ಮಡಿಕೇರಿ, ಏ.26 : ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗೌಡ ಕುಟುಂಬಗಳ ನಡುವೆ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪೈಕೇರ ಕ್ರಿಕೆಟ್ ಕಪ್ ಉತ್ಸವದಲ್ಲಿ ಪಟ್ಟಡ ಹಾಗೂ ಪರ್ಲಕೋಟಿ ತಂಡಗಳು ಪ್ರಿಕ್ವಾರ್ಟರ್ ಹಂತಕ್ಕೆ ಪ್ರವೇಶಿಸಿದೆ. ಕರ್ಣಯ್ಯನ, ಪಡುಪುಮನೆ, ಬಿದ್ರುಪಣೆ ಹಾಗೂ ಕಲ್ಲುಮುಟ್ಲು ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಿವೆ.ಇಂದು ನಡೆದ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟ್ ಮಾಡಿದ ಕಣಜಾಲು ತಂಡ 8 ವಿಕೆಟ್‍ಗೆ 25 ರನ್ ಮಾತ್ರ ಗಳಿಸಿತು. ಉತ್ತರವಾಗಿ ಆಡಿದ ಪರ್ಲಕೋಟಿ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ 31 ರನ್ ಗಳಿಸಿ 10 ವಿಕೆಟ್‍ಗಳ ಜಯ ಸಂಪಾದಿಸಿತು.

ಪಟ್ಟಡ ತಂಡ 4 ವಿಕೆಟ್‍ಗೆ 44 ರನ್ ಗಳಿಸಿದರೆ, ಹೊಸೂರು ತಂಡ 4 ವಿಕೆಟ್‍ಗೆ 33 ರನ್ ಮಾತ್ರ ಗಳಿಸಿ 10 ರನ್‍ಗಳ ಅಂತರದಿಂದ ಸೋಲನುಭವಿಸಿತು. ಸಿರಾಜೆ ಹಾಗೂ ಕುಂಬಳಚೇರಿ ತಂಡಗಳ ನಡುವಿನ ಪಂದ್ಯದಲ್ಲಿ ಸಿರಾಜೆ ತಂಡ 6 ವಿಕೆಟ್‍ಗೆ 25 ರನ್ ಗಳಿಸಿದರೆ, ಕುಂಬಳಚೇರಿ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ 27 ರನ್ ಗಳಿಸಿ ಗೆಲವು ಸಾಧಿಸಿತು. ಕುಂಬಳಚೇರಿ ಉದಯ 3 ವಿಕೆಟ್ ಪಡೆದು ಗಮನ ಸೆಳೆದರು.

ಕೇಕಡ ಹಾಗೂ ಪೇನಡ್ಕ ತಂಡಗಳ ನಡುವಿನ ಪಂದ್ಯದಲ್ಲಿ ಪೇನಡ್ಕ ತಂಡ 4 ವಿಕೆಟ್‍ಗೆ 39 ರನ್ ಗಳಿಸಿದರೆ, ಕೇಕಡ ತಂಡ 4 ವಿಕೆಟ್‍ಗೆ 41 ರನ್ ಗಳಿಸಿ ಜಯಗಳಿಸಿತು. ಕೇಕಡ ದೀಪಕ್ 23 ರನ್ ಗಳಿಸಿ ಗಮನ ಸೆಳೆದರು.

ಅಚ್ಚಲ್ಪಾಡಿ ತಂಡ 2 ವಿಕೆಟ್‍ಗೆ 49 ರನ್ ಗಳಿಸಿದರೆ, ಉತ್ತರವಾಗಿ ಆಡಿದ ಪಡುಪುಮನೆ ತಂಡ 1 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿ 9 ವಿಕೆಟ್‍ಗಳ ಜಯ ಸಾಧಿಸಿತು. ಅಚ್ಚಲ್ಪಾಡಿ ಜನಿತ್ 24 ಹಾಗೂ ಪಡುಪು ಜೀವನ್ 34 ರನ್ ಗಳಿಸಿ ಗಮನ ಸೆಳೆದರು.

ಕಲ್ಲುಮುಟ್ಲು ಹಾಗೂ ಕುದುಕುಳಿ ತಂಡಗಳ ನಡುವಿನ ಪಂದ್ಯದಲ್ಲಿ ಕುದುಕುಳಿ ತಂಡ 8 ವಿಕೆಟ್‍ಗೆ 33 ರನ್ ಗಳಿಸಿದರೆ, ಕಲ್ಲುಮುಟ್ಲು ತಂಡ 2 ವಿಕೆಟ್ ಕಳೆದುಕೊಂಡು 8 ವಿಕೆಟ್‍ಗಳ ಜಯ ಸಂಪಾದಿಸಿತು. ಪರ್ಲಕೋಟಿ ಹಾಗೂ ಬೈಮನ ತಂಡಗಳ ನಡುವಿನ ಮತ್ತೊಂದು ಪಂದ್ಯದಲ್ಲಿ ಬೈಮನ ತಂಡ 9 ವಿಕೆಟ್‍ಗೆ 34 ರನ್ ಗಳಿಸಿದರೆ, ಪರ್ಲಕೋಟಿ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ 10 ವಿಕೆಟ್‍ಗಳ ಜಯ ಸಾಧಿಸಿತು. ಕುಕ್ಕುನೂರು ಹಾಗೂ ಕೋಳಿಮಾಡು ತಂಡಗಳ ನಡುವಿನ ಪಂದ್ಯದಲ್ಲಿ ಕೋಳಿಮಾಡು ತಂಡ 4 ವಿಕೆಟ್‍ಗೆ 44 ರನ್ ಗಳಿಸಿತು. ಕುಕ್ಕುನೂರು ತಂಡ 8 ವಿಕೆಟ್‍ಗೆ 47 ರನ್ ಗಳಿಸಿ ಜಯ ಸಾಧಿಸಿತು. ಅಯ್ಯೇಟಿ ಹಾಗೂ ತೋರೆರ ತಂಡಗಳ ನಡುವಿನ ಪಂದ್ಯದಲ್ಲಿ ಅಯ್ಯೇಟಿ ತಂಡ 4 ವಿಕೆಟ್‍ಗೆ 45 ರನ್ ಗಳಿಸಿದರೆ, ತೋರೆರ ತಂಡ 2 ವಿಕೆಟ್‍ಗೆ ಗುರಿ ಸಾಧಿಸಿತು.

