ನಾಪೆÇೀಕ್ಲು, ಏ. 25: ನಾಪೆÇೀಕ್ಲು ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಬಿದ್ದಾಟಂಡ ಕಪ್ ಹಾಕಿ ನಮ್ಮೆಯ ಒಂಬತ್ತನೇ ದಿನದ ಪಂದ್ಯಾಟದಲ್ಲಿ 5ನೇ ತರಗತಿ ವಿದ್ಯಾರ್ಥಿ ಅಜ್ಜೇಟಿರ ಪೆÇನ್ನಣ್ಣ ಏಕೈಕ ಗೋಲು ದಾಖಲಿಸಿ ತನ್ನ ತಂಡದ ಗೆಲುವಿಗೆ ಕಾರಣವಾಗುವದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾದರೆ ತಮ್ಮ 89 ವರ್ಷ ಪ್ರಾಯದಲ್ಲಿ ಯುವಕರು ನಾಚುವಂತೆ ಆಟವಾಡಿದ ಬಾಚರಣಿಯಂಡ ನಾಣಯ್ಯ ಎಲ್ಲರ ಪ್ರಶಂಸೆಗೆ ಕಾರಣವಾದರು.
ಮಂಗಳವಾರ ನಡೆದ ಪಂದ್ಯಾಟದಲ್ಲಿ ಕಲ್ಲುಮಾಡಂಡ, ಚೌರೀರ, ಪುಲಿಯಂಡ, ಮಾದೆಯಂಡ, ಚೆಪ್ಪುಡಿರ, ಬೊವ್ವೇರಿಯಂಡ, ಕುಮ್ಮಂಡ, ಅಜ್ಜೇಟಿರ, ಕೋದೆಂಗಡ, ಮುರುವಂಡ, ಅಮ್ಮುಣಿಚಂಡ, ಮೂಕೊವಂಡ, ಅವರೆಮಾದಂಡ, ಬೊಟ್ಟೋಳಂಡ, ಚೇಂದಂಡ, ಕಂಗಾಂಡ ಚೆಕ್ಕೆರ, ಅರಮಣಮಾಡ, ಮುಕ್ಕಾಟಿರ, ಮಾದಂಡ, ಮಚ್ಚಾರಂಡ, ಕೊಂಗೇಟಿರ, ಮಾರ್ಚಂಡ ತಂಡಗಳು ಜಯಗಳಿಸಿ ಮುಂದಿನ ಸುತ್ತು ಪ್ರವೇಶಿಸಿವೆ.
ಮೊದಲ ಪಂದ್ಯದಲ್ಲಿ ಕಲ್ಲುಮಾಂಡಂಡ 4-0 ಗೋಲಿನ ಅಂತರದಿಂದ ಬಡುವಂಡ ತಂಡವನ್ನು ಪರಾಭವಗೊಳಿಸಿತು. ಕಲ್ಲುಮಾಡಂಡ ತಂಡದ ಪರ ಚಂಗಪ್ಪ, ಅಯ್ಯಪ್ಪ, ತರುಣ್ ತಮ್ಮಣ್ಣ, ಸೋಮಣ್ಣ ತಲಾ ಒಂದೊಂದು ಗೋಲು ದಾಖಲಿಸಿ ದರು. ಚೌರೀರ ತಂಡವು 1-0 ಗೋಲಿನ ಅಂತರದಿಂದ ಮುಂಡ್ಯೋಳಂಡ ತಂಡವನ್ನು ಸೋಲಿಸಿತು. ಚೌರೀರ ತಂಡದ ಪರ ದ್ಯಾನ್ ತಿಮ್ಮಣ್ಣ ಒಂದು ಗೋಲು ದಾಖಲಿಸಿದರು. ಪುಲಿಯಂಡ ತಂಡವು 3-2 ಅಂತರದಿಂದ ದೇಯಂಡ ತಂಡವನ್ನು ಸೋಲಿಸಿತು. ದೇಯಂಡ ತಂಡದ ಪರ ಸಂಜು ಸೋಮಯ್ಯ, ಚೇತನ್ ತಲಾ ಒಂದೊಂದು ಗೋಲು ದಾಖಲಿಸಿದರೆ, ಪುಲಿಯಂಡ ತಂಡದ ಪರ ಆಶೀಕ್ ಅಯ್ಯಪ್ಪ, ಪೊನ್ನಣ್ಣ, ದೀಪಕ್ ತಿಮ್ಮಣ್ಣ ತಲಾ ಒಂದೊಂದು ಗೋಲು ದಾಖಲಿಸಿದರು. ಮಾದೆಯಂಡ ತಂಡವು 1-0 ಗೋಲಿನ ಅಂತರದಿಂದ ಬಾಚರಣಿಯಂಡ ತಂಡವನ್ನು ಮಣಿಸಿತು. ಮಾದೆಯಂಡ ತಂಡದ ಪರ ಸಂಪಿ ಪೂಣಚ್ಚ ಒಂದು ಗೋಲು ದಾಖಲಿಸಿದರು. ತಂಡವು 5-0 ಗೋಲಿನ ಅಂತರದಿಂದ ನಂದೇಟಿರ ತಂಡವನ್ನು ಪರಾಭವಗೊಳಿಸಿತು. ಚೆಪ್ಪುಡಿರ ತಂಡದ ಪರ ನರೇನ್ ಎರಡು, ಚೇತನ್ ಎರಡು, ಅಯ್ಯಪ್ಪ ಒಂದು ಗೋಲು ದಾಖಲಿಸಿದರು.
