ್ಷ ಆದೇಂಗಡ ವಿನು ಉತ್ತಪ್ಪ , ಬಾಳೆಲೆ ಸೆಂಟ್ರಲ್ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಕೃಷ್ಣ ಗಣಪತಿ, ಜೂನಿಯರ್ ಕಾಲೇಜು ಪ್ರಾಂಶುಪಾಲ ಕೆ ಪಿ ಪೊನ್ನಮ್ಮ, ಪಾಲ್ಗೊಳ್ಳಲಿದ್ದಾರೆ.
12 ಗಂಟೆಗೆ ಬಾಳೆಲೆ ಇಲೆವೆನ್ ಹಾಗೂ ಅಳಮೇಂಗಡ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ. 3 ಗಂಟೆಗೆ ಕಾಂಡೇರ ಹಾಗೂ ಕಾಕಮಾಡ (ಕಿರುಗೂರು) ತಂಡಗಳ ಪಂದ್ಯ ನಡೆಯಲಿದೆ.