ಶನಿವಾರಸಂತೆ, ಏ. 25: ಶನಿವಾರಸಂತೆ ಹೋಬಳಿ ಸೇರಿದಂತೆ ಗೆಜ್ಜೆಹಣಕೋಡು ಗ್ರಾಮದಲ್ಲಿ ಸುಮಾರು 40 ವರ್ಷಗಳ ಹಿಂದೆ ಕುಡಿಯುವ ನೀರಿಗಾಗಿ ತೆರೆದ ಬಾವಿಯೊಂದನ್ನು ತೆಗೆದಿದ್ದು, ಇದೀಗ ಸುಮಾರು 10 ವರ್ಷಗಳಿಂದ ಆ ಬಾವಿಯಲ್ಲಿ ನೀರಿಲ್ಲದೆ ಅಪಾಯಕ್ಕೆ ಆಹ್ವಾನ ನೀಡಿದೆ.
ಸಂಬಂಧಿಸಿದವರು ಇತ್ತ ಗಮನಿಸುವಂತೆ ಸಾರ್ವಜನಿಕರು ಕೋರಿದ್ದಾರೆ.