ಕೂಡಿಗೆ, ಏ. 24: ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ವತಿಯಿಂದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ರವರ 126ನೇ ಜಯಂತಿಯು ತಾ.25ರಂದು (ಇಂದು) ಕೂಡಿಗೆಯ ಗಣಪತಿ ಪೆಂಡಾಲ್ ಆವರಣದಲ್ಲಿ ನಡೆಯಲಿದೆ. ಇದರ ಅಂಗವಾಗಿ ಕೂಡುಮಂಗಳೂರು ಸಮುದಾಯ ಭವನದಿಂದ ಕೂಡಿಗೆ ಸರ್ಕಲ್ವರೆಗೆ ವಾದ್ಯಗೋಷ್ಟಿ ಮತ್ತು ಕಲಾತಂಡಗಳೊಂದಿಗೆ ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆ ನಡೆಯಲಿದೆ.
ಜಯಂತಿಯ ಅಂಗವಾಗಿ ನಿರ್ಗತಿಕ ಅನಾಥಾಶ್ರಮದ ವಾಸಿಗಳಿಗೆ ವಸ್ತ್ರ ವಿತರಣೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಐಎನ್ಟಿಯೂಸಿ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ನಾಪಂಡ ಮುದ್ದಪ್ಪ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಐಎನ್ಟಿಯೂಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.
ಕೊಡಗು ಜಿಲ್ಲಾ ಐಎನ್ಟಿಯೂಸಿ ಅಧ್ಯಕ್ಷ ಟಿ.ಪಿ. ಹಮೀದ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಬಹುಜನ ಸೋಶಿಯಲ್ ಪೌಂಡೇಷನ್, ನ್ಯಾಷನಲ್ ಸೆಕ್ರೆಟರಿ ಜನರಲ್ ಡಿ.ಗೋಪಾಲ್, ಜಿಲ್ಲಾ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಕೆ.ವಿ.ಸುರೇಶ್, ಮಡಿಕೇರಿ ವಕೀಲ ಹಾಗೂ ನೋಟರಿ ಕುಂಞ ಅಬ್ದುಲ್ಲ ಉಪನ್ಯಾಸ ನೀಡಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಜಿ.ಪಂ ಮಾಜಿ ಅಧ್ಯಕ್ಷ ಎಸ್.ಎನ್.ರಾಜಾರಾವ್, ಐಎನ್ಟಿಯೂಸಿ ಗೌರವ ಸಲಹೆಗಾರ ಕೆ.ಎನ್.ಲಕ್ಷ್ಮಣ ರಾಜೇಅರಸ್, ಜಿಲ್ಲಾ ದಲಿತ ಹಿತರಕ್ಷಣ ಸಮಿತಿ ಅಧ್ಯಕ್ಷ ಬಿ.ಡಿ.ಅಣ್ಣಯ್ಯ, ಕೆಪಿಸಿಸಿ ಪರಿಶಿಷ್ಟ ಪಂಗಡದ ರಾಜ್ಯ ಸಂಘಟನಾ ಕಾರ್ಯದರ್ಶಿ ವೈ.ಟಿ.ಪರಮೇಶ್, ಪ.ಪಂ ಸದಸ್ಯರಾದ ಕರಿಯಪ್ಪ, ಪಾರ್ವತಿ ಸೇರಿದಂತೆ ಕೂಡಿಗೆ ಕೂಡುಮಂಗಳೂರು ಗ್ರಾ.ಪಂನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.