ಮಡಿಕೇರಿ, ಏ. 23: ಕೊಡಗು ಗೌಡ ಯುವ ವೇದಿಕೆ ವತಿ ಯಿಂದ ನಗರದ ಜ. ತಿಮ್ಮಯ್ಯ ಮೈದಾನದಲ್ಲಿ ನಡೆಯುತ್ತಿರುವ ಪೈಕೇರ ಕ್ರಿಕೆಟ್ ಕಪ್ ಉತ್ಸವದಲ್ಲಿ ತೆಕ್ಕಡೆ ಬಿ, ಚೋಂಡಿರ, ಕುದುಪಜೆ, ಸುಳ್ಯಕೋಡಿ ಮುನ್ನಡೆ ಸಾಧಿಸಿವೆ.ಇಂದಿನ ಪಂದ್ಯದಲ್ಲಿ ಕಡ್ಲೇರ 4 ವಿಕೆಟ್ ನಷ್ಟಕ್ಕೆ 45 ರನ್ ಬಾರಿಸಿದರೆ, ಪಾಣತ್ತಲೆ ಬಿ 8 ವಿಕೆಟ್ ನಷ್ಟಕ್ಕೆ 22 ರನ್ ಬಾರಿಸಿ ಸೋಲನುಭವಿಸಿತು. ದಾಯನ ತಂಡವು 3 ವಿಕೆಟ್ ನಷ್ಟಕ್ಕೆ 63 ರನ್ ಬಾರಿಸಿದರೆ, ಚೋಂಡಿರ 2 ವಿಕೆಟ್ ನಷ್ಟಕ್ಕೆ 67 ರನ್ ಬಾರಿಸಿ 9 ವಿಕೆಟ್‍ಗಳ ಜಯ ಸಾಧಿಸಿತು. ದಂಬೆಕೋಡಿ 3 ವಿಕೆಟ್ ನಷ್ಟಕ್ಕೆ 49 ರನ್ ಬಾರಿಸಿದರೆ, ಕುಯ್ಯಮುಡಿ ತಂಡವು 5 ವಿಕೆಟ್ ನಷ್ಟಕ್ಕೆ 20 ರನ್ ಬಾರಿಸಿ ದಂಬೆಕೋಡಿ ತಂಡವು 30 ರನ್‍ಗಳಿಂದ ಜಯ ಸಾಧಿಸಿತು. ಪೂಜಾರಿರ ತಂಡವು 3 ವಿಕೆಟ್ ನಷ್ಟಕ್ಕೆ 35 ರನ್ ಬಾರಿಸಿದರೆ, ಕೋಳಿಬೈಲು ತಂಡವು 2 ವಿಕೆಟ್ ನಷ್ಟಕ್ಕೆ 38 ರನ್ ಬಾರಿಸಿ 8 ವಿಕೆಟ್‍ಗಳ ಜಯ ಸಾಧಿಸಿತು. ಪರಿಚನ ತಂಡವು 3 ವಿಕೆಟ್ ನಷ್ಟಕ್ಕೆ 39 ರನ್ ಬಾರಿಸಿದರೆ, ಮಾಯಪ್ಪನ 3 ವಿಕೆಟ್ ನಷ್ಟಕ್ಕೆ 40 ರನ್ ಬಾರಿಸಿ ಜಯ ದಾಖಲಿಸಿತು.
