ಗೋಣಿಕೊಪ್ಪಲು, ಏ. 26: ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಹಾಗೂ ಪ್ರಾಥಮಿಕ ಶಾಲಾ ಮೈದಾನಗಳಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಅಳಮೇಂಗಡ ಕ್ರಿಕೆಟ್ ಕಪ್‍ನಲ್ಲಿ ಚೋಡುಮಾಡ, ಕೋಲ್ಮಾಡಂಡ, ಉದ್ದಿನಾಡಂಡ, ಬಲ್ಲಂಡ, ಅವರೆಮಾದಂಡ, ಉದಿಯಂಡ (ಮುಟ್ಲು), ಮಾಳೇಟಿರ (ಕೆದಮುಳ್ಳೂರು), ಪುದಿಯಂಡ, ಅಮ್ಮಾಟಂಡ, ತಾಚಮಂಡ, ಮಾಪಣಮಾಡ, ಅಮ್ಮಚ್ಚಿಮಣಿಯಂಡ ಹಾಗೂ ಅಲ್ಲುಮಾಡ ತಂಡಗಳು ಜಯ ಸಾಧಿಸಿದವು.

ಚೋಡುಮಾಡ ತಂಡವು ಕೋದೇಂಗಡ ವಿರುದ್ದ 6 ವಿಕೆಟ್‍ಗಳ ಗೆಲುವು ಪಡೆಯಿತು. ಕೋದೇಂಗಡ 10 ವಿಕೆಟ್‍ಗೆ 68 ರನ್‍ಗಳಿಸಿತು. ಚೋಡುಮಾಡ 4 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ಚೋಡುಮಾಡ ನಿಶಾಂತ್ ಹ್ಯಾಟ್ರಿಕ್ ಸೇರಿ 6 ವಿಕೆಟ್ ಪಡೆದು ಮಿಂಚಿದರು. ಕೋದೇಂಗಡ ಮುತ್ತಪ್ಪ 40 ರನ್ ಗಳಿಸಿ ಪಂದ್ಯ ಶ್ರೇಷ್ಠರಾದರು.

ಕೋಲ್ಮಾಡಂಡ ತಂಡ ಮುರುವಂಡ ವಿರುದ್ಧ 10 ಅಮೋಘ ಜಯ ಸಾಧಿಸಿತು. ಮುರುವಂಡ 10 ವಿಕೆಟ್‍ಗೆ 48 ರನ್ ಗಳಿಸಿತು. ಕೋಲ್ಮಾಡಂಡ ವಿಕೆಟ್ ನಷ್ಟವಿಲ್ಲದೆ ಗುರಿ ಸಾಧಿಸಿತು. ಮುರುವಂಡ ತಿಶಾ ಪೆಮ್ಮಯ್ಯ 2 ವಿಕೆಟ್ ಗಳಿಸಿ ಪಂದ್ಯ ಪುರುಷರಾದರು.

ಉದ್ದಿನಾಡಂಡ ತಂಡ ಬಲ್ಲಾರಂಡ ವಿರುದ್ದ 28 ರನ್‍ಗಳ ಭರ್ಜರಿ ಗೆಲುವು ಪಡೆಯಿತು. ಬಲ್ಲಾರಂಡ 6 ವಿಕೆಟ್‍ಗೆ 72 ರನ್ ಸೇರಿಸಿತು. ಉದ್ದಿನಾಡಂಡ 1 ವಿಕೆಟ್ ನಷ್ಟದಲ್ಲಿ ಗುರಿ ಪೂರೈಸಿತು. ಉದ್ದಿನಾಡಂಡ ಪ್ರದೀಪ್ 39 ರನ್ ಬಾರಿಸಿದರು. ಬಲ್ಲಾರಂಡ ವಿನು 46 ರನ್ ಗಳಿಸಿ ಪಂದ್ಯ ಶ್ರೇಷ್ಠರಾದರು.

ಗುಡ್ಡಮಾಡ ತಂಡ ಗೈರಾಗುವ ಮೂಲಕ ಬಲ್ಲಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯಲು ಸಹಕಾರಿ ಆಯಿತು.

ಮಡ್ಲಂಡ ತಂಡ ಗೈರಾಗುವ ಮೂಲಕ ಅವರೆಮಾದಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.

ಉದಿಯಂಡ (ಮುಟ್ಲು) ತಂಡ ಚೇಂದಂಡ ವಿರುದ್ಧ 9 ವಿಕೆಟ್ ಜಯ ಸಾಧಿಸಿತು. ಚೇಂದಂಡ 9 ವಿಕೆಟ್ ನಷ್ಟಕ್ಕೆ 56 ರನ್ ಗಳಿಸಿತು. ಉದಿಯಂಡ 1 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ಉದಿಯಂಡ ಪ್ರಧಾನ್ 29 ರನ್ ಗಳಿಸಿದರು. ಚೇಂದಂಡ ಜತಿನ್ 19 ರನ್ ಗಳಿಸಿ ಪಂದ್ಯ ಪುರುಷರಾದರು

ಮಾಳೇಟೀರ (ಕೆದಮುಳ್ಳೂರು) ತಂಡವು ಇಂದಂಡ ವಿರುದ್ಧ 8 ವಿಕೆಟ್ ಜಯ ಸಾಧಿಸಿತು. ಇಂದಂಡ 5 ವಿಕೆಟ್‍ಗೆ 61 ರನ್ ಗಳಿಸಿತು. ಮಾಳೇಟಿರ 2 ವಿಕೆಟ್ ಕಳೆದುಕೊಂಡು 65 ರನ್ ಗಳಿಸಿತು. ಮಾಳೇಟಿರ ಡಾನ್ ಮುತ್ತಣ್ಣ 27 ರನ್ ಗಳಿಸಿದರು. ಇಂದಂಡ ಪ್ರವೀಣ್ 19 ರನ್ ಗಳಿಸಿ ಪಂದ್ಯ ಶ್ರೇಷ್ಠರಾದರು.

