ನಾಪೆÇೀಕ್ಲು, ಏ. 22: ನಾಪೆÇೀಕ್ಲು ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಬಿದ್ದಾಟಂಡ ಕಪ್ ಹಾಕಿ ನಮ್ಮೆಯ ಏಳನೇ ದಿನದ ಪಂದ್ಯಾಟದಲ್ಲಿ ಭಾರತ ತಂಡದ ಅಂತರ್ರಾಷ್ಟ್ರೀಯ ಆಟಗಾರ ಓಲಂಪಿಯನ್ ಸಣ್ಣುವಂಡ ಉತ್ತಪ್ಪ ಆಡುವದರ ಮೂಲಕ ತಮ್ಮ ತಂಡದ ಗೆಲುವಿಗೆ ಆಸರೆಯಾದರು. ಅಂತೆಯೆ ದಿನದ ಪಂದ್ಯಾಟದಲ್ಲಿ 20 ತಂಡಗಳು ಜಯಗಳಿಸುವದರ ಮೂಲಕ ಮುಂದಿನ ಸುತ್ತಿಗೆ ಪ್ರವೇಶಿಸಿವೆ.

ಬಲ್ಲಂಡ ಮತ್ತು ತೇಲಪಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಬಲ್ಲಂಡ ತಂಡವು ತೇಲಪಂಡ ತಂಡವನ್ನು 2-0 ಗೋಲಿನಿಂದ ಪರಾಭವಗೊಳಿಸಿತು. ಬಲ್ಲಂಡ ತಂಡದ ಪರ ಮಂದಣ್ಣ, ಪೂಣಚ್ಚ ತಲಾ ಒಂದೊಂದು ಗೋಲು ದಾಖಲಿಸಿದರು. ಬೊಳ್ಳಚೆಟ್ಟಿರ ಮತ್ತು ಚೌರೀರ ತಂಡಗಳ ನಡುವಿನ ಪಂದ್ಯದಲ್ಲಿ ಬೊಳ್ಳಚೆಟ್ಟಿರ ತಂಡವು 1-0 ಗೋಲಿನ ಅಂತರದಿಂದ ಚೌರೀರ ತಂಡವನ್ನು ಸೋಲಿಸಿತು.

ಬೊಳ್ಳಚೆಟ್ಟಿರ ತಂಡದ ಪರ ಪೂವಣ್ಣ ಒಂದು ಗೋಲು ದಾಖಲಿಸಿದರು. ನಾಯಕಂಡ ಮತ್ತು ಬಿದ್ದಾಟಂಡ ತಂಡಗಳ ನಡುವಿನ ಪಂದ್ಯವು 1-1 ಗೋಲುಗಳಿಂದ ಡ್ರಾ ಆಯಿತು. ನಂತರ ನಡೆದ ಟೈಬ್ರೇಕರ್‍ನಲ್ಲಿ ನಾಯಕಂಡ ತಂಡವು ಬಿದ್ದಾಟಂಡ ತಂಡವನ್ನು ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿತು. ಮುಲ್ಲಂಡ ಮತ್ತು ಐಮುಡಿಯಂಡ ತಂಡಗಳ ನಡುವಿನ ಪಂದ್ಯವು ಐಮುಡಿಯಂಡ ತಂಡದ ಗೈರು ಹಾಜರಿನ ಕಾರಣದಿಂದ ಮುಲ್ಲಂಡ ತಂಡವು ಮುಂದಿನ ಸುತ್ತಿಗೆ ಪ್ರವೇಶಿಸಿತು.

ಕಂಜಿತಂಡ ಮತ್ತು ಮಣವಟ್ಟಿರ ತಂಡಗಳ ನಡುವಿನ ಪಂದ್ಯದಲ್ಲಿ ಮಣವಟ್ಟಿರ ತಂಡವು 3-0 ಗೋಲಿನಿಂದ ಕಂಜಿತಂಡ ತಂಡವನ್ನು ಪರಾಭವಗೊಳಿಸಿತು. ಮಣವಟ್ಟಿರ ತಂಡದ ಪರ ಸೋಮಣ್ಣ, ಗಗನ್ ಕಾರ್ಯಪ್ಪ, ಮಧು ಅಯ್ಯಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಚಂದುರ ಮತ್ತು ಪೆÇನ್ನಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಚಂದುರ ತಂಡವು 6-1 ಗೋಲಿನ ಅಂತರದಿಂದ ಪೆÇನ್ನಚಂಡ ತಂಡವನ್ನು ಪರಾಭವಗೊಳಿಸಿತು.

