ಮಡಿಕೇರಿ, ಏ. 26: ಚೇರಂಗಾಲದ ಕಾವೇರಿ ಜನ್ಮ ಭೂಮಿ ಟ್ರಸ್ಟ್‍ನ 10ನೇ ವರ್ಷದ ತವರೂರ ಕೂಟದ ಅಂಗವಾಗಿ ತಾ. 30 ರಂದು ಸಾರ್ವಜನಿಕರಿಗಾಗಿ ಓಟದ ಸ್ಪರ್ಧೆ ಏರ್ಪಡಿಸಲಾಗಿದೆ. ಪುರುಷರಿಗೆ 5 ಸಾವಿರ ಮೀಟರ್ ಹಾಗೂ 100 ಮೀಟರ್, ಮಹಿಳೆಯರಿಗೆ 1500 ಮೀ ಹಾಗೂ 100 ಮೀ, 15 ವರ್ಷದೊಳಗಿನ ಬಾಲಕರಿಗೆ 1500 ಮೀ ಹಾಗೂ 19 ವರ್ಷದೊಳಗಿನ ಬಾಲಕಿಯರಿಗೆ 400 ಮೀ ಓಟದ ಸ್ಪರ್ಧೆ ಏರ್ಪಡಿಸಲಾಗಿದೆ. ಆಸಕ್ತರು ಭಾಗವಹಿಸ ಬಹುದಾಗಿದ್ದು, ಹೆಚ್ಚಿನ ಮಾಹಿತಿಗೆ ಮೊ. 9448683967, 9448895909 ಈ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.