ಮಡಿಕೇರಿ, ಏ. 24: ಕೇಂದ್ರ ಪಂಚಾಯತ್ ರಾಜ್ ಮಂತ್ರಾಲಯ ವತಿಯಿಂದ ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್ ಅಂಗವಾಗಿ ಅತ್ಯುತ್ತಮ ಸಾಧನೆ ಮಾಡಿದ ಕೊಡಗು ಜಿ.ಪಂ. ಹಾಗೂ ಗ್ರಾ.ಪಂ.ಗೆ ನೀಡುವ 2015-16ನೇ ಸಾಲಿನ ಪಂಚಾಯಿತಿ ಸಶಸ್ತೀಕರಣ ಪುರಸ್ಕಾರವನ್ನು ಜಿಲ್ಲೆಯ ನಿಯೋಗದಿಂದ ಸ್ವೀಕರಿಸಲಾಯಿತು.
ಉತ್ತರ ಪ್ರದೇಶದ ಲಖನೌದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್, ಪಾಲಿಬೆಟ್ಟ ಗ್ರಾ.ಪಂ. ಅಧ್ಯಕ್ಷ ಪುಲಿಯಂಡ ಬೋಪಣ್ಣ ಹಾಗೂ ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರ ಕಳಗಿ ಹಾಗೂ ಇನ್ನಿತರರು ಪ್ರಶಸ್ತಿ ಸ್ವೀಕರಿಸಿದರು.