ಮಡಿಕೇರಿ, ಏ. 24: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗೌಡ ಜನಾಂಗ ಬಾಂಧವರಿಗಾಗಿ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪೈಕೇರ ಕ್ರಿಕೆಟ್ ಕಪ್ ಉತ್ಸವದಲ್ಲಿ ಕೊಂಬಂಡ, ಕೆದಂಬಾಡಿ, ಕಣಜಾಲು, ನಂಗಾರು, ಹೊಸೂರು ತಂಡಗಳು ಮುನ್ನಡೆ ಸಾಧಿಸಿವೆ.
ಇಂದು ನಡೆದ ಪಂದ್ಯಾವಳಿಯಲ್ಲಿ ದೇಶಕೋಟಿ ತಂಡ 4 ವಿಕೆಟ್ಗೆ 53 ರನ್ ಗಳಿಸಿದರೆ, ಉತ್ತರವಾಗಿ ಆಡಿದ ಚೆರ್ಕನ ತಂಡ 6 ವಿಕೆಟ್ಗೆ 45 ರನ್ ಗಳಿಸಿ 7 ರನ್ಗಳಿಂದ ಸೋಲನುಭವಿಸಿತು. ನಿಡಿಂಜಿ ತಂಡವು 3 ವಿಕೆಟ್ಗೆ 61 ರನ್ ಗಳಿಸಿದರೆ, ಎದುರಾಳಿ ಕಾವೇರಿಮನೆ ತಂಡ 3 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿ, 7 ವಿಕೆಟ್ಗಳ ಜಯ ಸಂಪಾದಿಸಿತು. ಚೆರಿಯಮನೆ ತಂಡವು 8 ವಿಕೆಟ್ಗೆ 35 ರನ್ ಗಳಿಸಿದರೆ, ಕೊಂಬಂಡ ತಂಡವು 2 ವಿಕೆಟ್ ನಷ್ಟದಲ್ಲಿ ಗೆಲುವು ಸಾಧಿಸಿ, 8 ವಿಕೆಟ್ಗಳ ಜಯ ಸಂಪಾದಿಸಿತು. ಮತ್ತೊಂದು ಪಂದ್ಯದಲ್ಲಿ ಮೊಟ್ಟನ ತಂಡ 3 ವಿಕೆಟ್ಗೆ 78 ಗಳಿಸಿದರೆ, ಕಾವೇರಿ ಮನೆ ತಂಡ 4 ವಿಕೆಟ್ಗೆ 32 ರನ್ ಮಾತ್ರ ಗಳಿಸಿ 47 ರನ್ಗಳ ಅಂತರ ದಿಂದ ಸೋಲನುಭ ವಿಸಿತು. ಮೊಟ್ಟನ ವಿನೀತ್ 30 ರನ್ ಗಳಿಸಿ ಗಮನ ಸೆಳೆದರೂ ಕೋಡಿ ತಂಡ 2 ವಿಕೆಟ್ಗೆ 68 ರನ್ ಗಳಿಸಿದರೆ, ಓಡಿಯನ ತಂಡ 3 ವಿಕೆಟ್ಗೆ 46 ರನ್ ಮಾತ್ರ ಗಳಿಸಿ 23 ರನ್ಗಳ ಅಂತರದಿಂದ ಸೋಲನುಭವಿಸಿತು. ಕೋಡಿ ಹರ್ಷ 28 ರನ್ಗಳಿಸಿ ಗಮನ ಸೆಳೆದರು.
ಕೆದಂಬಾಡಿ ತಂಡ 7 ವಿಕೆಟ್ಗೆ 59 ರನ್ ಗಳಿಸಿದರೆ, ರೋಚಕ ಆಟ ಪ್ರದರ್ಶಿಸಿದ ಬೈಲೇರ ತಂಡ 2 ವಿಕೆಟ್ಗೆ 53 ರನ್ ಗಳಿಸಿ ಕೇವಲ 6 ರನ್ಗಳ ಅಂತರದಿಂದ ಸೋಲನುಭವಿಸಿತು. ಕೊಂಬಂಡ ಹಾಗೂ ದೇಶಕೋಡಿ ತಂಡಗಳ ಮತ್ತೊಂದು ಪಂದ್ಯದಲ್ಲಿ ದೇಶಕೋಡಿ ತಂಡ 4 ವಿಕೆಟ್ಗೆ 57 ರನ್ ಗಳಿಸಿದರೆ, ಕೊಂಬಂಡ ತಂಡ 2 ವಿಕೆಟ್ಗೆ 58 ರನ್ ಗಳಿಸಿ 8 ವಿಕೆಟ್ಗಳ ಜಯ ಸಂಪಾದಿಸಿತು. ಮಂಞಂಡ್ರ ತಂಡ 5 ವಿಕೆಟ್ಗೆ 64 ರನ್ ಗಳಿಸಿದರೆ, ಕಳಂಜನ ತಂಡ 1 ವಿಕೆಟ್ ನಷ್ಟದಲ್ಲಿ 66 ರನ್ ಗಳಿಸಿ 9 ವಿಕೆಟ್ಗಳ ಜಯ ಸಂಪಾದಿಸಿತು.
ಕುಂಞಳಿ ಹಾಗೂ ಹೊಸೂರು ತಂಡಗಳ ನಡುವಿನ ಪಂದ್ಯದಲ್ಲಿ ಕುಂಞಳಿ ತಂಡ 2 ವಿಕೆಟ್ಗೆ 55 ರನ್ ಗಳಿಸಿದರೆ, ಹೊಸೂರು ತಂಡ ಒಂದು ವಿಕೆಟ್ಗೆ 59 ರನ್ಗಳಿಸಿ 9 ವಿಕೆಟ್ಗಳ ಜಯ ಸಂಪಾದಿಸಿತು. ಹೊಸೂರು ಚಿನ್ಮಯಿ 22 ರನ್ ಗಳಿಸಿ ಗಮನ ಸೆಳೆದರು. ಕೊಂಬಂಡ ಹಾಗೂ ಕೋಡಿ ತಂಡಗಳ ನಡುವಿನ ಮತ್ತೊಂದು ಪಂದ್ಯದಲ್ಲಿ ಕೊಂಬಂಡ ತಂಡ 2 ವಿಕೆಟ್ಗೆ 63 ರನ್ ಗಳಿಸಿತು. ಉತ್ತರವಾಗಿ ಆಡಿದ ಕೋಡಿ ತಂಡ 8 ವಿಕೆಟ್ ಕಳೆದುಕೊಂಡು 40 ರನ್ ಮಾತ್ರ ಗಳಿಸಿ ಸೋಲನುಭವಿಸಿತು.
ಕೆದಂಬಾಡಿ ಹಾಗೂ ಮೊಟ್ಟನ ತಂಡಗಳ ನಡುವಿನ ಪಂದ್ಯದಲ್ಲಿ ಕೆದಂಬಾಡಿ ತಂಡ 1 ವಿಕೆಟ್ಗೆ 71 ರನ್ ಗಳಿಸಿತು. ಉತ್ತರವಾಗಿ ಆಡಿದ ಮೊಟ್ಟನ ತಂಡ 8 ವಿಕೆಟ್ ಕಳೆದುಕೊಂಡು 45 ರನ್ ಮಾತ್ರ ಗಳಿಸಿ ಸೋಲನುಭವಿಸಿತು.