ಬೊವ್ವೇರಿಯಂಡ ತಂಡವು2-0 ಗೋಲಿನಿಂದ ತಾತಂಡ ತಂಡವನ್ನು ಸೋಲಿಸಿತು. ಬೊವ್ವೇರಿಯಂಡ ತಂಡದ ಪರ ಜೀತನ್ ಕಾಳಪ್ಪ ಮತ್ತು ಸಚಿನ್ ಮುತ್ತಣ್ಣ ತಲಾ ಒಂದೊಂದು ಗೋಲು ದಾಖಲಿಸಿದರು. ಕುಮ್ಮಂಡ ತಂಡವು 2-0 ಗೋಲಿನಿಂದ ಹಂಚೇಟ್ಟಿರ ತಂಡವನ್ನು ಪರಾಭವಗೊಳಿಸಿತು. ಕುಮ್ಮಂಡ ತಂಡದ ಪರ ಅಯ್ಯಪ್ಪ, ಕವನ್ ಕಾರ್ಯಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಅಜ್ಜೇಟಿರ ತಂಡವು 1-0 ಗೋಲಿನಿಂದ ಕಿರಿಯಮಾಡ ತಂಡವನ್ನು ಮಣಿಸಿತು. ಅಜ್ಜೇಟಿರ ತಂಡದ ಪರ ಪೆÇನ್ನಣ್ಣ ಒಂದು ಗೋಲು ದಾಖಲಿಸಿದರು. ಕೋದೆಂಗಡ ತಂಡವು 1-0 ಗೋಲಿನ ಅಂತರದಿಂದ ಕುಂಡ್ರಂಡ ತಂಡವನ್ನು ಪರಾಭವಗೊಳಿಸಿತು. ಕೋದೆಂಗಡ ತಂಡದ ಪರ ದಿಲನ್ ಒಂದು ಗೋಲು ದಾಖಲಿಸಿದರು.
ಮುರುವಂಡ ತಂಡವು 1-0 ಗೋಲಿನ ಅಂತರದಿಂದ ಪಾರುವಂಗಡ ತಂಡವನ್ನು ಮಣಿಸಿತು. ಮುರುವಂಡ ತಂಡದ ಪರ ಮಿಥುನ್ ಅಣ್ಣಯ್ಯ ಒಂದು ಗೋಲು ದಾಖಲಿಸಿದರು. ಅಮ್ಮುಣಿಚಂಡ ತಂಡವು ಮುದ್ದಿಯಂಡ ತಂಡವನ್ನು 5-0 ಗೋಲಿನ ಅಂತರದಿಂದ ಪರಾಭವಗೊಳಿಸಿತು. ಅಮ್ಮುಣಿಚಂಡ ಸಂಜು ಸೋಮಯ್ಯ ತಂಡದ ಪರ ಮೂರು ಗೋಲು ದಾಖಲಿಸಿದರೆ, ಬೋಪಣ್ಣ, ರತನ್ ಸುಬ್ರಮಣಿ ಒಂದೊಂದು ಗೋಲು ದಾಖಲಿಸಿ ದರು. ಮೂಕೊವಂಡ ತಂಡವು 4-2 ಗೋಲುಗಳ ಅಂತರದಿಂದ ಬೊಟ್ಟಂಗಡ ತಂಡವನ್ನು ಸೋಲಿಸಿತು. ಮೂಕೊವಂಡ ತಂಡದ ಪರ ದರ್ಶನ್ ಮಾಚಯ್ಯ ಎರಡು. ಜ್ಞಾಪೆÇಕ್, ಅರ್ಷಿತ್ ತಲಾ ಒಂದೊಂದು ಗೋಲು ದಾಖಲಿಸಿದರೆ, ಬೊಟ್ಟಂಗಡ ತಂಡದ ಪರ ಪೆಮ್ಮಯ್ಯ, ಕಾವೇರಪ್ಪ ಒಂದೊಂದು ಗೋಲು ದಾಖಲಿಸಿದರು.
