ಮಡಿಕೇರಿ, ಏ. 25: ನಗರದ ಗೌಳಿಬೀದಿ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದ 11ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ಪುಣ್ಯಾಹುತಿ, ಸುದರ್ಶನ ಹೋಮ, ನಂದಿ ಪುಣ್ಯಾಹ, ದೇವಿಪೂಜೆ, ಗಣಹೋಮ, ಮಹಾ ಮೃತ್ಯುಂಜಯ ಹೋಮ ಮತ್ತು ದೇವಿಪೂಜೆ, ಬ್ರಹ್ಮಕಲಶ ಪೂಜೆ, ದೇವಿಗೆ ಕಲಶಾಭಿಷೇಕ, ಚಂದನ ಭಸ್ಮ, ಕುಂಕುಮಾಭಿಷೇಕ, ಪುಷ್ಪಾಭಿಷೇಕ, ಪಂಚಗವ್ಯ, ಪಂಚಾಮೃತಾಭಿಷೇಕ, ಮಹಾಪೂಜೆ, ಮಹಾ ಮಂಗಳಾರತಿ ಬಳಿಕ ಅನ್ನಸಂತರ್ಪಣೆ ನಡೆಯಿತು.