ಸಿದ್ದಾಪುರ, ಏ. 23 ಕೊಡಗು ಚಾಂಪಿಯನ್ಸ್ ಲೀಗ್ (ಕೆ.ಸಿ.ಎಲ್) ಪಂದ್ಯಾಟದಲ್ಲಿ ಜಿಲ್ಲೆಯ ಯುವ ಆಟಗಾರರು ಉದಯೋನ್ಮುಕ ಪ್ರತಿಭೆಯನ್ನು ಪ್ರದರ್ಶಿಸಿದರು.
ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮ ಪ್ರಶಸ್ತಿ ಕೂರ್ಗ್ ಲಯನ್ಸ್ ತಂಡದ ನಿಕಿಲ್ ದಾಸ್, ಉತ್ತಮ ಬ್ಯಾಟ್ಸ್‍ಮಾನ್ ಫಯರ್ ಟೈಗರ್ಸ್ ತಂಡದ ನಾಯಕ ರಿಯಾಝ್, ಉತ್ತಮ ಬೌಲರ್ ಫಯರ್ ಟೈಗರ್ಸ್ ತಂಡದ ಸಜನ್, ಪಂದ್ಯಾವಳಿಯ ಸರಣಿ ಶ್ರೇಷ್ಟ ಆಟಗಾರನಾಗಿ ಕೂರ್ಗ್ ಲಯನ್ಸ್ ತಂಡದ ನಾಯಕ ಯತೀಶ್, ಯುವ ಆಟಗಾರ ಫಯರ್ ಟೈಗರ್ಸ್ ತಂಡದ ರಿಯಾಝ್, ಉದಯೋನ್ಮುಖ ಆಟಗಾರ ಡಾಟ್ ಡೋಮಿನೇಟರ್ಸ್ ತಂಡದ ಸಂಶುದ್ದೀನ್, ಸರಣಿಯಲ್ಲಿ ಅತೀ ಹೆಚ್ಚು ರನ್‍ಗಳಿಸಿದ ಆಟಗಾರ ಟ್ರೆಂಡ್ಸ್ ಗೋಣಿಕೊಪ್ಪ ತಂಡದ ಪ್ರದೀಪ್, ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಫಯರ್ ಟೈಗರ್ಸ್ ತಂಡದ ಮುಸ್ತಫ, ನ್ಯಾಯತೋಜಿತ ತಂಡ ಎಫ್‍ಜಿಸಿ ಹುಂಡಿ, ಅತ್ಯಂತ ಕಿರಿಯ ಆಟಗಾರರ ಪ್ರಶಸ್ತಿಯನ್ನು ಪೈನಿಯರ್ ತಂಡದ ಅಜ್ಮಲ್ ಹಾಗೂ ಅಜ್ನಾಸ್ ಪಡೆದುಕೊಂಡರು.
ಸಾಧಕರಿಗೆ ಸನ್ಮಾನ: ಕೊಡಗು ಚಾಂಪಿಯನ್ಸ್ ಲೀಗ್ ಎರಡನೇ ಆವೃತ್ತಿಯ ಕ್ರಿಕೆಟ್ ಉತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಅಂತರಾಷ್ಟ್ರೀಯ ಮ್ಯಾರಥಾನ್ ಪಟು ಹೊಸೋಕ್ಲು ಚಿಣ್ಣಪ್ಪ, ಸ್ಕೌಟ್ ಗೈಡ್‍ನ ಜಿಲ್ಲಾ ಆಯುಕ್ತ ಜಿಮ್ಮಿ ಸಿಕ್ವೇರಾ, ವಿವಿಧ ರೀತಿಯ ಕ್ರೀಡೆಗಳಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಪಾಲಿಬೆಟ್ಟದ ರಂಶಾದ್, ಸಿದ್ದಾಪುರ ಠಾಣೆಯ ಎ.ಎಸ್.ಐ ಸೀತಾರಾಂ ಇವರನ್ನು ಸನ್ಮಾನಿಸಲಾಯಿತು.