ಅವರೆಮಾದಂಡ ತಂಡವು ಕೇಳಪಂಡ ತಂಡವನ್ನು 4-1 ಗೋಲು ಅರವತ್ತಾದರೆ ಅರಳೋ... ಮರಳೋ... ಎಂಬ ಗಾದೆ ಮಾತೊಂದಿದೆ. ಆದರೆ 79 ವರ್ಷ ಪ್ರಾಯದಲ್ಲೂ ಯುವಕರು ನಾಚುವಂತೆ ಹಾಕಿ ಆಟವಾಡಬಹುದು ಎಂದು ನಿರೂಪಿಸಿದವರು ಬಾಚರಣಿಯಂಡ ನಾಣಯ್ಯ. ಅವರು 5ನೇ ತರಗತಿಯಿಂದ ಹಾಕಿ ಆಟದಲ್ಲಿ ತನ್ನನ್ನು ತೊಡಗಿಸಿ ಕೊಂಡಿದ್ದಾರೆ. ತನ್ನ ಹರೆಯದಲ್ಲಿ ಬಹುತೇಕ ಪಂದ್ಯಗಳನ್ನು ಆಡಿದ ಅವರಿಗೆ ಇಂದಿಗೂ ಹಾಕಿ ಆಟ ಎಂದರೆ ಅಚ್ಚುಮೆಚ್ಚು. ನಮ್ಮ ಕಾಲದಲ್ಲಿ ಹಾಕಿ ಆಡುವಾಗ ಹೆಚ್ಚಿನ ಕಾನೂನಿತ್ತು. ಇಂದು ಅದನ್ನೆಲ್ಲಾ ಸಡಿಲಿಸಲಾಗಿದೆ. ಈಗ ಗೋಲು ದಾಖಲಿಸುವದು ಬಲೂ ಸುಲಭ ಎನ್ನುತ್ತಾರೆ ನಾಣಯ್ಯ. ಅವರೊಂದಿಗೆ ಅವರ ಮೊಮ್ಮಗ ನಿಹಾಲ್ ಮತ್ತು ಕುಟುಂಬದ 9 ವರ್ಷ ಪ್ರಾಯದ ಶಶಾಂಕ್ ಸೋಮಯ್ಯ ಆಟವಾಡಿ ಎಲ್ಲರ ಗಮನ ಸೆಳೆದರುದೇವ್ ಬೆಳ್ಯಪ್ಪ ಎರಡು, ಪೂವಯ್ಯ, ಆದರ್ಶ್, ಶಿಯಾನ್, ಸಜನ್ ತಲಾ ಒಂದೊಂದು ಗೋಲು ದಾಖಲಿಸಿದರು. ಅರಮಣಮಾಡ ತಂಡವು ಕೊಚ್ಚೆರ ತಂಡವನ್ನು 6-1 ಗೋಲಿನಿಂದ ಪರಾಭವಗೊಳಿಸಿತು. ಮುಕ್ಕಾಟಿರ ತಂಡವು 1-0 ಗೋಲಿನಿಂದ ಚೀಯಕಪೂವಂಡ ತಂಡವನ್ನು ಸೋಲಿಸಿತು. ಮುಕ್ಕಾಟಿರ ತಂಡದ ಪರ ಪೊನ್ನಣ್ಣ ಒಂದು ಗೋಲು ದಾಖಲಿಸಿದರು.
ಮಾದಂಡ ತಂಡವು ಒಂದು ಗೋಲಿನಿಂದ ಬಾಚಮಂಡ ತಂಡವನ್ನು ಮಣಿಸಿತು. ಮಾದಂಡ ಕೇಶು ಕುಶಾಲಪ್ಪ ತಂಡದ ಪರ ಒಂದು ಗೋಲು ದಾಖಲಿಸಿದರು. ಕುಟ್ಟಂಡ ಮತ್ತು ಮಚ್ಚಾರಂಡ ತಂಡಗಳ ನಡುವಿನ ಪಂದ್ಯವು ಒಂದು-ಒಂದು ಗೋಲಿನಿಂದ ಡ್ರಾ ಆದ ಕಾರಣ ನಂತರ ನಡೆದ ಟೈಬ್ರೇಕರ್‍ನಲ್ಲಿ ಮಾರ್ಚಂಡ ತಂಡವು ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಕೊಂಗೇಟಿರ ತಂಡವು ಪೊರ್ಕೊವಂಡ ತಂಡವನ್ನು 4-0 ಗೋಲಿನ ಅಂತರದಿಂದ ಮಣಿಸಿತು. ಕೊಂಗೇಟಿರ ತಂಡದ ಪರ ಶವನ್ ಕಾರ್ಯಪ್ಪ, ಅಕ್ಕಮ್ಮ, ಅಪ್ಪಣ್ಣ, ತಮ್ಮಯ್ಯ ತಲಾ ಒಂದೊಂದು ಗೋಲು ದಾಖಲಿಸಿದರು. ಮಾರ್ಚಂಡ ತಂಡವು 1-0 ಗೋಲಿನಿಂದ ಅಪ್ಪಾರಂಡ ತಂಡವನ್ನು ಸೋಲಿಸಿತು. ಮಾರ್ಚಂಡ ತಂಡದ ಪರ ಯಶೀನ್ ನಾಚಪ್ಪ ಒಂದು ಗೋಲು ದಾಖಲಿಸಿದರು. -ಪಿ.ವಿ.ಪ್ರಭಾಕರ್