ನಂಗಾರು ಹಾಗೂ ಪಟ್ಟಡ ತಂಡಗಳ ನಡುವಿನ ಮತ್ತೊಂದು ಪಂದ್ಯದಲ್ಲಿ ಪಟ್ಟಡ ತಂಡ 4 ವಿಕೆಟ್‍ಗೆ 51 ರನ್ ಗಳಿಸಿದರೆ, ನಾಂಗಾರು ತಂಡ 6 ವಿಕೆಟ್‍ಗೆ 37 ರನ್ ಗಳಿಸಿ ಸೋಲನುಭವಿಸಿತು. ಪಟ್ಟಡ ದೀಪು 27 ರನ್ ಗಳಿಸಿ ಗಮನ ಸೆಳೆದರು.

ಪಡುಪು ಹಾಗೂ ತಳೂರು ತಂಡಗಳ ನಡುವಿನ ಪಂದ್ಯದಲ್ಲಿ ಪಡುಪು ತಂಡ 3 ವಿಕೆಟ್‍ಗೆ 83 ರನ್ ಗಳಿಸಿದರೆ, ತಳೂರು ತಂಡ 4 ವಿಕೆಟ್‍ಗೆ 39 ರನ್ ಮಾತ್ರ ಗÀಳಿಸಿ ಸೋಲನುಭವಿಸಿತು. ಪಡುಪು ತಂಡದ ಸಂಜಯ್ 37 ರನ್ ಗಳಿಸಿ ಗಮನ ಸೆಳೆದರು.

ಕರ್ಣಯ್ಯನ ತಂಡ 7 ವಿಕೆಟ್‍ಗೆ 43 ರನ್ ಗಳಿಸಿದರೆ, ಕಂಬಳಚೇರಿ ತಂಡ 3 ವಿಕೆಟ್‍ಗೆ 27 ರನ್ ಮಾತ್ರ ಗಳಿಸಿ ಸೋಲನುಭವಿಸಿತು. ಕೇಕಡ ಹಾಗೂ ಬಿದ್ರುಪಣೆ ತಂಡಗಳ ಮತ್ತೊಂದು ಪಂದ್ಯದಲ್ಲಿ ಬಿದ್ರುಪಣೆ ತಂಡ 5 ವಿಕೆಟ್‍ಗೆ 50 ರನ್ ಗಳಿಸಿದರೆ, ಕೇಕಡ ತಂಡ 6 ವಿಕೆಟ್‍ಗೆ 46 ರನ್ ಗಳಿಸಿ ಸೋಲನುಭವಿಸಿತು. ಅಯ್ಯೇಟಿ ಹಾಗೂ ಪರ್ಲಕೋಟಿ ತಂಡಗಳ ನಡುವಿನ ಮತ್ತೊಂದು ಪಂದ್ಯದಲ್ಲಿ ಅಯ್ಯೇಟಿ ತಂಡ 6 ವಿಕೆಟ್‍ಗೆ ಕೇವಲ 12 ರನ್ ಮಾತ್ರ ಗಳಿಸಿದರೆ, ಪರ್ಲಕೋಟಿ ತಂಡ 1 ವಿಕೆಟ್ ನಷ್ಟದಲ್ಲಿ 18 ರನ್ ಗಳಿಸಿ 9 ವಿಕೆಟ್‍ಗಳ ಜಯ ಸಂಪಾದಿಸಿತು.

ಕಲ್ಲುಮುಟ್ಲು ಹಾಗೂ ಕುಕ್ಕುನೂರು ತಂಡಗಳ ನಡುವಿನ ಪಂದ್ಯದಲ್ಲಿ ಕುಕ್ಕುನೂರು ತಂಡ 6 ವಿಕೆಟ್‍ಗೆ 34 ರನ್ ಗಳಿಸಿದರೆ, ಕಲ್ಲುಮುಟ್ಲು ತಂಡ 35 ರನ್ ಗಳಿಸಿ 10 ವಿಕೆಟ್‍ಗಳ ಜಯ ಸಂಪಾದಿಸಿತು. ಪಟ್ಟಡ ಹಾಗೂ ಹುಲಿಮನೆ ತಂಡಗಳ ನಡುವಿನ ಪಂದ್ಯದಲ್ಲಿ ಪಟ್ಟಡ ತಂಡ 2 ವಿಕೆಟ್‍ಗೆ 58 ರನ್ ಗಳಿಸಿದರೆ, ಹುಲಿಮನೆ ತಂಡ 5 ವಿಕೆಟ್‍ಗೆ 43 ರನ್ ಗಳಿಸಿ ಸೋಲನುಭವಿಸಿತು. ಪಟ್ಟಡ ದೀಪಕ್ 31 ರನ್ ಗಳಿಸಿ 3 ವಿಕೆಟ್ ಪಡೆದುಕೊಂಡು ಗಮನ ಸೆಳೆದರು.