ಪೆÇನ್ನಚಂಡ ತಂಡದ ಪರ ತಮ್ಮಯ್ಯ ಒಂದು ಗೋಲು ದಾಖಲಿಸಿದರೆ, ಚಂದುರ ತಂಡದ ಪರ ಪೆÇನ್ನಣ್ಣ, ದೇವಯ್ಯ ತಲಾ 2, ಶ್ಯಾಮ್ ಮುತ್ತಣ್ಣ ಮತ್ತು ರಾಜಾ ಒಂದೊಂದು ಗೋಲು ದಾಖಲಿಸಿದರು. ಪೆಮ್ಮಂಡ ಮತ್ತು ಕನ್ನಂಬಿರ ತಂಡಗಳ ನಡುವಿನ ಪಂದ್ಯದಲ್ಲಿ ಪೆಮ್ಮಂಡ ತಂಡವು 5-0 ಗೋಲಿನಿಂದ ಕನ್ನಂಬಿರ ತಂಡವನ್ನು ಮಣಿಸಿತು.

ಪೆಮ್ಮಂಡ ತಂಡದ ಪರ ಸೋಮಣ್ಣ 2, ಚರಣ್, ಸೋಮಣ್ಣ .ಪಿ.ಯು, ಬೋಪಣ್ಣ ತಲಾ ಒಂದೊಂದು ಗೋಲು ದಾಖಲಿಸಿದರು. ನಾಗಂಡ ಮತ್ತು ಮಾಚಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಚಮಾಡ ತಂಡವು 1-0 ಗೋಲಿನಿಂದ ನಾಗಂಡ ತಂಡವನ್ನು ಪರಾಭವಗೊಳಿಸಿತು.

ಮಾಚಮಾಡ ತಂಡದ ಪರ ಪೆÇನ್ನಣ್ಣ ಒಂದು ಗೋಲು ದಾಖಲಿಸಿದರು. ಬೇಪುಡಿಯಂಡ ಮತ್ತು ನಂಬಡಮಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೇಪುಡಿಯಂಡ ತಂಡವು 3-1 ಗೋಲಿನ ಅಂತರದಲ್ಲಿ ನಂಬಡಮಂಡ ತಂಡವನ್ನು ಸೋಲಿಸಿತು. ನಂಬಡಮಂಡ ತಂಡದ ಪರ ನಂಜಪ್ಪ ಒಂದು ಗೋಲು ದಾಖಲಿಸಿದರೆ, ಬೇಪುಡಿಯಂಡ ತಂಡದ ಪರ ಸಂತು ಎರಡು, ಸುಬ್ಬಯ್ಯ ಒಂದು ಗೋಲು ದಾಖಲಿಸಿದರು.

ಅಲ್ಲಪ್ಪಂಡ ಮತ್ತು ಗೌಡಂಡ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯವು ಗೌಡಂಡ ತಂಡದ ಗೈರು ಹಾಜರಿನ ಕಾರಣ ಅಲ್ಲಪ್ಪಂಡ ತಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಸಣ್ಣುವಂಡ ಮತ್ತು ಚಿಂಡಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಸಣ್ಣುವಂಡ ತಂಡವು 2-0 ಗೋಲಿನ ಅಂತರದಿಂದ ಚಿಂಡಮಾಡ ತಂಡವನ್ನು ಪರಾಭವಗೊಳಿಸಿತು. ಒಲಂಪಿಯನ್ ಸಣ್ಣುವಂಡ ಉತ್ತಪ್ಪ ಮತ್ತು ಅಯ್ಯಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು.

ಮಾಣಿಪಂಡ ಮತ್ತು ಮುಕ್ಕಾಟಿರ ತಂಡಗಳ ನಡುವಿನ ಪಂದ್ಯದಲ್ಲಿ ಮಾಣಿಪಂಡ ತಂಡವು 2-1 ಗೋಲಿನ ಅಂತರದಿಂದ ಮುಕ್ಕಾಟಿರ ತಂಡವನ್ನು ಮಣಿಸಿತು. ಮುಕ್ಕಾಟಿರ ತಂಡದ ಪರ ಮಿಲನ್ ಬೆಳ್ಯಪ್ಪ ಒಂದು ಗೋಲು ದಾಖಲಿಸಿದರೆ, ಮಾಣಿಪಂಡ ತಂಡದ ಪರ ಮಂದಣ್ಣ ಎರಡು ಗೋಲು ದಾಖಲಿಸಿದರು. ಕುಲ್ಲೇಟಿರ ಮತ್ತು ಪಾಲೆಕಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಕುಲ್ಲೇಟಿರ ತಂಡವು ಪಾಲೆಕಂಡ ತಂಡವನ್ನು 4-0 ಗೋಲಿನಿಂದ ಪರಾಭವ ಗೊಳಿಸಿತು.

ಕುಲ್ಲೇಟಿರ ತಂಡದ ಪರ ಶುಭಂ ಚಿಟ್ಟಿಯಪ್ಪ ಮತ್ತು ನಾಚಪ್ಪ ತಲಾ ಎರಡು ಗೋಲು ದಾಖಲಿಸಿದರು. ಕೊಂಗಂಡ ಮತ್ತು ಪುಚ್ಚಿಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಕೊಂಗಂಡ ತಂಡವು ಟೈ ಬ್ರೇಕರ್‍ನ ಮೂಲಕ ಮುಂದಿನ ಸುತ್ತು ಪ್ರವೇಶಿಸಿತು. ಮೊದಲಿಗೆ ನಡೆದ ಪಂದ್ಯದಲ್ಲಿ ಪುಚ್ಚಿಮಾಡ ದೇವಯ್ಯ ಒಂದು ಗೋಲು ದಾಖಲಿಸಿದರೆ ಕೊಂಗಂಡ ತಂಡದ ಪರ ಸನತ್ ಸೋಮಣ್ಣ ಒಂದು ಗೋಲು ದಾಖಲಿಸಿ ಪಂದ್ಯ ಡ್ರಾ. ಗೊಂಡಿತ್ತು.

