ಗೋಣಿಕೊಪ್ಪಲು, ಏ. 25: ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಹಾಗೂ ಪ್ರಾಥಮಿಕ ಶಾಲಾ ಮೈದಾನಗಳಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಅಳಮೇಂಗಡ ಕ್ರಿಕೆಟ್ ಕಪ್‍ನಲ್ಲಿ ಕೋಟ್ರಂಗಡ, ಕಳ್ಳೇಂಗಡ ನಾಪೋಕ್ಲು, ಅಲ್ಲಂಗಡ, ಬಾಳೆಯಡ, ಆಪಟ್ಟೀರ, ಹೊದವಾಡ ಚೌರೀರ, ಮೀದೇರೀರ, ಹರಿಹರ ಬಾಚೀರ, ದಾಸಂಡ, ಬೊಳ್ಯಪಂಡ ಹಾಗೂ ಹಂಚೇಟೀರ ತಂಡಗಳು ಜಯ ಗಳಿಸಿ ಎರಡನೇ ಸುತ್ತಿಗೆ ಪ್ರವೇಶ ಪಡೆದಿವೆ.
ಮೈದಾನದ 1ರ ಪಂದ್ಯದಲ್ಲಿ ಕೋಟ್ರಂಗಡ ತಂಡವು ಕಟ್ಟೇಂಗಡ ವಿರುದ್ಧ 8 ವಿಕೆಟ್‍ಗಳ ಗೆಲುವು ಸಾಧಿಸಿತು. ಕಟ್ಟೇಂಗಡ ಮೊದಲು ಬ್ಯಾಟ್ ಮಾಡಿ 9 ವಿಕೆಟ್ ನಷ್ಟಕ್ಕೆ 48 ರನ್ ಗಳಿಸಿತು. ಕೋಟ್ರಂಗಡ ಪರ ಧೀರಜ್ 4 ವಿಕೆಟ್, ಪೊನ್ನಣ್ಣ 41 ರನ್ ಗಳಿಸಿದರು. ಕಟ್ಟೇಂಗಡ ಪ್ರಚನ್ 18 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಂಡರು.
ನಾಪೋಕ್ಲು ಕಳ್ಳೇಂಗಡ ತಂಡವು ಅಪ್ಪುಮಣಿಯಂಡ ವಿರುದ್ಧ 32 ರನ್‍ಗಳಿಂದ ಜಯ ಪಡೆಯಿತು. ಕಳ್ಳೇಂಗಡ 6 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿತು. ಮಿಥುನ್ 36 ರನ್, ಯದು ಪೆಮ್ಮಯ್ಯ 23 ರನ್ ಗಳಿಸಿದರು. ಅಪ್ಪುಮಣಿಯಂಡ 6 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿತು.
14 ರನ್ ಗಳಿಸಿದ ಅಪ್ಪುಮಣಿಯಂಡ ಬೋಪಣ್ಣ ಪಂದ್ಯ ಶ್ರೇಷ್ಠರಾದರು.
ಅಲ್ಲಂಗಡ ತಂಡವು ಮೋಟನಾಳೀರವನ್ನು 16 ರನ್‍ಗಳಿಂದ ಸೋಲಿಸಿತು. ಅಲ್ಲಂಗಡ 6 ವಿಕೆಟ್‍ಗೆ 71 ರನ್ ಗಳಿಸಿತು. ಮೋಟನಾಳೀರ 8 ವಿಕೆಟ್ ಕಳೆದುಕೊಂಡು 55 ರನ್ ಗಳಿಸಿ ಸೋಲನುಭವಿಸಿತು. ಅಲ್ಲಂಗಡ ಸ್ವಾಗತ್ 33 ರನ್ ಗಳಿಸಿದರು. ಮೋಟನಾಳಿರ ಶ್ಯಾಮ್ 10 ರನ್‍ಗಳಿಸಿ, ಬೌಲಿಂಗ್‍ನಲ್ಲಿ 3 ವಿಕೆಟ್ ಪಡೆದು ಪಂದ್ಯ ಪುರುಷರಾದರು.
