ಸೋಮವಾರಪೇಟೆ, ಏ.24: ಅಕ್ರಮವಾಗಿ ಮರಗಳ್ಳತನದಲ್ಲಿ ತೊಡಗಿದ್ದ ಆರೋಪಿಗಳನ್ನು ಬಂಧಿಸಲು ತೆರಳಿದ್ದ ಉಪ ವಲಯ ಅರಣ್ಯಾಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಯನ್ನು ಪೊಲೀಸರು ಬಂದಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಕಲ್ಕಂದೂರು ಗ್ರಾಮದ ಕೆ.ಆರ್. ಪಾಲಾಕ್ಷ, ಸಹೋದರ ನಿಖಿಲ್ ಬಂದಿತರು.
ಬೇಳೂರು ಉಪವಲಯದ ಅರಣ್ಯಾಧಿಕಾರಿ ಮಹದೇವ ನಾಯಕ ಮತ್ತು ಸಿಬ್ಬಂದಿಗಳು ಖಚಿತ ಸುಳಿವಿನ ಮೇರೆಗೆ ನೇಗಳ್ಳೆ ಮಾರ್ಗದಲ್ಲಿ ಬೊಲೇರೋ ವಾಹನವೊಂದರಲ್ಲಿ ಅಕ್ರಮವಾಗಿ ಮರದ ನಾಟಾಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಹಿಂಬಾಲಿಸಿದ್ದರು.
ಹೊಸಳ್ಳಿ ಗ್ರಾಮದ ಬಳಿ ಅರಣ್ಯ ಇಲಾಖೆಯ ಜೀಪನ್ನು ಅಡ್ಡಗಟ್ಟಿದ ಆರೋಪಿಗಳು, ತಮ್ಮ ವಾಹನವನ್ನು ರಸ್ತೆಯಲ್ಲಿ ಅಡ್ಡಲಾಗಿ ನಿಲ್ಲಿಸಿ, ಮರಗಳ್ಳರು ತಪ್ಪಿಸಿಕೊಳ್ಳಲು ಸಹಕಾರ ಮಾಡುವದರೊಂದಿಗೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನೆÀ್ನಲೆ ಮೊಕದ್ದಮೆ ದಾಖಲಿಸಿದ್ದಾರೆ.