*ಗೋಣಿಕೊಪ್ಪಲು, ಏ. 26: ಬಿಲ್ಲವ ಜನಾಂಗದ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರ ಲೋಕಾರ್ಪಣೆಗೆ ಸಿದ್ಧತೆ ನಡೆದಿದೆ. ಗೋಣಿಕೊಪ್ಪ, ವೀರಾಜಪೇಟೆ ಮುಖ್ಯರಸ್ತೆಯ ಬಿಟ್ಟಂಗಾಲ ಗ್ರಾಮದಲ್ಲಿ ಒಂದು ಎಕರೆ ಜಾಗದಲ್ಲಿ ರೂ. 18 ಲಕ್ಷ ವೆಚ್ಚದಲ್ಲಿ ಮಂದಿರ ನಿರ್ಮಾಣಗೊಂಡಿದೆ.

ಸಂಘದ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್ ಹಾಗೂ ಆಡಳಿತ ಮಂಡಳಿಯ ಪರಿಶ್ರಮದಿಂದ ಬಿಲ್ಲವ ಜನಾಂಗದ ಏಳಿಗೆಗಾಗಿ ಗುರು ಮಂದಿರ ನಿರ್ಮಾಣಗೊಂಡಿದೆ.

ಮೇ 1 ರಂದು ಗುರುಮಂದಿರದ ಉದ್ಘಾಟನಾ ಸಮಾರಂಭ ನಡೆಯಲಿದೆ. 8 ಗಂಟೆಗೆ ವೀರಾಜಪೇಟೆ ಮಾರಿಯಮ್ಮ ದೇವಸ್ಥಾನದಿಂದ ಶ್ರೀ ನಾರಾಯಣ ಗುರುಗಳ ಪ್ರತಿಮೆಯನ್ನು ಹೊತ್ತು ಚಂಡೆವಾಧ್ಯ, ಕಲಶದೊಂದಿಗೆ ಮೆರವಣಿಗೆ ನಡೆಯಲಿದೆ. ನಂತರ ಅರಮೇರಿ-ಕಳಂಚೇರಿ ಮಠದ ಸ್ವಾಮಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮೂರ್ತಿ ಪ್ರತಿಷ್ಠಾಪನೆ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್, ಲೋಕಸಭಾ ಸದಸ್ಯ ಪ್ರತಾಪ್ ಸಿಂಹ, ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಜಿ.ಪಂ. ಸದಸ್ಯ ಕಲಾವತಿ ಪೂವಪ್ಪ, ಉದ್ಯಮಿ ಪ್ರಕಾಶ್ ರಾಮಯ್ಯ ಪೂಜಾರಿ, ಬಿಲ್ಲವ ಸೇವಾ ಸಂಘದ ಜಿಲ್ಲಾಧ್ಯಕ್ಷ ರಘು ಆನಂದ, ತುಳುವರ ಕೂಟ ಸ್ಥಾಪಕ ಅಧ್ಯಕ್ಷ ಶೇಕರ್ ಭಂಡಾರಿ, ಗೋಲ್ಡನ್ ರಾಕ್ಸ್ ಮಾಲೀಕ ಸಜೇಶ್ ಭರತನ್, ಎಸ್.ಎನ್.ಡಿ.ಪಿ. ಜಿಲ್ಲಾಧ್ಯಕ್ಷ ವಾಸು, ತಾಲೂಕು ಅಧ್ಯಕ್ಷ ನಾರಾಯಣ, ಹೈಕೋರ್ಟ್ ವಕೀಲ ಮುನಿರಾಜು, ಬಿಲ್ಲವ ಸೇವಾ ಸಮಾಜ ಮಡಿಕೇರಿ ತಾಲೂಕು ಅಧ್ಯಕ್ಷ ರಾಜಶೇಕರ್, ಕುಶಾಲನಗರ ಅಧ್ಯಕ್ಷ ಸತೀಶ್ ಕುಂದರ್, ಸೋಮವಾರಪೇಟೆ ಅಧ್ಯಕ್ಷ ಕೃಷ್ಣಪ್ಪ, ಸುಂಟಿಕೊಪ್ಪ ಅಧ್ಯಕ್ಷ ಮಣಿ ಮುಕೇಶ್ ಉಪಸ್ಥಿತರಿರುತ್ತಾರೆ.

