ವೀರಾಜಪೇಟೆ, ಏ. 23: ಭೂಮಿ ನಮ್ಮನ್ನು ರಕ್ಷಣೆ ಮಾಡಿದ್ದಾಯಿತು. ಭೂಮಿಯನ್ನು ನಾವು ರಕ್ಷಣೆ ಮಾಡಬೇಕಾಗಿದೆ ಎಂದು ಎರಡನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶÀ ಟಿ.ಎಂ. ನಾಗರಾಜು ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘ, ಹಾಗೂ ಸರ್ವೋದಯ ಬಿಎಡ್ ಕಾಲೇಜು ಸಂಯುಕ್ತ ಆಶ್ರಯದಲ್ಲಿ ‘ವಿಶ್ವ ಭೂ ದಿನಾಚರಣೆ’ ಅಂಗವಾಗಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಕಾಲೇಜು ಆವರಣ ದಲ್ಲಿ ಗಿಡ ನೆಟ್ಟು ಅವರು ಮಾತನಾಡಿ ದರು. ಮನುಷ್ಯ ತನ್ನ ಸ್ವಾಥರ್Àಕ್ಕಾಗಿ ಮರ ಗಿಡಗಳನ್ನು ಕಡಿದು ಕಾಡು ನಾಶ ಮಾಡುತ್ತಿರುವದರಿಂದ ಭೂಮಿ ಬರಡಾಗುತ್ತಿದೆ. ಮರಗಳು ತನ್ನ ಬೇರಿನಿಂದ ನೀರಿನ ಅಂಶವನ್ನು ಹಿಡಿದಿಟ್ಟುಕೊಂಡು ಬೆಳವಣಿಗೆಗೆ ಕಾರಣವಾಗುತ್ತಿದೆ ಎಂದು ನೆನಪಿಸಿ ದರು. ಅಪರ ಸಿವಿಲ್ ನ್ಯಾಯಾಧೀಶ ಬಿ.ಕೆ.ಮನು ಮಾತನಾಡಿ ನಿಗಧಿತ ಸಮಯಕ್ಕೆ ಉತ್ತಮ ಮಳೆ ಬೆಳೆ ಬೇಕಾದರೆ ಭೂಮಿಯನ್ನು ರಕ್ಷಿಸುವದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು

ವಕೀಲರ ಸಂಘದ ಅಧ್ಯಕ್ಷ ಎನ್.ಜಿ. ಕಾಮತ್ ಮಾತನಾಡಿ, ಮುಂದಿನ ಪೀಳಿಗೆಗಾಗಿ ಪ್ರಕೃತಿಯನ್ನು ಕಾಪಾಡಿಕೊಳ್ಳಲು ಈಗಿನಿಂದಲೇ ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ವಕೀಲ ಬಿ.ಬಿ. ಮಾದಪ್ಪ ಅವರು ಭೂ ರಕ್ಷಣೆ ಬಗ್ಗೆ ಉಪನ್ಯಾಸ ನೀಡಿ ಸಾಕ್ಷ್ಯಚಿತ್ರ ತೋರಿಸಿದರು. ವೇದಿಕೆಯಲ್ಲಿ ಉಪವಲಯ ಅರಣ್ಯ ಅಧಿಕಾರಿ ಕೆ.ಎಸ್. ಸುಬ್ರಾಯ ಹಾಗೂ ನಗರ ಪೊಲೀಸ್ ಠಾಣಾಧಿಕಾರಿ ಆರ್. ಸಂತೋಷ್ ಕಶ್ಯಪ್ ಉಪಸ್ಥಿತರಿದ್ದರು.

ಸರ್ವೋದಯ ಬಿಎಡ್ ಕಾಲೇಜಿನ ಪ್ರಾಂಶುಪಾಲ ಡಾ. ಸೈದಾ ಶಾನವಾಜ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕರಾದ ಡಾ. ಎಂ. ವಾಣಿ ಸ್ವಾಗತಿಸಿದರು. ಆರ್. ಸುಜಾತ ನಿರೂಪಿಸಿದರೆ. ಕೆ.ಜೆ. ಮಿನಿ ಅವರು ವಂದಿಸಿದರು.

ಪ್ಲಾಸ್ಟಿಕ್ ಮುಕ್ತ ಭೂಮಿಯಿರಲಿ

ಸೋಮವಾರಪೇಟೆ: ಸಕಲ ಜೀವರಾಶಿಗಳಿಗೂ ಆಶ್ರಯತಾಣ ವಾಗಿರುವ ಭೂಮಿಯನ್ನು ಪ್ಲಾಸ್ಟಿಕ್‍ನಿಂದ ಮುಕ್ತಗೊಳಿಸದಿದ್ದರೆ ಭಾರೀ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಇಲ್ಲಿನ ಜೆಎಂಎಫ್‍ಸಿಯ ಹಿರಿಯ ಸಿವಿಲ್ ನ್ಯಾಯಾಧೀಶÀ ಪರಶು ರಾಮ್ ದೊಡ್ಡಮನಿ ಎಚ್ಚರಿಸಿದರು.

ತಾಲೂಕು ಕಾನೂನು ಸೇವಾಸಮಿತಿ, ವಕೀಲರ ಸಂಘ ಮತ್ತು ಕೃಷಿ ಹಾಗೂ ತೋಟಗಾರಿಕಾ ಇಲಾಖಾ ವತಿಯಿಂದ ಸಮೀಪದ ಗೋಣಿಮರೂರು ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಭೂ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಕೃಷಿ ಇಲಾಖೆಯ ಸಹಾಯಕ ನಿರ್ದೆಶಕ ರಾಜಶೇಖರ್, ಗ್ರೇಡ್ 2 ತಹಶೀಲ್ದಾರ್ ಪೊನ್ನು ಸೇರಿದಂತೆ ಇತರರು ಉಪಸ್ಥಿತರಿದ್ದರು.