ಕೋಚನ 7 ವಿಕೆಟ್‍ಗೆ 41 ರನ್ ಬಾರಿಸಿದರೆ, ತೆಕ್ಕಡೆ 3 ವಿಕೆಟ್‍ಗೆ 46 ರನ್ ಬಾರಿಸಿ 7 ವಿಕೆಟ್‍ಗಳ ಜಯ ಸಾಧಿಸಿತು. ದಂಬೆಕೋಡಿ 6 ವಿಕೆಟ್‍ಗೆ 36 ರನ್ ಬಾರಿಸಿದರೆ, ದಂಬೆಕೋಡಿ 2 ವಿಕೆಟ್‍ಗೆ 42 ರನ್ ಬಾರಿಸಿ 8 ವಿಕೆಟ್‍ಗಳ ಜಯ ಸಾಧಿಸಿತು. ಕೊಯಿತೋಡಿ 4 ವಿಕೆಟ್‍ಗೆ 32 ರನ್ ಬಾರಿಸಿದರೆ, ಚೋಂಡಿರ 2 ವಿಕೆಟ್‍ಗೆ 35 ರನ್ ಬಾರಿಸಿ 8 ವಿಕೆಟ್‍ಗಳ ಜಯ ಸಾಧಿಸಿತು. ಅಂಚೆಮನೆ 5 ವಿಕೆಟ್‍ಗೆ 52 ರನ್ ಬಾರಿಸಿದರೆ, ಕೋಳಿಬೈಲು 2 ವಿಕೆಟ್‍ಗೆ 53 ರನ್ ಬಾರಿಸಿ 8 ವಿಕೆಟ್‍ಗಳ ಜಯ ದಾಖಲಿಸಿತು. ತೆಕ್ಕಡೆ 7 ವಿಕೆಟ್‍ಗೆ 49 ರನ್ ಬಾರಿಸಿದರೆ, ಕೂಡಕಂಡಿ 5 ವಿಕೆಟ್‍ಗೆ 44 ರನ್ ಬಾರಿಸಿ, ಸೋಲನುಭವಿಸಿತು. ಕೋಳಿಬೈಲು 5 ವಿಕೆಟ್‍ಗೆ 40 ರನ್ ಬಾರಿಸಿದರೆ, ಚೋಂಡಿರ 2 ವಿಕೆಟ್‍ಗೆ 44 ರನ್ ಬಾರಿಸಿ ಗೆಲುವು ಸಾಧಿಸಿತು. ಚೀಯಂಡಿ 4 ವಿಕೆಟ್‍ಗೆ 50 ರನ್ ಬಾರಿಸಿದರೆ, ಸುಳ್ಯಕೋಡಿ 1 ವಿಕೆಟ್‍ಗೆ 51 ರನ್ ಬಾರಿಸಿ ಜಯ ದಾಖಲಿಸಿತು. ಕುಲ್ಲಚೆಟ್ಟಿರ (ಕೆದಮುಳ್ಳೂರು) 6 ವಿಕೆಟ್‍ಗೆ 23 ರನ್ ಬಾರಿಸಿದರೆ, ಚೀಯಪ್ಪನ 8 ವಿಕೆಟ್‍ಗೆ 24 ರನ್ ಬಾರಿಸಿ ಜಯ ದಾಖಲಿಸಿತು. ಕಡ್ಲೇರ 6 ವಿಕೆಟ್‍ಗೆ 36 ರನ್ ಬಾರಿಸಿದರೆ, ದಂಬೆಕೋಡಿ 2 ವಿಕೆಟ್‍ಗೆ 42 ರನ್ ಬಾರಿಸಿ 8 ವಿಕೆಟ್‍ಗಳ ಜಯ ದಾಖಲಿಸಿತು. ಸುಳ್ಯಕೋಡಿ 2 ವಿಕೆಟ್‍ಗೆ 67 ರನ್ ಬಾರಿಸಿದರೆ, ಮಾಯಪ್ಪನ 8 ವಿಕೆಟ್‍ಗೆ 43 ರನ್ ಬಾರಿಸಿ ಸೋಲನುಭವಿಸಿತು. ಚೀಯಪ್ಪನ 2 ವಿಕೆಟ್‍ಗೆ 39 ರನ್ ಬಾರಿಸಿದರೆ, ಕುದುಪಜೆ 1 ವಿಕೆಟ್‍ಗೆ 43 ರನ್ ಬಾರಿಸಿ 9 ವಿಕೆಟ್‍ಗಳ ಜಯ ದಾಖಲಿಸಿತು.