ಬಾಳೆಯಡ ತಂಡವು ಕಂಬೇಯಂಡ ವಿರುದ್ಧ 10 ವಿಕೆಟ್‍ಗಳ ಗೆಲುವು ದಾಖಲಿಸಿತು. ಕಂಬೇಯಂಡ 8 ವಿಕೆಟ್ ಕಳೆದುಕೊಂಡು 37 ರನ್ ಸೇರಿಸಿತು. ಬಾಳೆಯಡ ನಿತಿನ್ 19 ರನ್ ಸೇರಿಸಿದರು. ವಿಕೆಟ್ ನಷ್ಟವಿಲ್ಲದೆ ಬಾಳೆಯಡ ಗೆಲುವು ಸಾಧಿಸಿತು. ಕಂಬೇಯಂಡ ಬೋಜಣ್ಣ 14 ರನ್ ಗಳಿಸಿ ಪಂದ್ಯ ಶ್ರೇಷ್ಠರಾದರು.
ಮೇಕತಂಡ ಗೈರು ಹಾಜರಾದ ಹಿನ್ನೆಲೆಯಲ್ಲಿ ಆಪಟ್ಟಿರ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.
ಚೌರೀರ (ಹೊದವಾಡ) ತಂಡವು ಚೊಟ್ಟೆಯಂಡ ವಿರುದ್ಧ 7 ವಿಕೆಟ್‍ಗಳ ಗೆಲುವು ಸಾಧಿಸಿತು. ಚೊಟ್ಟೆಯಂಡ 4 ವಿಕೆಟ್ ನಷ್ಟಕ್ಕೆ 47 ರನ್ ಸಂಪಾದಿಸಿತು. ಚೌರೀರ 3 ವಿಕೆಟ್ ಕಳೆದುಕೊಂಡು 48 ರನ್ ಗಳಿಸಿತು. ಚೌರೀರ ಶ್ಯಾಮ್ 20 ರನ್ ಗಳಿಸಿ ಮಿಂಚಿದರು. ಚೊಟ್ಟೆಯಂಡ ಕರಣ್ 10 ರನ್ ಬಾರಿಸಿ ಪಂದ್ಯ ಪುರುಷ ಪ್ರಶಸ್ತಿ ಪಡೆದರು.
ಮೈದಾನ 2 ರಲ್ಲಿ ಮೀದೇರೀರ ತಂಡವು ಕೋಚಮಂಡ ತಂಡವನ್ನು 9 ವಿಕೆಟ್‍ಗಳಿಂದ ಸೊಲಿಸಿತು. ಕೋಚಮಂಡ 8 ವಿಕೆಟ್‍ಗೆ 42 ರನ್ ಗಳಿಸಿತು. ಮೀದೇರೀರ ಕೇವಲ 1 ವಿಕೆಟ್ ಕಳೆದುಕೊಂಡು 43 ರನ್ ಗಳಿಸಿತು. ಮೀದೇರೀರ ಮಿಥುನ್ 17, ಪೂಣಚ್ಚ 14 ರನ್ ಗಳಿಸಿ ಮಿಂಚಿದರು. ಕೋಚಮಂಡ ರಕ್ಷಿತ್ 15 ರನ್ ಗಳಿಸಿ, 1 ವಿಕೆಟ್ ಪಡೆದು ಪಂದ್ಯ ಶ್ರೇಷ್ಠಕ್ಕೆ ಭಾಜನರಾದರು.
ಬಾಚೀರ (ಹರಿಹರ) ತಂಡವು ಪೊದುವಡ ತಂಡವನ್ನು 17 ರನ್‍ಗಳಿಂದ ಸೋಲಿಸಿತು. ಬಾಚೀರ 63 ರನ್‍ಗಳಿಸುವಷ್ಟರಲ್ಲಿ 10 ವಿಕೆಟ್ ಕಳೆದುಕೊಂಡಿತು. ಬಾಚೀರ ಚೇತನ್ 28, ಸುರಕ್ಷ್ 14 ರನ್ ಗಳಿಸಿದರು. ಬಾಚೀರ ಚೆಂಗಪ್ಪ 2 ವಿಕೆಟ್ ಪಡೆದರು. ಪೊದುವಡ 4 ವಿಕೆಟ್ ಕಳೆದುಕೊಂಡು 46 ರನ್ ಗಳಿಸಿತು. ಪೊದುವಡ ಗೌತಂ 18 ರನ್‍ಗಳಿಸಿದರು. ತಿಮ್ಮಯ್ಯ 4 ವಿಕೆಟ್ ಪಡೆದು ಪಂದ್ಯ ಶ್ರೇಷ್ಠರಾದರು.