ಐತಿಚಂಡ ಮತ್ತು ಅಪ್ಪಚ್ಚಿರ ತಂಡಗಳ ನಡುವಿನ ಪಂದ್ಯದಲ್ಲಿ ಐತಿಚಂಡ ತಂಡವು 2-1 ಗೋಲಿನ ಅಂತರದಿಂದ ಅಪ್ಪಚ್ಚಿರ ತಂಡವನ್ನು ಪರಾಭವಗೊಳಿಸಿತು. ಐತಿಚಂಡ ಪೂವಯ್ಯ ಎರಡು ಗೋಲು ದಾಖಲಿಸಿದರೆ, ಅಪ್ಪಚ್ಚಿರ ತಂಡದ ಪರ ಶರತ್ ಪೂಣಚ್ಚ ಒಂದು ಗೋಲು ದಾಖಲಿಸಿದರು. ಪಟ್ರಪಂಡ ಮತ್ತು ಚೇರಂಡ ತಂಡಗಳ ನಡುವಿನ ಪಂದ್ಯದಲ್ಲಿ ಯಾವದೇ ಗೋಲು ದಾಖಲಾಗದ ಕಾರಣ ನಂತರದ ಟೈ ಬ್ರೇಕರ್‍ನಲ್ಲಿ ಪಟ್ರಪಂಡ ತಂಡವು ಚೇರಂಡ ತಂಡವನ್ನು ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು.

ಕರಿನೆರವಂಡ ಮತ್ತು ಕಾಣತಂಡ ತಂಡಗಳ ನಡುವಿನ ಪಂದ್ಯದಲ್ಲಿ ಕರಿನೆರವಂಡ ತಂಡವು 3-0 ಗೋಲಿನ ಅಂತರದಿಂದ ಕಾಣತಂಡ ತಂಡವನ್ನು ಪರಾಭವಗೊಳಿಸಿತು. ಕರಿನೆರವಂಡ ತಂಡದ ಪರ ವಸಂತ್ ಪೊನ್ನಪ್ಪ ಎರಡು ಮತ್ತು ಲಿತೇಶ್ ಬಿದ್ದಪ್ಪ ಒಂದು ಗೋಲು ದಾಖಲಿಸಿದರು. ಶಾಂತೆಯಂಡ ಮತ್ತು ಜಮ್ಮಡ ತಂಡಗಳ ನಡುವಿನ ಪಂದ್ಯದಲ್ಲಿ ಶಾಂತೆಯಂಡ ತಂಡವು 2-1 ಗೋಲಿನ ಅಂತರದಿಂದ ಪರಾಭವಗೊಳಿಸಿತು. ಶಾಂತೆಯಂಡ ತಂಡದ ಪರ ಲುತನ್, ಶಾಹನ್ ತಲಾ ಒಂದೊಂದು ಗೋಲು ದಾಖಲಿಸಿದರು.

ಕುಂಡ್ಯೋಳಂಡ ಮತ್ತು ಮರುವಂಡ ತಂಡಗಳ ನಡುವಿನ ಪಂದ್ಯದಲ್ಲಿ ಕುಂಡ್ಯೋಳಂಡ ತಂಡವು ಮರುವಂಡ ತಂಡವನ್ನು 3-0 ಅಂತರದಿಂದ ಮಣಿಸಿತು. ಕುಂಡ್ಯೋಂಳಂಡ ತಂಡದ ಪರ ಬಿಪಿನ್ ಬೆಳ್ಯಪ್ಪ ಎರಡು, ಪೃಥ್ವಿ ಪಳಂಗಪ್ಪ ಒಂದು ಗೋಲು ದಾಖಲಿಸಿದರು. ಕಾಳಚಂಡ ಮತ್ತು ಹಂಚೆಟ್ಟಿರ ತಂಡಗಳ ನಡುವಿನ ಪಂದ್ಯದಲ್ಲಿ ಹಂಚೆಟ್ಟಿರ ತಂಡವು ಕಾಳಚಂಡ ತಂಡವನ್ನು 4-0 ಗೋಲಿನ ಅಂತರದಿಂದ ಪರಾಭವಗೊಳಿಸಿತು. ಹಂಚೆಟ್ಟಿರ ತಂಡದ ಪರ ಅಂಕುಶ್ ಪೂವಯ್ಯ ಎರಡು, ನವೀನ್ ನಂಜಪ್ಪ, ಮಹೇಶ್ ತಲಾ ಒಂದೊಂದು ಗೋಲು ದಾಖಲಿಸಿದರು.