ಚೆಟ್ಟಳ್ಳಿ, ಏ. 25: ಅರುಣಾಚಲ್ ಫೆಸ್ಟಿವಲ್ ಆಫ್ ಸ್ಪೀಡ್ 2017 ರ್ಯಾಲಿಯಲ್ಲಿ ಕೊಂಗೇಟಿರ ಬೋಪಯ್ಯ ಹಾಗೂ ಕೊಂಗಂಡ ಕರುಂಬಯ್ಯ ಗೆಲುವು ಸಾಧಿಸಿದ್ದಾರೆ.
ಚೆಟ್ಟಳ್ಳಿಯ ಕೊಂಗೇಟಿರ ಬೋಪಯ್ಯ (ಚಾಲಕ) ಹಾಗೂ ಕೊಂಗಂಡ ಗಗನ್ ಕರುಂಬಯ್ಯ (ನ್ಯಾವಿಗೇಟರ್) ಅರುಣಾಚಲ್ ಫೆಸ್ಟಿವಲ್ ಆಫ್ ಸ್ಪೀಡ್ 2017 ರ್ಯಾಲಿಯಲ್ಲಿ ಭಾಗವಹಿಸಿ 1600 ಸಿಸಿಯಲ್ಲಿ ಮೊದಲ ಹಾಗೂ ಓವರಾಲ್‍ನಲ್ಲಿ ಎರಡನೇ ಬಹುಮಾನವನ್ನು ಪಡೆದಿದ್ದಾರೆ.
ರ್ಯಾಲಿಯನ್ನು ಮೋಟಾರ್ ಸ್ಪೋಟ್ರ್ಸ್ ಕ್ಲಬ್ ಆಫ್ ಅರುಣಾಚಲ ಪ್ರದೇಶ ಹಾಗೂ ಸರಕಾರದ ಪ್ರಾಯೋಜಕತ್ವದಲ್ಲಿ ನಡೆದ ನಾಲ್ಕನೇ ವರ್ಷದ ರ್ಯಾಲಿಯಲ್ಲಿ ಭಾರತದ 20 ನುರಿತ ರ್ಯಾಲಿಪಟುಗಳು ಭಾಗವಹಿಸಿ ದ್ದರು. ಒಟ್ಟು 9 ಹಂತಗಳಿದ್ದು, 80 ಕಿ.ಮಿ ದೂರದ ಮೂರು ದಿನಗಳ ರ್ಯಾಲಿಯನ್ನು ಶ್ರಮಿಸಬೇಕಿತ್ತು. ಬೆಟ್ಟಗುಡ್ಡಗಳು, ಪ್ರಪಾತಗಳ ನಡುವೆ ಕಿರಿದಾದ ಪ್ರದೇಶದಲ್ಲಿ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಟ್ರೋಫಿ ಹಾಗೂ ಒಂದು ಲಕ್ಷ ಬಹುಮಾನವನ್ನು ಪಡೆದಿದ್ದಾರೆ. ಈ ರ್ಯಾಲಿ ರೋಚಕ ಅನುಭವ ನೀಡಿತ್ತು ಎಂದು ಕೊಂಗೇಟಿರ ಬೋಪಯ್ಯ ಹೆಮ್ಮೆಯಿಂದ ಅಭಿಪ್ರಾಯ ವ್ಯಕ್ತಪಡಿಸಿದರು.
-ಪುತ್ತರಿರ ಕರುಣ್ ಕಾಳಯ್ಯ