ಬೊಳ್ಳಿಯಂಡ ತಂಡ ಗೈರು ಹಾಜರಾಗಿದ್ದರಿಂದ ದಾಸಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯುವಂತಾಯಿತು.
ಬೊಳ್ಯಪಂಡ ತಂಡ ತಾತಪಂಡ ವಿರುದ್ಧ 10 ವಿಕೆಟ್‍ಗಳ ಜಯ ಸಂಪಾಧಿಸಿತು. ತಾತಪಂಡ 6 ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿತು. ಬೊಳ್ಯಪಂಡ ದರ್ಶನ್ ಅರ್ಧ ಶತಕ ನೆರವಿನಿಂದ ವಿಕೆಟ್ ನಷ್ಟವಿಲ್ಲದೆ ಗೆಲುವು ದಾಖಲಿಸಿತು. ತಾತಪಂಡ ಮುದ್ದಣ್ಣ 30 ರನ್ ಗಳಿಸಿ ಪಂದ್ಯ ಶ್ರೇಷ್ಠರಾದರು.
ಹಂಚೇಟ್ಟೀರ ತಂಡವು ನಂದೀರ ವಿರುದ್ಧ 9 ವಿಕೆಟ್‍ಗಳ ಜಯ ಸಾಧಿಸಿತು. ನಂದೀರ 4 ವಿಕೆಟ್‍ಗಳಲ್ಲಿ 40 ರನ್ ಗಳಿಸಿತು. ಹಂಚೇಟ್ಟೀರ 4.3 ಓವರ್‍ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ನಂದೀರ ಜಮ್ಸಿ 16 ರನ್ ಗಳಿಸಿ ಪಂದ್ಯ ಪುರುಷೋತ್ತಮರಾದರು.
ಪಂದ್ಯಾವಳಿ ನಿರ್ದೇಶಕರಾಗಿ ಮಾಚಂಗಡ ದರ್ಶನ್ ಸೋಮಣ್ಣ, ತೀರ್ಪುಗಾರರ ತಂಡದ ನಿರ್ದೇಶಕ ಚೆಕ್ಕೇರ ನವೀನ್, ತಾಂತ್ರಿಕ ನಿರ್ದೇಶಕ ಕೊಕ್ಕೇಂಗಡ ರಂಜನ್, ತೀರ್ಪುಗಾರರಾಗಿ ಪೋಡಮಾಡ ಸುಕೇಶ್, ಆದೇಂಗಡ ಶಾಶ್ವತ್, ಚೆಕ್ಕೇರ ಬೋಪಣ್ಣ, ಆದೇಂಗಡ ನಿಶಿ, ಅಡ್ಡೇಂಗಡ ಆಕಾಶ್, ಬಾಚೀರ ರಾಜ, ಮುಕ್ಕಾಟೀರ ಕೌಶಿಕ್, ಕಳಕಂಡ ಬಬ್ಲಿ ಹಾಗೂ ಅಣ್ಣಳಮಾಡ ಭವನ್ ಅಳಮೇಂಗಡ ಸೋಮಯ್ಯ, ಅಳಮೇಂಗಡ ದರ್ಶನ್, ಅಳಮೇಂಗಡ ಮೋಹನ್, ಅಳಮೇಂಗಡ ದಿಪಿನ್, ಅಳಮೇಂಗಡ ದಿಲೀಪ್, ಕಾರ್ಯನಿರ್ವಹಿಸಿದರು. ಕಾಂಡೇರ ಡಾನ್ ಕುಶಾಲಪ್ಪ ಹಾಗೂ ತಿರುನೆಲ್ಲಿಮಾಡ ರಮಾನಂದ ವೀಕ್ಷಕ ವಿವರಣೆ ನೀಡಿದರು.