ಮಡಿಕೇರಿ, ಏ. 23: ಹೊದ್ದೂರು ಗ್ರಾ.ಪಂ. ವ್ಯಾಪ್ತಿಯ ಪಾಲೆಮಾಡುವಿ ನಲ್ಲಿ ಕೊಡಗಿನ ಜನತೆಯ ಭಾವನಾತ್ಮಕ ಸಂಬಂಧಕ್ಕೆ ವಿರುದ್ಧವಾಗಿರುವ ಟಿಪ್ಪುವಿನ ಹೆಸರನ್ನು ಕಾನೂನುಬಾಹಿ ರವಾಗಿ ಇಡಲು ನಡೆಸಿರುವ ಪ್ರಯತ್ನ ಖಂಡನೀಯ. ಇದೊಂದು ಗಂಭೀರ ಪ್ರಕರಣವಾಗಿದ್ದು, ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಅಖಿಲ ಪಾಲೆಮಾಡುವಿನ ನಿವಾಸಿಗಳ ಆರೋಪ ಸತ್ಯಕ್ಕೆ ದೂರವಾಗಿದೆ
ಸಚಿವ ಸೀತಾರಾಂ ಪ್ರತಿಕ್ರಿಯೆಪಾಲೆಮಾಡುವಿನಲ್ಲಿ ರಸ್ತೆಗಳಿಗೆ ಬೇಕಾಬಿಟ್ಟಿ ಹೆಸರುಗಳನ್ನು ಇಟ್ಟು, ಕಾನೂನು ಬಾಹಿರ ತೀರ್ಮಾನ ಕೈಗೊಂಡಿರುವದು ಅವೈಜ್ಞಾನಿಕ ಹಾಗೂ ಸಮರ್ಥನೀಯವಲ್ಲದ ನಿರ್ಧಾರವೆಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅಭಿಪ್ರಾಯಪಟ್ಟಿದ್ದಾರೆ.ಪಾಲೆಮಾಡು ಬೆಳವಣಿಗೆ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಅಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೊಲೀಸರು ಅಪಮಾನಿಸಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದೆಂದು ಸ್ಪಷ್ಟಪಡಿಸಿದ್ದಾರೆ. ಸ್ಥಳೀಯ ಸಂಸ್ಥೆ ಹಾಗೂ ಜನಾಭಿಪ್ರಾಯಕ್ಕೆ ವಿರೋಧವಾಗಿ ರಸ್ತೆಗಳಿಗೆ ಹೆಸರಿಡುವದು ಸಮಂಜಸವಲ್ಲವೆಂದ ಸಚಿವರು,
(ಮೊದಲ ಪುಟದಿಂದ) ಬದುಕನ್ನು ಅತಂತ್ರಗೊಳಿಸುವ ಷಡ್ಯಂತರವನ್ನು ಸಹಿಸಲಾಗದು. ಸಾಮಾಜಿಕ ನ್ಯಾಯ ಎಲ್ಲರಿಗೂ ಬೇಕು ಎಂಬದು ಸರಿ. ಆದರೆ ಸಿಕ್ಕಿರುವ ಅವಕಾಶದಲ್ಲಿ ನೆಮ್ಮದಿಯ ಬದುಕು ಕಾಣುವ ಬದಲು ಇಲ್ಲ- ಸಲ್ಲದ, ಕೊಡಗಿಗೆ, ಇಲ್ಲಿನ ಜನರಿಗೆ ಅಗತ್ಯವಿಲ್ಲದ ವಿಚಾರಗಳನ್ನು ಎಳೆದು ತರುತ್ತಿರುವದು ಗಂಭೀರವಾದ ವಿಚಾರ. ಇತ್ತೀಚಿನ ದಿನಗಳಲ್ಲಿ ಯಾವದೋ ದುರುದ್ದೇಶದಿಂದ ಈ ರೀತಿಯ ಪ್ರಕರಣಗಳು ಪದೇ ಪದೇ ನಡೆಯುತ್ತಿರುವದು ಕಂಡುಬರುತ್ತಿದೆ. ಜಿಲ್ಲಾಡಳಿತ, ಸರಕಾರ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸ ಬೇಕು. ಜಿಲ್ಲೆಯ ಜನರು ಈ ಹಿಂದಿ ನಿಂದಲೂ ಶಾಂತಿ, ಸೌಹಾರ್ದತೆ, ಸಾಂಸ್ಕøತಿಕ ಸಾಮರಸ್ಯ ದಿಂದ ಬದುಕಿಕೊಂಡು ಬಂದವರು ಇದಕ್ಕೆ ಹುಳಿ ಹಿಂಡುವ ಪ್ರಯತ್ನ ಯಾರಿಂದಲೂ ಆಗಬಾರದು. ಇಂತಹ ವಿಚಾರಗಳನ್ನು ಕಿಡಿಗೇಡಿ ಗಳನ್ನು ಜಿಲ್ಲಾಡಳಿತ ಹತ್ತಿಕ್ಕಬೇಕೆಂದು ಮಾತಂಡ ಮೊಣ್ಣಪ್ಪ ಸಮಾಜದ ಪರವಾಗಿ ಆಗ್ರಹಿಸಿದ್ದಾರೆ. ಈಗಿನ ಬೆಳವಣಿಗೆಗಳನ್ನು ಗಮನಿಸಿದರೆ ಗುಪ್ತಚರ ಇಲಾಖೆ ನಿಷ್ಕ್ರಿಯವಾಗಿದೆ ಎಂಬ ಸಂಶಯ ಮೂಡುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ಈ ರೀತಿಯ ಪ್ರಕರಣಗಳನ್ನು ಆರಂಭದಲ್ಲೇ ನಿಯಂತ್ರಿಸಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಕೈಗೊಳ್ಳುವ ಕ್ರಮಕ್ಕೆ ಅಖಿಲ ಕೊಡವ ಸಮಾಜ ಬೆಂಬಲ ನೀಡಲಿದೆ. ಪಿತೂರಿಗಾರರ ಬಗ್ಗೆಯೂ ಜಿಲ್ಲಾಡಳಿತ ಸೂಕ್ಷ್ಮವಾಗಿ ಗಮನಿಸಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಸಿ.ಎನ್.ಸಿ. ಖಂಡನೆ
ಪಾಲೆಮಾಡುವಿನಲ್ಲಿ ರಸ್ತೆಗೆ ಟಿಪ್ಪು ಸುಲ್ತಾನ್ ಹೆಸರಿಟ್ಟು, ಸಮಾಜ ಘಾತುಕರು ಕೊಡಗಿನ ಸ್ವಾಭಿಮಾನಕ್ಕೆ ಧಕ್ಕೆ ತಂದೊಡ್ಡುತ್ತಿದ್ದಾರೆ ಎಂದು ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಬಾಹ್ಯಶಕ್ತಿಗಳು ಕೊಡಗಿನ ಸಂಸ್ಕøತಿಗೆ ಈ ರೀತಿ ಅಪಚಾರ ಎಸಗುತ್ತಿದ್ದು, ಜಿಲ್ಲಾಡಳಿತ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಸಮಾಜ ಘಾತುಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸ ಬೇಕೆಂದು ಆಗ್ರಹಿಸಿದ್ದಾರೆ. ದಿಡ್ಡಳ್ಳಿ, ಪಾಲೆಮಾಡು, ಚೆರಿಯಪರಂಬು ಸರಕಾರಿ ಭೂಮಿ ಕಬಳಿಸುವ ಹುನ್ನಾರದೊಂದಿಗೆ ಬಾಹ್ಯಘಾತುಕ ಶಕ್ತಿಗಳು ಪಿತೂರಿ ನಡೆಸುತ್ತಿದ್ದು, (ಮೊದಲ ಪುಟದಿಂದ) ಪೊಲೀಸ್ ಇಲಾಖೆ ಕಾನೂನಿನಂತೆ ಕ್ರಮಕೈಗೊಂಡಿದೆ ಎಂದು ಪ್ರತಿಪಾದಿಸಿದ್ದಾರೆ.
