ಸುಂಟಿಕೊಪ್ಪ, ಏ.24: ಕೊಡಗು ಜಿ.್ಲ ಪಂ. ಕೃಷಿ ಇಲಾಖೆ ಸೋಮವಾರಪೇಟೆ ತಾಲೂಕು ಸುಂಟಿಕೊಪ್ಪ ಹೋಬಳಿ ವತಿಯಿಂದ ತಾ. 25 ರಂದು (ಇಂದು) ಬೆಳಿಗ್ಗೆ 10.30 ಕ್ಕೆ ಚೆಟ್ಟಳ್ಳಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಮಾರಂಭದ ಉದ್ಘಾಟನೆಯನ್ನು ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್ ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಪಿ.ವಿ.ವತ್ಸಲ ವಹಿಸಲಿದ್ದಾರೆ. ವಸ್ತು ಪ್ರದರ್ಶನ ಉದ್ಘಾಟನೆಯನ್ನು ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾನೀಯ ಸಮಿತಿ ಅಧ್ಯಕ್ಷ ಎಚ್.ಆರ್. ಶ್ರೀನಿವಾಸ್ ನೆರವೇರಿಸು ವರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯರುಗಳಾದ ಎಂ.ಬಿ. ಸುನೀತಾ, ಕೆ.ಪಿ. ಚಂದ್ರಕಲಾ, ಕುಮುದಾ ಧರ್ಮಪ್ಪ, ಪಿ.ಎಂ. ಲತೀಫ್, ತಾ. ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್, ಚೆಟ್ಟಳ್ಳಿ ತಾ. ಪಂ. ಸದಸ್ಯರಾದ ಬಲ್ಲಾರಂಡ ಮಣಿಉತ್ತಪ್ಪ, ಮತ್ತಿತರರು ಭಾಗವಹಿಸುವರು. ಕೃಷಿಕರಿಗೆ ನುರಿತ ವಿಜ್ಞಾನಿಗಳಿಂದ ಮಾಹಿತಿ ಕಾರ್ಯಕ್ರಮ ನಡೆಯಲಿದೆ ಎಂದು ಸುಂಟಿಕೊಪ್ಪ ಹೋಬಳಿ ಕೃಷಿಯಾಧಿಕಾರಿ ಬಿ.ಎಸ್.ಬೋಪಯ್ಯ ತಿಳಿಸಿದ್ದಾರೆ.