ಪುದಿಯಂಡ ತಂಡವು ಕಂಜಿತಂಡ ವಿರುದ್ದ 8 ವಿಕೆಟ್ ಗೆಲುವು ಪಡೆಯಿತು. ಕಂಜಿತಂಡ 5 ವಿಕೆಟ್‍ಗೆ 60 ರನ್ ದಾಖಲಿಸಿತು. ಪುದಿಯಂಡ 2 ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿತು. ಕಂಜಿತಂಡ ದಿಲನ್ 15 ರನ್ ಗಳಿಸಿ ಪಂದ್ಯ ಶ್ರೇಷ್ಠ ಎನಿಸಿಕೊಂಡರು.

ಅಮ್ಮಾಟಂಡ ತಂಡವು ಪಡಿಯೆಟ್ಟಿರವನ್ನು 10 ವಿಕೆಟ್‍ಗಳಿಂದ ಮಣಿಸಿತು. ಪಡಿಯೆಟ್ಟಿರ 8 ವಿಕೆಟ್‍ಗೆ 35 ರನ್ ಗಳಿಸಿತು. ಅಮ್ಮಾಟಂಡ ವಿಕೆಟ್ ನಷ್ಟವಿಲ್ಲದೆ 36 ರನ್ ದಾಖಲಿಸಿತು. ಪಡಿಯೆಟ್ಟಿರ ಬನ್ಸಿ 20 ರನ್ ದಾಖಲಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ತಾಚಮಂಡ ತಂಡವು ಕಲ್ಮಾಡಂಡ ವಿರುದ್ದ 8 ವಿಕೆಟ್ ಗೆಲುವು ಪಡೆಯಿತು. ಕಲ್ಮಾಡಂಡ 3 ವಿಕೆಟ್‍ಗೆ 46 ರನ್ ಗಳಿಸಿತು. ತಾಚಮಂಡ 2 ವಿಕೆಟ್ ನಷ್ಟಕ್ಕೆ 47 ರನ್ ಗೆಲುವು ದಾಖಲಿಸಿತು. ಕಲ್ಮಾಡಂಡ ಮಧು 10 ರನ್ ಗಳಿಸಿ ಪಂದ್ಯ ಶ್ರೇಷ್ಠರಾದರು.

ಮಾಪಣಮಾಡ ತಂಡ ಮಚ್ಚಂಡ ವಿರುದ್ದ 53 ರನ್‍ಗಳ ಗೆಲುವು ಪಡೆಯಿತು. ಮಾಪಣಮಾಡ 5 ವಿಕೆಟ್‍ಗೆ 93 ರನ್ ದಾಖಲಿಸಿತು. ಮಚ್ಚಂಡ 6 ವಿಕೆಟ್ ನಷ್ಟಕ್ಕೆ 40 ರನ್ ಗಳಿಸಿ ಸೋಲನುಭವಿಸಿತು. ಮಚ್ಚಂಡ ಕಿರಣ್ 20 ರನ್ ಸೇರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದರು.

ಅಲ್ಲುಮಾಡ ತಂಡವು ಕಬ್ಬಚ್ಚೀರ ವಿರುದ್ಧ 8 ವಿಕೆಟ್‍ಗಳ ಗೆಲುವು ಪಡೆಯಿತು. ಕಬ್ಬಚ್ಚೀರ 4 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿತು. ಅಲ್ಲುಮಾಡ 2 ವಿಕೆಟ್ ನಷ್ಟಕ್ಕೆ 98 ರನ್ ಸಿಡಿಸಿ ಗೆಲುವು ಪಡೆದರು. ಕಬ್ಬಚ್ಚೀರ ಅಯ್ಯಪ್ಪ 36 ರನ್ ಗಳಿಸಿ ಪಂದ್ಯ ಪುರುಷೋತ್ತಮರಾದರು.

ಅಮ್ಮಚ್ಚಿಮಣಿಯಂಡ ತಂಡವು ಮುಳ್ಳಂಗಡ ವಿರುದ್ಧ 10 ವಿಕೆಟ್‍ಗಳ ಗೆಲುವು ಪಡೆಯಿತು. ಮುಳ್ಳಂಗಡ 5 ವಿಕೆಟ್ ನಷ್ಟಕ್ಕೆ 51 ರನ್ ದಾಖಲಿಸಿತು. ಅಮ್ಮಚ್ಚಿಮಣಿಯಂಡ ವಿಕೆಟ್ ನಷ್ಟವಿಲ್ಲದೆ 3 ಓವರ್‍ಗಳಲ್ಲಿ ಗೆಲುವಿನ ನಗೆ ಬೀರಿದರು. ಮುಳ್ಳಂಗಡ ಚೆಂಗಪ್ಪ 20 ರನ್ ಸಿಡಿಸಿ ಪಂದ್ಯ ಶ್ರೇಷ್ಠರಾದರು.