ಅಲ್ಲದೆ, ಸರಕಾರ ಹಾಗೂ ಆಡಳಿತ ವ್ಯವಸ್ಥೆಗೆ ವಿರುದ್ಧವಾಗಿ ಮನಬಂದಂತೆ ರಸ್ತೆಗಳಿಗೆ ಹೆಸರು ಇರುವಂತದ್ದು, ಆಡಳಿತಾತ್ಮಕ ಅಥವಾ ರಾಜಕೀಯ ನೆಲೆಯಲ್ಲಿ ಕೂಡ ಒಪ್ಪುವಂಥದ್ದಲ್ಲವೆಂದು ಸಚಿವರು ಸ್ಪಷ್ಟೋಕ್ತಿಯಾಡಿದರು.
ಅರ್ಥವಿಲ್ಲದ ಹೋರಾಟ
ಪಾಲೆಮಾಡುವಿನ ಬೆಳವಣಿಗೆ ಕುರಿತು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ‘ಶಕ್ತಿ'ಯೊಡನೆ ಪ್ರತಿಕ್ರಿಯಿಸುತ್ತಾ ಅರ್ಥವಿಲ್ಲದೆ ಅಥವಾ ಕಾರಣವಿಲ್ಲದ ಹೋರಾಟಗಳಿಗೆ ಸರಕಾರದಿಂದ ಸ್ಪಂದಿಸಲು ಸಾಧ್ಯವಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.
ಹೊದ್ದೂರು ಗ್ರಾಮ ಪಂಚಾಯಿತಿಯ ತೀರ್ಮಾನಗಳನ್ನು ದಿಕ್ಕರಿಸಿ, ಪಾಲೆಮಾಡುವಿನಲ್ಲಿ ವಾಸಿಸುವ ಕುಟುಂಬಗಳಿಗೆ ಮಾನವೀಯ ನೆಲೆಯಲ್ಲಿ ಜಿಲ್ಲಾ ಆಡಳಿತ ಸ್ಪಂದಿಸಿ ಮೂಲಭೂತ ಸೌಕರ್ಯದೊಂದಿಗೆ ಸ್ಮಶಾನ ಜಾಗ ಕೂಡ ನೀಡಲು ಕ್ರಮ ಕೈಗೊಂಡಿದ್ದಾಗಿ ಅವರು ನೆನಪಿಸಿದ್ದಾರೆ.
ಸಮಾಜದಲ್ಲಿ ಮತ್ತು ಮಾಧ್ಯಮಗಳ ಮೂಲಕ ಹೊರ ಜಿಲ್ಲೆಗಳಲ್ಲಿ ಕೊಡಗಿನ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಲು ಕೆಲವರು ಯತ್ನಿಸುತ್ತಿದ್ದು, ಅಂತವರ ಹೋರಾಟ ಪ್ರಶ್ನಾರ್ಹವೆಂದು ಅಭಿಪ್ರಾಯಪಟ್ಟರು. ಸರಕಾರ ಹಾಗೂ ಜಿಲ್ಲಾಡಳಿತ ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಮುಂದಾಗಿದೆ. ಗ್ರಾ.ಪಂ. ವ್ಯವಸ್ಥೆಯನ್ನು ಮೀರಿ ವರ್ತಿಸಿದರೆ ಕಾನೂನು ತನ್ನದೇ ರೀತಿ ಕ್ರಮವಹಿಸಲಿದೆ ಎಂದ ಅವರು, ಪೊಲೀಸ್ ಇಲಾಖೆ ಕೂಡ ಗಲಭೆಗೆ ಎಡೆಯಾಗದಂತೆ ಕಟ್ಟುನಿಟ್ಟಿನ ಮುಂಜಾಗ್ರತೆ ಕೈಗೊಂಡಿರುವದಾಗಿ ನುಡಿದರು.