ತಾಲೂಕು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್ ಪೂಜಾರಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಮಂದಿರ ಸಮೀಪವೇ ಕಲ್ಯಾಣ ಮಂಟಪ ನಿರ್ಮಿಸುವ ಕನಸು ಹೊಂದಿದ್ದು, ಜನಾಂಗಕ್ಕೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.

ಕಾರ್ಯದರ್ಶಿ ಜನಾರ್ಧನ, ಕೋಶಾಧಿಕಾರಿ ಪುರುಷೋತ್ತಮ, ಕ್ರೀಡಾಧ್ಯಕ್ಷ ವಿ.ಎಸ್. ಸತೀಶ್, ಉಪಾಧ್ಯಕ್ಷ ಬಿ.ಎಂ. ಗಣೇಶ್, ಗೌರವ ಅಧ್ಯಕ್ಷ ಬಿ. ರಾಜ ವಿವರಣೆ ಸಂದರ್ಭ ಹಾಜರಿದ್ದರು.

ಕ್ರೀಡಾಕೂಟ: ತಾ. 29 ಹಾಗೂ 30 ರಂದು 16ನೇ ವರ್ಷದ ಮಹಾಸಭೆ ಮತ್ತು ಕ್ರೀಡಾಕೂಟ ಸಮಾರಂಭ ನಡೆಯಲಿದೆ.

ತಾ. 30 ರಂದು ಬೆಳಿಗ್ಗೆ 9.30.ಕ್ಕೆ ಕ್ರೀಡಾಕೂಟ ಉದ್ಘಾಟನೆಯನ್ನು ಗೋಣಿಕೊಪ್ಪ ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಡಿ. ಮುಕುಂದ ಪೂಜಾರಿ ನೆರವೇರಿಸಲಿದ್ದಾರೆ. ಕ್ರಿಕೆಟ್, ಹಗ್ಗಜಗ್ಗಾಟ, ಪುರುಷ ಹಾಗೂ ಮಹಿಳೆಯರಿಗೆ ವಾಲಿಬಾಲ್ ಮತ್ತು ಥ್ರೋಬಾಲ್ ಹಾಗೂ 5 ರಿಂದ 11 ವರ್ಷದ ಮಕ್ಕಳಿಗೆ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕ್ರಿಕೆಟ್ ಕೂಟವನ್ನು ತಾ. 29 ರಂದು ಬೆಳಿಗ್ಗೆ 8 ಗಂಟೆಗೆ ವೀರಾಜಪೇಟೆ ಸಂತ ಅನ್ನಮ್ಮ ಶಾಲೆಯಲ್ಲಿ ನಡೆಲಿದೆ.

ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್ ಪೂಜಾರಿ ಅಧ್ಯಕ್ಷತೆಯಲ್ಲಿ, ಬಿಟ್ಟಂಗಾಲ ಗ್ರಾ.ಪಂ. ಅಧ್ಯಕ್ಷ ಪುಚ್ಚಿಮಂಡ ಸಾಬಾ ಬೆಳ್ಯಪ್ಪ, ಸದಸ್ಯ ಬಿ.ಆರ್. ದಿನೇಶ್, ಪುಷ್ಪವಲ್ಲಿ, ಉದ್ಯಮಿ ಬಿ.ಆರ್. ಬೋಜಪ್ಪ, ಧಾನಿಗಳಾದ ಕುಟ್ಟಿಚಂಡ ಚಂಗಪ್ಪ, ಪ್ರೌಢಶಾಲಾ ಶಿಕ್ಷಕಿ ರೇವತಿ ಪುರುಷೋತ್ತಮ, ಅಂತರರಾಷ್ಟ್ರೀಯ ಕ್ರೀಡಾಪಟು ಜಾಜಿ ಮೋಹನ್ ಭಾಗವಹಿಸಲಿದ್ದಾರೆ.

- ಎನ್.ಎನ್. ದಿನೇಶ್